ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ನಡೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ಅಸ್ತು ಎಂದಿದೆ. ಮತದಾನ ಮಾಡಿದವರಿಗೆ ಫ್ರೀ ಫುಡ್ ಕೊಡಲು ಒಪ್ಪಿಗೆ ಸೂಚಿಸಿದೆ.
ಬೆಂಗಳೂರು (ಮೇ.9): ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಿದೆ. ನಾಳೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಸದುದ್ದೇಶದಿಂದ ಕೆಲವೊಂದು ಹೊಟೇಲುಗಳಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಆಹಾರ ನೀಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿತ್ತು ಆದರೆ ಕೊನೆಯ ಗಳಿಗೆಯಲ್ಲಿ BBMP ಯವರು ಈ ಉತ್ತಮ ಕಾರ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿತ್ತು.
ಇದಕ್ಕೆ ಬಿಬಿಎಂಪಿ ನಡೆ ಪ್ರಶ್ನಿಸಿ ಹೋಟೆಲ್ ಮಾಲೀಕರ ಸಂಘಟನೆ ತುರ್ತು ಅರ್ಜಿಸಿ ಸಲ್ಲಿಸಿ ಕೋರ್ಟ್ ಕದ ತಟ್ಟಿತ್ತು. ನಾಳೆ ಉಚಿತ ಊಟ ನೀಡದಂತೆ ಬಿಬಿಎಂಪಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ತುರ್ತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮತದಾನದ ನಂತರ ಊಟ ನೀಡಲು ಅನುಮತಿ ನೀಡಿದೆ. ಮತದಾನ ಉತ್ತೇಜನಕ್ಕೆ ಉಚಿತ ಊಟ ನೀಡಲು ಅವಕಾಶ ಕಲ್ಪಿಸಿದೆ. ನ್ಯಾ. ಶಿವಶಂಕರೇ ಗೌಡ ಅವರಿಂದ ಈ ಆದೇಶ ಹೊರಬಿದ್ದಿದೆ. ಈ ಮೂಲಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಬಿಬಿಎಂಪಿ ರದ್ದು ಮಾಡಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು.
ಕಾನೂನು ಉಲ್ಲಂಘಿಸಿ ಬಿಜೆಪಿ ಅಭ್ಯರ್ಥಿ ಬಹಿರಂಗ ಪ್ರಚಾರ, ಕೇಳಲು ಹೋದ ಪಿಎಸ್‌ಐ ಮೇಲೆ
ಚುನಾವಣಾ ಸಮಯದಲ್ಲಿ ಹೋಟೆಲ್ ನಲ್ಲಿ ಆಫರ್ ಕೊಡುವುದು ಕಾನೂನು ಅಪರಾಧ ಎಂದು ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದರು. ನಾಳೆ ಮತದಾನ ಮಾಡಿದವರಿಗೆ ಉಚಿತ ಊಟ ಹಾಗೂ ಸಿನಿಮಾ ಟಿಕೇಟ್ ಕೊಡುವುದಾಗಿ ಆಫರ್ ನೀಡಿದ ಹೋಟೆಲ್ ಮಾಲೀಕರಿಗೆ ಚುನಾವಣಾ ಆಯೋಗ ಕೊಟ್ಟಿತ್ತು. ಹೋಟೆಲ್ ಮಾಲೀಕರು ಉಚಿತ. ಊಟ ಹಾಗೂ ತಿಂಡಿ ವ್ಯವಸ್ಥೆ ಯಿಂದ ಅವರ ಸ್ವಾರ್ಥ ಅಡಗಿದೆ ಎಂದು ಅನುಮಾನ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಚುನಾವಣೆಯನ್ನು ಬಂಡವಾಳ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಹೋಟೆಲ್ ನೀಡಿರುವ ಆಫರ್ ಗೆ ಬ್ರೇಕ್ ಹಾಕಿತ್ತು.
ಮತದಾನಕ್ಕೆ ಒಂದು ದಿನ ಇರುವಾಗಲೇ ನಾಡ ದೇವತೆಗೆ ಕಾಂಗ್ರೆಸ್ ಜೋಡೆತ್ತುಗಳ ವಿಶೇಷ ಪ್ರಾರ್ಥನೆ
ಆದರೆ ಹೈಕೋರ್ಟ್ ಈ ಆಫರ್ ಗೆ ಅಸ್ತು ಎಂದಿದ್ದು, ಬಿಬಿಎಂಪಿಯ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಮತದಾರರು ನಾಳೆ ಮತದಾನ ಮಾಡಿದ ಬಳಿಕ ಆಫರ್ ನೀಡಿರುವ ಹೋಟೆಲ್ ಗೆ ಹೋಗಿ ತಮ್ಮಿಷ್ಟದ ತಿಂಡಿ ತಿನಿಸು ತಿನ್ನಬಹುದು.
