Asianet Suvarna News Asianet Suvarna News

ಕಾಂಗ್ರೆಸ್ ಮುಖಂಡರ ವಿರುದ್ಧ ನಿಲ್ಲದ ಐಟಿ ದಾಳಿ, ಖರ್ಗೆ ಆಪ್ತ ಸೇರಿ ಹಲವು ಮುಖಂಡರಿಗೆ ಐಟಿ ಶಾಕ್!

ಕರ್ನಾಟಕ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮುಂದುವರೆದಿದೆ. ಮೇ.7ರಂದು ರಾಜ್ಯದ ಹಲವು ಕಡೆ ಕೈ ನಾಯಕರ ಮೇಲೆ ದಾಳಿ ನಡೆದಿದೆ.

karnataka Election 2023 it raids against congress leaders gow
Author
First Published May 7, 2023, 11:32 AM IST

ಬೆಂಗಳೂರು (ಮೇ.7):  ಕರ್ನಾಟಕ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮುಂದುವರೆದಿದೆ. ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮೇಲೆ ಐಟಿ ದಾಳಿ ನಡೆದಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾನ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಬಿಟ್ಟು ಅರವಿಂದ್ ಚೌಹಾನ್ ಕಾಂಗ್ರೆಸ್ ಸೇರಿದ್ದ. ಮೇ.6ರಂದು  ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ  ಅಧಿಕಾರಿಗಳ ದಾಳಿ  ನಡೆದಿದೆ. ರಾತ್ರಿ ಹನ್ನೊಂದು ಗಂಟೆವರಗೆ ಪರಿಶೀಲನೆ ನಡೆಸಿ  ಐಟಿ  ಅಧಿಕಾರಿಗಳು ತೆರಳಿದ್ದಾರೆ. ಎಲ್ಲ ಕಡೆ ದಾಖಲಾತಿ ಗಳ ಪರಿಶೀಲನೆ ನಡೆಸಿದ್ದಾರೆ.

ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮೇಲೆ ಐಟಿ ರೈಡ್:
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮೇಲೆ ಐಟಿ ದಾಳಿ ನಡೆದಿದ್ದು, ಬ್ಯಾಡಗಿ ಪಟ್ಟಣದಲ್ಲಿರುವ ವಿದ್ಯಾನಗರದ ನಿವಾಸದ ಮೇಲೆ  ದಾಳಿ ನಡೆಸಿ ಐಟಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ.  ಚನ್ನಬಸಪ್ಪ ಹುಲ್ಲತ್ತಿ ಮಾಜಿ ಎಪಿಎಂಸಿ ಅಧ್ಯಕ್ಷರಾಗಿದ್ದಾರೆ. ಬೆಳಿಗ್ಗೆಯಿಂದಲೂ ನಿರಂತರವಾಗಿ ಶೋಧ ಮುಂದುವರೆದಿದ್ದು,  ಸಿ.ಕೆ.ಎಲ್ ಇ ಆಂಡ್ ಸನ್ಸ್ ಮೇಣಸಿನಕಾಯಿ ದಲಾಲ್ ಅಂಗಡಿಯಲ್ಲಿ ಚನ್ನಬಸಪ್ಪ ಕೆಲಸ ಮಾಡುತ್ತಿದ್ದ . ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ನಿಕಟ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈತ ಬ್ಯಾಡಗಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮದ ಉಸ್ತುವರಿ ಚನ್ನಬಸಪ್ಪ ಹೆಚ್ಚಾಗಿ ನೋಡಿಕೊಳ್ತಾ ಇದ್ರು ಎನ್ನಲಾಗಿದೆ. ಕೋಟ್ಯಾಂತರ ರೂಪಾಯಿ ದಾಖಲೆ ಇಲ್ಲದ ಹಣ ಪತ್ತೆ ಶಂಕೆ ಇದೆ. ಹೀಗಾಗಿ ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಮ್ಮವಾರಿ ಸಂಘದ ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ: ಬಿಜೆಪಿ ನಾಯಕರ ಆಪ್ತನಿಗೆ ಸಂಕಷ್ಟ

ಮಂಡ್ಯದಲ್ಲಿ ಕೈ ಅಭ್ಯರ್ಥಿಗೆ ಶಾಕ್!
ಮಂಡ್ಯದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಬೆಂಬಲಿಗರ ಮನೆ ಮೇಲೆ ಬೆಳ್ಳಂ ಬೆಳಗ್ಗೆ  ಚುನಾವಣೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.  ಬೆಂಬಲಿಗರ ಮನೆ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ಮಾಡಿದೆ. ಮದ್ದೂರು ಪಟ್ಟಣದ ದೊಡ್ಡಿ ಬೀದಿಯ ಸುರೇಶ್ ಬಾಬು ಉದಯ್ ಬೆಂಬಲಿಗನಾಗಿದ್ದು, ಬೆಳಿಗ್ಗೆ 5.30ಕ್ಕೆ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಮನೆಯಲ್ಲಿ ಬರೋಬ್ಬರಿ 2 ಕೋಟಿ ಗೂ ಹೆಚ್ಚು ಹಣ ಪತ್ತೆಯಾಗಿದೆ. ಈ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ  ಹಣವನ್ನು ಮದ್ದೂರು ಪೊಲೀಸರ ವಶಕ್ಕೆ ಚುನಾವಣಾಧಿಕಾರಿಗಳು ನೀಡಿದ್ದಾರೆ. ಜೊತೆಗೆ ಕೈ ಅಭ್ಯರ್ಥಿ ಕದಲೂರು ಉದಯ್ ಬೆಂಬಲಿಗ ಸುರೇಶ್ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರೇಶ್ ಜೊತೆಗೆ ಉದಯ್ ಅವರ ಮತ್ತೋರ್ವ ಬೆಂಗಲಿಗನ ಮೇಲೂ ಐಟಿ ದಾಳಿ ನಡೆದಿದೆ. ರಮೇಶ್ ಎಂಬಾತನ ಮನೆಯ ಮೇಲೆ ದಾಳಿ ನಡೆದಿದ್ದು, ಮನೆಯ ಅಟ್ಟದ ಮೇಲೆ 3.50 ಲಕ್ಷ  ದುಡ್ಡು ಪತ್ತೆಯಾಗಿದೆ.

Karnataka It Raids: ಆಪ್ತ ಫೈನಾನ್ಶಿರ್​​ಗಳಿಗೆ ಸಂಕಷ್ಟ, ಬಿಜೆಪಿ ವಿರುದ್ಧ ಡಿಕೆಶಿ ಕೆಂಡ!

ಬಾಗಲಕೋಟೆಯಲ್ಲೂ ಐಟಿ ದಾಳಿ:
ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಕೂಡ ಐಟಿ ದಾಳಿ ನಡೆದಿದೆ.  ಇಲಕಲ್ ಪಟ್ಟಣದ ಗ್ರಾನೈಟ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ. ವೆಂಕಟೇಶ್ ಸಾಕಾ ಮತ್ತು ರಾಜು ಬೋರಾ ಎಂಬುವವರ ಮನೆ ಮೇಲೆ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

Follow Us:
Download App:
  • android
  • ios