Asianet Suvarna News Asianet Suvarna News

ಕಾನೂನು ಉಲ್ಲಂಘಿಸಿ ಬಿಜೆಪಿ ಅಭ್ಯರ್ಥಿ ಬಹಿರಂಗ ಪ್ರಚಾರ, ಕೇಳಲು ಹೋದ ಪಿಎಸ್‌ಐ ಮೇಲೆ ಹಲ್ಲೆ!

ಬಹಿರಂಗ ಪ್ರಚಾರ ಅಂತ್ಯವಾದರೂ ಬಬಲೇಶ್ವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಕಾನೂನು ಉಲ್ಲಂಘಿಸಿ ಭರ್ಜರಿ ಪ್ರಚಾರ ನಡೆದಿದೆ. ಕೇಳಲು ಹೋದ ಪಿಎಸ್‌ಐ ಮೇಲೆಯೇ ಬೆಂಬಲಿಗರಿಂದ ಹಲ್ಲೆ ನಡೆದಿದೆ.

Karnataka Election 2023 BJP candidate Vijugouda Patil supporters attack police in Babaleshwar gow
Author
First Published May 9, 2023, 7:44 PM IST | Last Updated May 9, 2023, 7:44 PM IST

ವಿಜಯಪುರ (ಮೇ.9): ಬಹಿರಂಗ ಪ್ರಚಾರ ಅಂತ್ಯವಾದರೂ ಬಬಲೇಶ್ವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಕಾನೂನು ಉಲ್ಲಂಘಿಸಿ ಭರ್ಜರಿ ಪ್ರಚಾರ ನಡೆದಿದೆ. ಕೇಳಲು ಹೋದ ಪಿಎಸ್‌ಐ ಮೇಲೆಯೇ ಬೆಂಬಲಿಗರಿಂದ ಹಲ್ಲೆ ನಡೆದಿದೆ.  ತಿಕೋಟಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಹಾಗೂ ಬೆಂಬಲಿಗರಿಂದ ಪ್ರಚಾರ ನಡೆಯುತ್ತಿದ್ದು, ಈ ಬಗ್ಗೆ ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್ ಟ್ವಿಟ್ಟರ್‌ನಲ್ಲಿ ಪ್ರಚಾರದ ವಿಡಿಯೋ ಹಂಚಿಕೊಂಡಿದ್ದಾರೆ.  ನಂ ಪ್ಲೇಟ್ ಇಲ್ಲದ ವಾಹನಗಳಲ್ಲಿ ಬಂದು ಪ್ರಚಾರ ನಡೆಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ತಿಕೋಟ ಪಟ್ಟದ ಸರ್ಕಲ್ ನಲ್ಲಿ ವಿಜುಗೌಡ ಬೆಂಬಲಿಗರಿಂದ ಪ್ರಚಾರ ನಡೆಯುತ್ತಿದೆ. ಎಸ್ಪಿ, ಡಿಸಿ ಎನ್ ಮಾಡ್ತಿದ್ದಾರೆ ಎಂದು ಎಂ ಬಿ ಪಾಟೀಲ್ ವಿಡಿಯೋಗಳನ್ನ ಟ್ವೀಟ್ ಮಾಡಿದ್ದಾರೆ.

ಮಾತ್ರವಲ್ಲ ಬಬಲೇಶ್ವರ ಕ್ಷೇತ್ರದಲ್ಲಿ ಹೊಡಿಬಡಿ ರಾಜಕಾರಣ ಮುಂದುವರೆದಿದೆ. ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಬೆಂಬಲಿಗರಿಂದ ಪಿಎಸ್‌ಐ ಮೇಲೆ ಹಲ್ಲೆ ನಡೆದಿದೆ. ತಿಕೋಟ ಪಿಎಸ್‌ಐ ಗಿರಿಮಲ್ಲ ಟಕ್ಕಳಕಿ ಮೇಲೆ ಹಲ್ಲೆ ನಡೆದಿದೆ. ಬಹಿರಂಗ ಪ್ರಚಾರ ನಡೆಸುತ್ತಿದ್ದ ವೇಳೆ ಪ್ರಚಾರ ತಡೆಯಲು ಹೋದ ಪಿಎಸ್‌ಐ ಮೇಲೆ  ವಿಜುಗೌಡ ಹಾಗೂ ಬೆಂಬಲಿಗರಿಂದ ಹಲ್ಲೆ ನಡೆದಿದೆ.  ವಿಜುಗೌಡ ಬೆಂಬಲಿಗರು ಗುಂಪು ಕಟ್ಟಿಕೊಂಡು ಬಂದು ಪಿಎಸ್‌ಐಗೆ ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಸದ್ಯ  ತಿಕೋಟಾ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.

ಬೆಳಗ್ಗೆ ಬಡಿದಾಡಿಕೊಂಡಿದ್ದ ಬಿಜೆಪಿ -ಕಾಂಗ್ರೆಸ್ 
ಬಬಲೇಶ್ವರ ಕ್ಷೇತ್ರದಲ್ಲಿ ರಣರಣ ರಾಜಕಾರಣ ಇದೆ. ಇಂದು  ಬೆಳಗ್ಗೆ ಬಬಲೇಶ್ವರ ಕ್ಷೇತ್ರದ ರತ್ನಾಪುರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಎಂ ಬಿ ಪಾಟೀಲ್ ಸಹೋದರ ಕಾಂಗ್ರೆಸ್ MLC ಸುನೀಲ್ ಪಾಟೀಲ್ ಪತ್ನಿಗೆ ಕೈಗೆ ಗಾಯವಾಗಿದೆ. ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ತಲೆಗೆ ಕೂಡ ಗಾಯವಾಗಿದೆ. 

ಇತ್ತ ಬಿಜೆಪಿ ಅಭ್ಯರ್ಥಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪ, ಅತ್ತ ಕಾಂಗ್ರೆಸ್ ಎಮ್‌ಎಲ್ಸಿ ಪತ್ನಿ ಕೈ ಮುರಿತ. ಮತದಾನಕ್ಕೆ ಕೌಂಟ್ ಡೌನ್ ವೇಳೆ ಬಬಲೇಶ್ವರ ಕ್ಷೇತ್ರದಲ್ಲಿ ಹಲ್ಲೆಯ ಆರೋಪ-ಪ್ರತ್ಯಾರೋಪವಾಗಿದೆ.

ತಿಕೋಟಾದಿಂದ ಬರುವಾಗ ನನ್ನ ಮೇಲೆ ಹಲ್ಲೆ ಆಗಿದೆ ಎಂದು ಫೇಸ್ಬುಕ್ ನಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಬೆಳಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಪ್ರತಿಯಾಗಿ ಕಾಂಗ್ರೆಸ್ ಎಮ್‌ಎಲ್ಸಿ ಸುನೀಲಗೌಡ ಪಾಟೀಲ್ ಪತ್ನಿಯ ಕೈ ಮುರಿತದ ವಿಡಿಯೋವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.

ವಿಜಯಪುರ ಜಿಲ್ಲೆಯ ಮತದಾನ ಕೇಂದ್ರಗಳ ಪೂರ್ವ ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ

ಎಂಬಿ ಪಾಟೀಲ್ ಸಹೋದರ ಎಂಎಲ್ಸಿ ಸುನಿಲ್ ಗೌಡ ಪಾಟೀಲ್ ಪತ್ನಿ ಪ್ರಚಾರಕ್ಕೆ ವಿಜುಗೌಡರಿಂದ  ಅಡ್ಡಿ ಆರೋಪ ಕೇಳಿಬಂದಿದೆ. ಸುನೀಲ್ ಗೌಡ ಪಾಟೀಲ್ ಪತ್ನಿ ರೇಣುಕಾ ಪಾಟೀಲ್ ಕೈಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.

 

Mysuru Assembly Constituencies: ಮೈಸೂರು ಜಿಲ್ಲೆಯಲ್ಲಿ ಮತದಾನಕ್ಕೆ ಬರುವ ಹಿರಿಯರಿಗೆ ಬಸ್ ವ್ಯವಸ್ಥೆ

 ಕೈಗೆ ವೈದ್ಯರು ಬ್ಯಾಂಡೇಜ್ ಹಾಕಿದ್ದಾರೆ. ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು ಎಷ್ಟು ಸರಿ. ನಮ್ಮವಂತಹವರಿಗೆ ಹೀಗೆ ಮಾಡ್ತಾರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಎಂಬಿ ಪಾಟೀಲ್ ತಮ್ಮ ಫೇಸ್ಬುಕ್ ನಲ್ಲಿ ಹೇಳಿಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಮಗ ಗಾಳಿಯಲ್ಲಿ, ನೆಲಕ್ಕೆ ಗುಂಡು ಹಾರಿಸಿದ್ದು ನೋಡಿದ್ದೀರಿ. ಬಿಜೆಪಿ ಟಿಕೆಟ್ ಘೋಷಣೆ ಸಂದರ್ಭದಲ್ಲಿ ಅವರ ಮಗ ಸಂಭ್ರಮಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ರು. ಈಗ ಹೊಸದೊಂದು ನಾಟಕ ಅನುಕಂಪ ಗಿಟ್ಟಿಸಲು ಮಾಡಿದ್ದಾರೆ ಎಂದು ಖಚಿತ ಮಾಹಿತಿಯಿಂದ ತಿಳಿದು ಬಂದಿದೆ. ವಿಜುಗೌಡ ಪಾಟೀಲ್ ತಮ್ಮ ಮೇಲೆ ಹಲ್ಲೆ ಆರೋಪಿಸಿ, ಫೇಸ್ಬುಕ್ ನಲ್ಲಿ ಫೋಟೋ ಹಂಚಿಕೊಂಡಿದ್ದಕ್ಕೆ ಪರೋಕ್ಷವಾಗಿ  ಇದೊಂದು ನಾಟಕವೆಂದು ಎಂಬಿ ಪಾಟೀಲ್ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios