ರೈತರಿಗೆ ಪಿಎಂ ನಿಧಿ ಜೊತೆ ರಾಜ್ಯದ ಕಂತೂ ಬಿಡುಗಡೆ   2ನೇ ಕಂತಿನ .2000ಕ್ಕಾಗಿ 1007 ಕೋಟಿ ಬಿಡುಗಡೆ  

ಬೆಂಗಳೂರು(ಡಿ.02): ಪಿಎಂ ಕಿಸಾನ್‌ ಯೋಜನೆಯಡಿ (PM Kisan Yojana) ಫಲಾನುಭವಿಗಳಿಗೆ ನೆರವು ನೀಡುವ ರಾಜ್ಯ ಸರ್ಕಾರವು (Govt of Karnataka) ಆರ್ಥಿಕ ವರ್ಷದ ಎರಡನೇ ಕಂತಿನ ನೆರವಿಗಾಗಿ 1007.18 ಕೋಟಿ ರು. ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ (Prime Minister NarendraModi) ಅವರು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 10ನೇ ಕಂತಿನ ನೆರವು ಬಿಡುಗಡೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ವರ್ಚುವಲ್‌ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಭಾಗವಹಿಸಿದರು. ಯೋಜನೆಯಡಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ವಾರ್ಷಿಕ 4 ಸಾವಿರ ರು. ನೆರವು ನೀಡುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಕಂತಿನ ನೆರವಿಗೆ 1007.18 ಕೋಟಿ ರು. ರಾಜ್ಯ ಸರ್ಕಾರ ಬಿಡುಗಡೆ ಮಾಡಿ ರೈತರ (Farmers) ಖಾತೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 54.52 ಲಕ್ಷ ರೈತರು ಈವರೆಗೆ ಒಂದು ಕಂತಿನ ನೆರವನ್ನು ಪಡೆದಿದ್ದಾರೆ.

ಕೇಂದ್ರ ಸರ್ಕಾರವು 8022.69 ಕೋಟಿ ರು. ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು (Karnataka Govt) 2850.54 ಕೋಟಿ ರು. ಬಿಡುಗಡೆ ಮಾಡಿದೆ. ಸಾಧ್ಯವಾದಷ್ಟುಯೋಜನೆಯಡಿ ಎಲ್ಲಾ ಪಾವತಿಗಳನ್ನು ಆಧಾರ್‌ ಆಧಾರಿತ ಡಿಬಿಟಿ ಮೂಲಕ ಮಾಡಲಾಗುತ್ತದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾಡು ಆಧಾರ್‌ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ಲಭ್ಯವಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಇತರರು ಉಪಸ್ಥಿತರಿದ್ದರು.

ಪಿಎಂ ಕಿಸಾನ್ ಯೋಜನಾ ಹೀಗೆ ಚೆಕ್ ಮಾಡಿ : ಕೊರೋನಾ ಎರಡನೇ ಅಲೆಯಿಂದ ನಲುಗುತ್ತಿರುವ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದು ಬಹುದೊಡ್ಡ ಸವಾಲಾಗಿದೆ. ಈ ಸಂಕಟದ ನಡುವೆಯೂ ಭಾರತದ ರೈತರಿಗೆ ಒಂದು ಶುಭ ಸಮಾಚಾರ ಲಭಿಸಿದೆ. ಪಿಎಂ ಮೋದಿ ಮೇ. 14 ರಂದು 'ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಸ್ಕೀಂ'ನ ಎಂಟನೇ ಕಂತು ಬಿಡುಗಡೆಗೊಳಿಸಲಿದ್ದಾರೆ. ಇದರಡಿ 9.5 ಕೋಟಿ ರೈತರಿಗೆ 19,000 ಕೋಟಿ ರೂಪಾಯಿ ಲಾಭ ಸಿಗಲಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಿಎಂ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ರೈತರೊಂದಿಗೆ ಸಂವಾದ ನಡೆಸಿ ಬಳಿಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು pmindiawebcast.nic.in ಮೂಲಕ ವೀಕ್ಷಿಸಬಹುದಾಗಿದೆ.

ಕೃಷಿ ಚಟುವಟಿಕೆ ಮೇಲೆ ಕೊರೋನಾ ಕರಿನೆರಳು

ಹೀಗೆ ಪರಿಶೀಲಿಸಿ

ರಾಜ್ಯ ಸರ್ಕಾರಗಳು Rft (Request For Transfer) ಸಹಿ ಮಾಡಿವೆ. ಇದರೊಂದಿಗೆ ಕೇಂದ್ರ ಸರ್ಕಾರ Fto (Fund Transfer Order) ಜನರೇಟ್ ಮಾಡಿದೆ. ಅಂದರೆ ರೈತರ ಖಾತೆಗೆ ಯಲ್ಲಿ Rft Signed by State For 8th Installment ಎಂದು ಬರೆದಿರುವುದನ್ನು ನೋಡಬಹುದಾಗಿದೆ. PMkisan.gov.in ನಲ್ಲಿ ರೈತರು ತಮ್ಮ ಖಾತೆಗೆ ಲಾಗಿನ್ ಆಗಿ ಇದರ ಡೀಟೈಲ್ಸ್ ನೋಡಬಹುದು. ಇಲ್ಲಿ ಲಾಗಿನ್ ಆಗುತ್ತಿದ್ದಂತೆಯೇ ಫಾರ್ಮರ್‌ ಕಾರ್ನರ್‌ನಲ್ಲಿ Beneficiary List ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಹೀಗೆ ಎಲ್ಲವನ್ನೂ ಆಯ್ಕೆ ಮಾಡಿ, Get Report ಕ್ಲಿಕ್ ಮಾಡಿದರೆ ಎಲ್ಲಾ ವಿವರ ನೋಡಬಹುದಾಗಿದೆ. 

ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡಿದ ಕೊರೋನಾ!

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಸ್ಕೀಂನ ಲಾಭವೇನು?

ಈ ಸ್ಖೀಂಗೊಳಪಡುವ ರೈತರಿಗೆ ಸರ್ಕಾರ ಕಡಿಮೆ ಬೆಲೆಗೆ ಸಾಲ ನೀಡುತ್ತದೆ. ಈ ಲೋನ್ ಆತ್ಮನಿರ್ಭರ ಭಾರತ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ನೀಡಲಾಗುತ್ತದೆ. ಹೀಗಾಗಿ KCC ಮಾಡಲಿಚ್ಛಿಸುವವರು ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ಲೈ ಮಾಡಬಹುದು.