ಬೆಂಗಳೂರು, (ಮೇ.30): ಕರ್ನಾಟಕದಲ್ಲಿ ಇಂದು (ಭಾನುವಾರ) ಒಂದೇ ದಿನ 20,378 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 382 ಜನರು ನಿಧನರಾಗಿದ್ದಾರೆ. 

ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 25,87,827ಕ್ಕೆ ಏರಿಕೆಯಾಗಿದೆ. ಜತೆಗೆ ರಾಜ್ಯದಲ್ಲಿ ಇದುವರೆಗೆ ಕೊರೋನಾದಿಂದ 28,679 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ತಗ್ಗಿದ ಕೊರೋನಾ: ಕೊಂಚ ಸಮಾಧಾನ 

ಸಿಲಿಕಾನ್ ಸಿಟಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ 4,734 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 213 ಜನರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 

ಇನ್ನು ಕಳೆದ 24 ಗಂಟೆಗಳಲ್ಲಿ  28,053 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 22,17,117 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 3,42,010 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.  

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-193, ಬಳ್ಳಾರಿ-598, ಬೆಳಗಾವಿ-1171, ಬೆಂಗಳೂರು ಗ್ರಾಮಾಂತರ-392, ಬೆಂಗಳೂರು ನಗರ-4734, ಬೀದರ್-37, ಚಾಮರಾಜನಗರ-402, ಚಿಕ್ಕಬಳ್ಳಾಪುರ-356, ಚಿಕ್ಕಮಗಳೂರು-671, ಚಿತ್ರದುರ್ಗ-805, ದಕ್ಷಿಣ ಕನ್ನಡ -727, ದಾವಣಗೆರೆ-698, ಧಾರವಾಡ-525, ಗದಗ-289, ಹಾಸನ-2227, ಹಾವೇರಿ-206, ಕಲಬುರಗಿ-107, ಕೊಡಗು-271, ಕೋಲಾರ್-341, ಕೊಪ್ಪಳ-365, ಮಂಡ್ಯ-643, ಮೈಸೂರು-1559, ರಾಯಚೂರು-278, ರಾಮನಗರ-164, ಶಿವಮೊಗ್ಗ-386, ತುಮಕೂರು-773, ಉಡುಪಿ- 651, ಉತ್ತರ ಕನ್ನಡ-504, ವಿಜಯಪುರ-198, ಯಾದಗಿರಿ-107.
"