Asianet Suvarna News Asianet Suvarna News

ನಮ್ಮೋಣಿಗೆ ಯಾಕ್‌ ಬಂದ್ರಿ ? ನಾವು ಕರೆಂಟ್‌ ಬಿಲ್‌ ಕಟ್ಟಲ್ಲಂದ್ರೆ ಕಟ್ಟಲ್ಲ : ಜನ ಪಟ್ಟು!

 ಚಿತ್ರದುರ್ಗದ ಬೆನ್ನಲ್ಲೇ ಇದೀಗ ರಾಜ್ಯದ ಇತರೆ ಜಿಲ್ಲೆಗಳಿಗೂ ‘ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ’ ಎಂಬ ಕೂಗು ವಿಸ್ತರಿಸಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ನಾವ್ಯಾಕೆ ವಿದ್ಯುತ್‌ ಬಿಲ್‌ ಕಟ್ಟಬೇಕು? ಎಂದು ಸಾರ್ವಜನಿಕರು ಪ್ರಶ್ನಿಸಲು ಆರಂಭಿಸಿದ್ದಾರೆ.

karnataka election results we dont pay electiricity bill  people are protesting in many parts of karnataka rav
Author
First Published May 18, 2023, 6:11 AM IST

ಬೆಂಗಳೂರು (ಮೇ.18) : ಚಿತ್ರದುರ್ಗದ ಬೆನ್ನಲ್ಲೇ ಇದೀಗ ರಾಜ್ಯದ ಇತರೆ ಜಿಲ್ಲೆಗಳಿಗೂ ‘ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ’ ಎಂಬ ಕೂಗು ವಿಸ್ತರಿಸಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ನಾವ್ಯಾಕೆ ವಿದ್ಯುತ್‌ ಬಿಲ್‌ ಕಟ್ಟಬೇಕು? ಎಂದು ಸಾರ್ವಜನಿಕರು ಪ್ರಶ್ನಿಸಲು ಆರಂಭಿಸಿದ್ದಾರೆ.

ಚಿತ್ರದುರ್ಗ(Chitradurga) ಜಿಲ್ಲೆಯ ಜಾಲಿಕಟ್ಟೆಯಲ್ಲಿ ಮೀಟರ್‌ ರೀಡರ್‌ (Meter Reader)ಅನ್ನು ಜನ ತರಾಟೆಗೆ ತೆಗೆದುಕೊಂಡ ವಿಡಿಯೋ ಇತ್ತೀಚೆಗಷ್ಟೇ ವೈರಲ್‌(Viral video) ಆಗಿತ್ತು. ಇದರ ಬೆನ್ನಲ್ಲೇ ಇದೀಗ ಚಾಮರಾಜನಗರ, ಉಡುಪಿ, ರಾಯಚೂರು ಹಾಗೂ ಕಲಬುರಗಿಯಲ್ಲೂ ಜನ ವಿದ್ಯುತ್‌ ಬಿಲ್‌ ಕಟ್ಟಲ್ಲ ಎಂದು ಕೂಗೆಬ್ಬಿಸಿದ್ದಾರೆ. ಮೀಟರ್‌ ರೀಡರ್‌ಗಳು ಮನೆಗೆ ಬಂದು ಬಿಲ್‌ ಕೊಡುತ್ತಿದ್ದಂತೆ, ನಾವು ಬಿಲ್‌ ಪಾವತಿಸಲ್ಲ ಎಂದು ಆಕ್ಷೇಪವೆತ್ತಿ ವಾಪಸ್‌ ಕಳುಹಿಸುತ್ತಿದ್ದಾರೆ.

ಕರೆಂಟ್‌ ಬಿಲ್‌ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ

ನಮ್ಮೋಣಿಗೆ ಯಾಕ್‌ ಬಂದೀರಿ?: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್‌ ಬಿಲ್‌ ನೀಡಲು ತೆರಳಿದ್ದ ಸೆಸ್‌್ಕ ಸಿಬ್ಬಂದಿಯನ್ನು ರೈತ ಮುಖಂಡರು ಸೇರಿಕೊಂಡು ಆವಾಜ್‌ ಹಾಕಿ ವಾಪಸ್‌ ಕಳುಹಿಸಿದ್ದಾರೆ. ಉಚಿತ ವಿದ್ಯುತ್‌ ಗ್ಯಾರಂಟಿಯನ್ನು ಕಾಂಗ್ರೆಸ್‌ ಸರ್ಕಾರ ತಕ್ಷಣ ಜಾರಿಗೆ ತರಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ಇನ್ನು ಕಲಬುರಗಿ ನಗರದ ತಾರಾ¶ೌಲ್‌ ಬಡಾವಣೆಯಲ್ಲಿ, ‘ನಮ್ಮೋಣಿಗೆ ಯಾಕ್‌ ಬಂದೀರಿ? ನಾವು ಬಿಲ್‌ ಕೊಡೋದಿಲ್ಲ, ಕಾಂಗ್ರೆಸ್‌ ಸರ್ಕಾರ ಬಂದದ, ಕರæಂಟ್‌ ಫ್ರೀ ಅಂದಾರಲ್ರಿ, ನಿಮಗ ಗೊತ್ತಿಲ್ಲೇನು? ಗೊತ್ತಿದ್ದೂ ಯಾಕೆ ಮೀಟರ್‌ ಓದಿ ಬಿಲ್‌ ಕೊಡಾಕತ್ತೀರಿ?’ ಎಂದು ಜೆಸ್ಕಾಂ ಮೀಟರ್‌ ರೀಡರ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವೆಡೆ ಮೀಟರ್‌ ರೀಡರ್‌ ಮತ್ತು ಬಡಾವಣೆ ನಿವಾಸಿಗಳ ನಡುವೆ ವಾಗ್ವಾದವೂ ನಡೆದಿದೆ ಎನ್ನಲಾಗಿದೆ.

ಬಸನಗೌಡ ಹೇಳ್ಯಾರಾ, ಬಿಲ್‌ ಕಟ್ಟಲ್ಲ!: ರಾಯಚೂರಿನ ಮಸ್ಕಿ ಕ್ಷೇತ್ರದ ಅಂಕುಶದೊಡ್ಡಿ ಗ್ರಾಮದಲ್ಲಿ ಮಹಿಳೆಯೊಬ್ಬರು ಜೆಸ್ಕಾಂ ಸಿಬ್ಬಂದಿಗೆ ‘ಕರೆಂಟ್‌ ಫ್ರೀ ಅಂದಿದ್ದಾರೆ ಬಿಲ್‌ ಕಟ್ಟಲ್ಲ’ ಎಂದು ಜೋರು ಧ್ವನಿಯಲ್ಲೇ ಆಕ್ಷೇಪವೆತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚುನಾವಣೆ ಪ್ರಚಾರದ ವೇಳೆ ಶಾಸಕ ಬಸನಗೌಡ ಅವರು ಉಚಿತ ವಿದ್ಯುತ್‌ ಕೊಡ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ವೇಳೆ ಒಂದು ಗೆದ್ದ ಮೇಲೆ ಇನ್ನೊಂದು ಮಾಡ್ತಾರಾ? ನಾವಂತು ಬಿಲ್‌ ಕಟ್ಟಲ್ಲ ಎಂದು ಮಹಿಳೆ ಆಕ್ಷೇಪ ಹೊರಹಾಕಿದ್ದಾರೆ.

ರಾಜ್ಯದ ಎಲ್ಲ ಕಡೆ ಸಮಸ್ಯೆ ಉಂಟಾಗಿಲ್ಲ

ವಿದ್ಯುತ್‌ ಬಿಲ್‌ ಪಾವತಿಸುವ ವಿಚಾರದಲ್ಲಿ ರಾಜ್ಯದ ಅಲ್ಲೊಂದು ಇಲ್ಲೊಂದು ವಿರೋಧದ ಕೂಗು ಕೇಳಿ ಬರುತ್ತಿದ್ದರೂ ಈವರೆಗೆ ಇದು ಎಸ್ಕಾಂಗೆ ದೊಡ್ಡಮಟ್ಟದ ಸಮಸ್ಯೆಯೇನೂ ಸೃಷ್ಟಿಸಿಲ್ಲ. ಬಹುತೇಕ ಕಡೆ ವಿದ್ಯುತ್‌ ಬಿಲ್‌ ವಸೂಲಿಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಎಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಬಿಲ್ ದುಬಾರಿಯಾಗುತ್ತಿದೆಯಾ? ಅರ್ಧಕ್ಕೆ ಇಳಿಸಲು ಈ ಪವರ್ ಸೇವರ್ ಅಳವಡಿಸಿ!

ಜೂನ್‌ ತಿಂಗಳಿಂದ ಬಿಲ್‌ ಕಟ್ಟಲ್ಲ ಪೋಸ್ಟರ್‌!

ಉಡುಪಿಯ ಸಮಾಜ ಸೇವಕ ವಾಸುದೇವ ಭಟ್‌ ಅವರು ‘ಜೂನ್‌ ತಿಂಗಳಿನಿಂದ ವಿದ್ಯುತ್‌ ಬಿಲ್‌ ಕೊಡಬೇಡಿ’ ಎಂದು ಬರೆದು ತಮ್ಮ ವಿದ್ಯುತ್‌ ಮೀಟರ್‌ ಬೋರ್ಡಿಗೆ ಪೋಸ್ಟರ್‌ ಅಂಟಿಸಿದ್ದಾರೆ. ಕಾಂಗ್ರೆಸ್‌ ಘೋಷಿಸಿರುವ 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ನಾನೂ ಅರ್ಹ ಫಲಾನುಭವಿ. ಹೀಗಾಗಿ ನಾನು ಜೂನ್‌ ತಿಂಗಳಿಂದ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios