ಬೆಂಗಳೂರು (ಸೆ.07):  ರಾಜ್ಯದಲ್ಲಿ ಭಾನುವಾರ ದಾಖಲೆಯ ಸಂಖ್ಯೆಯಲ್ಲಿ ಕೋವಿಡ್‌ ರೋಗಿಗಳು ಗುಣಮುಖರಾಗಿದ್ದರೆ, ಮತ್ತೆ 9,319 ಮಂದಿ ಕೊರೋನಾ ಸೋಂಕಿತರಾಗುವ ಮೂಲಕ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದಿದೆ.

ರಾಜ್ಯದಲ್ಲಿ ಶನಿವಾರವಷ್ಟೆ9,102 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿ ದಾಖಲೆ ನಿರ್ಮಾಣವಾಗಿತ್ತು. ಭಾನುವಾರ ಆ ದಾಖಲೆ ಇನ್ನಷ್ಟುಉತ್ತಮಗೊಂಡು 9,575 ಮಂದಿ ಕೊರೋನಾವನ್ನು ಜಯಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೋನಾ ಗೆದ್ದವರ ಸಂಖ್ಯೆ 2.92 ಲಕ್ಷಕ್ಕೇರಿದೆ. ಇದೇ ವೇಳೆ ಮತ್ತೆ 9,319 ಮಂದಿ ಹೊಸದಾಗಿ ಕೊರೋನಾ ಸೋಂಕಿತರಾಗಿದ್ದಾರೆ. ತನ್ಮೂಲಕ ರಾಜ್ಯದಲ್ಲಿನ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 99,266ಕ್ಕೆ ತಲುಪಿ ಒಂದು ಲಕ್ಷದ ಗಡಿ ಸಮೀಪಿಸಿದೆ. ರಾಜ್ಯದಲ್ಲಿ ಈವರೆಗೆ ಕೊರೋನಾ ಸೋಂಕು 3.98 ಲಕ್ಷ ಜನಕ್ಕೆ ತಗುಲಿದ್ದು, ಸೋಮವಾರ 4 ಲಕ್ಷದ ಗಡಿ ದಾಟುವ ಸಂಭವವಿದೆ.

ಗುಣಹೊಂದಿದ ಮಹಿಳೆಗೆ ಮತ್ತೆ ಕೊರೋನಾ! ಎಚ್ಚರ! ...

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ವರದಿಯಾಗುತ್ತಿದ್ದರೂ ಸಾವಿನ ಪ್ರಮಾಣ ನಿಯಂತ್ರಣದಲ್ಲೇ ಇದೆ. ಭಾನುವಾರ 95 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು, ಈ ರೋಗ ಬಲಿ ತೆಗೆದುಕೊಂಡವರ ಒಟ್ಟು ಸಂಖ್ಯೆ 6393 ಆಗಿದೆ. ರಾಜ್ಯದಲ್ಲಿ ಒಟ್ಟು 775 ಮಂದಿ ಕೊರೋನಾ ಪೀಡಿತರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಒಟ್ಟು 74,384 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ರಾಜ್ಯದಲ್ಲಿ ಈ ವರೆಗೆ 33.48 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.

ಮೈಸೂರಿನಲ್ಲಿ ಒಟ್ಟು 500 ಸಾವು: ಬೆಂಗಳೂರು ನಗರದಲ್ಲಿ 38, ಬಳ್ಳಾರಿ, ಬೆಳಗಾವಿಯಲ್ಲಿ ತಲಾ 8, ಧಾರವಾಡ 6 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲಿ 5 ಮಂದಿ ಕೊರೋನಾಕ್ಕೆ ಬಲಿಯಾಗುವುದರೊಂದಿಗೆ ಈ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 500 ದಾಟಿದೆ. ಕೊಪ್ಪಳ 4, ಶಿವಮೊಗ್ಗ, ತುಮಕೂರು ತಲಾ 3, ಹಾಸನ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ತಲಾ 2, ಉತ್ತರ ಕನ್ನಡ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ತಲಾ 1 ಸಾವು ಕೋವಿಡ್‌ನಿಂದಾಗಿ ಘಟಿಸಿದೆ.

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2! .

ಬೆಂಗಳೂರು ನಗರದಲ್ಲಿ 2,824, ಮೈಸೂರು 686, ಬೆಳಗಾವಿ 427, ಬಳ್ಳಾರಿ 396, ಶಿವಮೊಗ್ಗ 329, ದಕ್ಷಿಣ ಕನ್ನಡ 326, ಹಾಸನ 324, ಧಾರವಾಡ 311, ತುಮಕೂರು 304, ಹಾವೇರಿ 295, ಚಿತ್ರದುರ್ಗ 261, ಉತ್ತರ ಕನ್ನಡ 247, ಮಂಡ್ಯ 230, ದಾವಣಗೆರೆ 221, ಉಡುಪಿ 217, ಕೊಪ್ಪಳ 198, ಗದಗ 194, ರಾಯಚೂರು 187, ಬಾಗಲಕೋಟೆ 180, ಕಲಬುರಗಿ 165, ಯಾದಗಿರಿ 139, ಕೊಪ್ಪಳ 119, ವಿಜಯಪುರ 96, ಬೆಂಗಳೂರು ಗ್ರಾಮಾಂತರ 93, ಬೀದರ್‌ 83, ಚಿಕ್ಕಬಳ್ಳಾಪುರ 81, ರಾಮನಗರ 68, ಚಾಮರಾಜನಗರ 41, ಕೊಡಗು 38 ಹೊಸ ಪ್ರಕರಣಗಳು ಭಾನುವಾರ ವರದಿಯಾಗಿವೆ.