Asianet Suvarna News Asianet Suvarna News

ದೇಶದಲ್ಲಿ ತಗ್ಗಿದ ಕೊರೋನಾ: ಕೊಂಚ ಸಮಾಧಾನ

* ದೇಶದಲ್ಲಿ ಹೊಸ ಕೊರೋನಾ ಕೇಸ್‌ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ
* ಪ್ರತಿ ದಿನ 3 ಲಕ್ಷದವರೆಗೆ ದಾಖಲಾಗುತ್ತಿದ್ದ ಸೋಂಕಿತರ ಸಂಖ್ಯೆ, ಇದೀಗ 1 ಲಕ್ಷಕ್ಕೆ
*  ಇದು 46 ದಿನಗಳಲ್ಲಿ ಅತಿ ಕಡಿಮೆ.

India records single day spike of 1.65 lakh COVID-19 cases lowest in 46 days rbj
Author
Bengaluru, First Published May 30, 2021, 5:33 PM IST

"ನವದೆಹಲಿ, (ಮೇ.30): ಭಾರತದಲ್ಲಿ  ಕೊರೋನಾ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. 

ಹೌದು...ಪ್ರತಿ ದಿನ 3 ಲಕ್ಷದವರೆಗೆ ದಾಖಲಾಗುತ್ತಿದ್ದ ಸೋಂಕಿತರ ಸಂಖ್ಯೆ, ಇದೀಗ 1 ಲಕ್ಷಕ್ಕೆ ಇಳಿದಿರುವುದು ಸಮಾಧಾನಕರ ಸಂಗತಿಯಾಗಿದೆ. 

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,65,553 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 3,460 ಮಂದಿ ಮೃತಪಟ್ಟಿದ್ದಾರೆ. 2,76,309 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಚೀನಾದ ಕೊರೋನಾ ಕುತಂತ್ರ ರಿವೀಲ್, ಶತಕ ಬಾರಿಸಿದ ಪೆಟ್ರೋಲ್; ಮೇ.30ರ ಟಾಪ್ 10 ಸುದ್ದಿ!

ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ.ಕಳೆದ 24ಗಂಟೆಯಲ್ಲಿ 1,65,553 ಹೊಸ ಕೊವಿಡ್​ 19 ಪ್ರಕರಣಗಳು ಪತ್ತೆಯಾಗಿವೆ. ಇದು 46 ದಿನಗಳಲ್ಲಿ ಅತಿ ಕಡಿಮೆಯಾಗಿದೆ.

ದೇಶದಲ್ಲಿ ಈವರೆಗೆ ಕೊರೋನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,78,94,800 ಹಾಗೂ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,54,54,320. ಇನ್ನು ಇದುವರೆಗೆ 3,25,972 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 21,14,508 ಸಕ್ರಿಯ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೇ 29ರವರೆಗೆ 34,31,83,748 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಸೋಂಕಿನ ಪ್ರಮಾಣ ಕೇವಲ ಮೂರೇ ವಾರಗಳಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗುವ ಪ್ರಮಾಣ ಮೇ 8ರಂದು ಉತ್ತುಂಗದಲ್ಲಿತ್ತು. ಅದೀಗ ಮೂರೇ ವಾರದಲ್ಲಿ ಶೇ.50ರಷ್ಟು ಇಳಿಕೆ ಕಂಡಿದೆ. 

Follow Us:
Download App:
  • android
  • ios