ನಾಳೆಯಿಂದ ಮತ್ತೆರಡು ಕಾಂಗ್ರೆಸ್‌ ಗ್ಯಾರಂಟಿ ಜಾರಿ: ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಆರಂಭ

ರಾಜ್ಯದ ಜನತೆಗೆ ಪ್ರಮುಖ 5 ಗ್ಯಾರಂಟಿಗಳ ಜಾರಿ ಭರವಸೆ ನೀಡಿದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಜುಲೈ 1 ರಿಂದ ಮತ್ತೆ ಎರಡು ಗ್ಯಾರಂಟಿ (ಅನ್ನಭಾಗ್ಯ ಯೋಜನೆ ಮತ್ತು ಗೃಹಜ್ಯೋತಿ) ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

Karnataka Congress guarantee Anna bhagya and Gruha jyothi scheme implemented on july 1 sat

ಬೆಂಗಳೂರು (ಜೂ.29): ರಾಜ್ಯದ ಜನತೆಗೆ ಪ್ರಮುಖ 5 ಗ್ಯಾರಂಟಿಗಳ ಜಾರಿ ಭರವಸೆ ನೀಡಿದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಜುಲೈ 1 ರಿಂದ ಮತ್ತೆ ಎರಡು ಗ್ಯಾರಂಟಿ (ಅನ್ನಭಾಗ್ಯ ಯೋಜನೆ ಮತ್ತು ಗೃಹಜ್ಯೋತಿ) ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದರು. ಈಗ ಇಂದು ಮಧ್ಯರಾತ್ರಿಯಿಂದಲೇ 200 ಯೂನಿಟ್‌ ಉಚಿತವಾಗಿ ನೀಡುವ 'ಗೃಹಜ್ಯೋತಿ' ಯೋಜನೆ ಆರಂಭವಾಗಲಿದೆ. 

ಕಾಂಗ್ರೆಸ್‌ ಸರ್ಕಾರದ ಅಧಿಕಾರಕ್ಕೆ ಬಂದ ಕೂಡಲೇ ಜೂನ್​​ 12 ರಂದು ಶಕ್ತಿ ಯೋಜನೆಯನ್ನು (Shakti Scheme) ಜಾರಿಗೊಳಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ (Free Travel) ಅವಕಾಶ ಮಾಡಿಕೊಟ್ಟಿತ್ತು. ಇನ್ನು ಜುಲೈ 1 ರಿಂದ ಮತ್ತೆರಡು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ "ಗೃಹಜ್ಯೋತಿ" (Gruha Jyothi Scheme) ಯೋಜನೆ ಜಾರಿಗೆ ಬರಲಿದೆ. ಉಳಿದಂತೆ ನಾಳೆ ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Karntaka chief minister Siddaramaiah) ಅವರು "ಅನ್ನಭಾಗ್ಯ" ಯೋಜನೆಗೆ (AnnaBhagya Scheme) ಚಾಲನೆ ನೀಡಲಿದ್ದಾರೆ.

ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: 5 ಅಕ್ಕಿ, 170 ರೂ. ಹಣ ಹಂಚಿಕೆಗೆ ಚಾಲನೆ

ಯಾರಾರಿಗೆ ವಿದ್ಯುತ್‌ ಫ್ರೀ ಸಿಗುತ್ತೆ? : ರಾಜ್ಯ ಸರ್ಕಾರದ ಉಚಿತ 200 ಯುನಿಟ್ ವಿದ್ಯುತ್​ ಕಲ್ಪಿಸುವ ಗೃಹಜ್ಯೋತಿ ಜಾರಿಗೆ ಕೌಂಟ್​​​ಡೌನ್​ ಶುರುವಾಗಿದೆ. ಇಂದು ಮಧ್ಯರಾತ್ರಿಯಿಂದ (ಜುಲೈ1ರ ಶನಿವಾರ ಮಧ್ಯರಾತ್ರಿ 12 ಗಂಟೆ) ಬಳಸುವ ವಿದ್ಯುತ್ ಗೃಹಜ್ಯೋತಿ ಯೋಜನೆಗೆ ಒಳಪಡಲಿದೆ. ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಬಳಸುವ 200 ಯುನಿಟ್‌ ಒಳಗಿನ ವಿದ್ಯುತ್‌ಗೆ ಬಿಲ್‌ ಕಟ್ಟುವಂತಿಲ್ಲ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಲಕ್ಷಾಂತರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.  ಈವರೆಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯೊಬ್ಬರೂ ಕೂಡ ಉಚಿತ ವಿದ್ಯುತ್‌ ಪಡೆಯಲು ಅರ್ಹರಾಗಿದ್ದಾರೆ. 

ಉಚಿತ ವಿದ್ಯುತ್‌ ಪಡೆಯಲು ಇರುವ ಕಂಡಿಷನ್‌ಗಳು: ಇನ್ನು ಇಂದು ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಬಳಸುವ ವಿದ್ಯುತ್​ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಆಗ ಬರುವ ಕರೆಂಟ್ ಬಿಲ್ ನಲ್ಲಿ ಗೃಹಜ್ಯೋತಿ ಯೋಜನೆಗೆ ಒಳಪಡಲಿದೆ. ಇನ್ನು ಈ ಹಿಂದಿನ ಒಂದು ವರ್ಷದ ಅಥವಾ 12 ತಿಂಗಳ ಸರಾಸರಿ ವಿದ್ಯುತ್ ಬಿಲ್‌ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಬಳಕೆಯನ್ನು​ ಉಚಿತವಾಗಿ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಅಂಥವರಿಗೆ ಉಚಿತ ವಿದ್ಯುತ್​ ಲಭ್ಯವಾಗಲಿದೆ. ಇನ್ನು 12 ತಿಂಗಳ ಸರಾಸರಿಗಿಂತ ಶೇ.10 ಪರ್ಸೆಂಟ್‌ಗಿಂತ ಹೆಚ್ಚಿನ ವಿದ್ಯುತ್‌ ಬಳಸಿದರೆ ಅಂಥವರಿಗೆ ಬಿಲ್ ಬರಲಿದೆ. ಇನ್ನು 200 ಯೂನಿಟ್‌ಗಿಂತ ಕೇವಲ ಒಂದು ಯೂನಿಟ್‌ ಹೆಚ್ಚು ಬಂದರೂ ಅಷ್ಟೂ ವಿದ್ಯುತ್‌ ಬಿಲ್‌ನ ಮೊತ್ತವನ್ನು ಗ್ರಾಹಕರು ಪಾವತಿಸಬೇಕು. 

81 ಲಕ್ಷ ಕುಟುಂಬದಿಂದ ಉಚಿತ ವಿದ್ಯುತ್‌ಗೆ ನೋಂದಣಿ: ಜೂ.18ರಿಂದ ಆರಂಭವಾದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಿಂದ ಈವರೆಗೆ 80,99,932 ಕುಟುಂಬದಿಂದ ಅರ್ಜಿ ಹಾಕಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 2.14 ಕೋಟಿ ಜನರು ಉಚಿತ ವಿದ್ಯುತ್‌ ಪಡೆಯಲು ಅರ್ಹರಾಗಿದ್ದು, 1.33 ಕೋಟಿ ಜನರು ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಸ್ಕಾಂನಲ್ಲಿ 31.55 ಲಕ್ಷ, ಸೆಸ್ಕಾಂ 12.04 ಲಕ್ಷ, ಜೆಸ್ಕಾಂ 8.15 ಲಕ್ಷ ಹೆಸ್ಕಾಂ 15.99 ಲಕ್ಷ ಹಾಗೂ ಮೆಸ್ಕಾಂನಲ್ಲಿ 9.07 ಲಕ್ಷ ಜನರು ಉಚಿತ ವಿದ್ಯುತ್‌ ಪಡೆಯಲು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದಂತೆ HRECSನಲ್ಲಿ 36,906 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. 

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌

ನಾಳೆ ಅನ್ನಭಾಗ್ಯ ಯೋಜನೆ ಜಾರಿ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಜು.1)ರಿಂದ ಅನ್ನಭಾಗ್ಯ ಯೋಜನೆ (10 ಕೆಜಿ ಅಕ್ಕಿ ವಿತರಣೆ) ಜಾರಿ ಮಾಡಲಿದ್ದಾರೆ. ಈ ಯೋಜನೆಯಡಿ ಎಲ್ಲ ಪಡಿತರ ಚೀಟಿಯ ಫಲಾನುಭವಿಗಳಿಗೆ ಜುಲೈ ತಿಂಗಳು 5 ಕೆ.ಜಿ. ಅಕ್ಕಿ ಹಾಗೂ ಬಾಕಿ 5 ಕೆ.ಜಿಗೆ ತಲಾ 34 ರೂ.ಗಳಂತೆ 170 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಸುಮಾರು 6 ಲಕ್ಷಕ್ಕೂ ಅಧಿಕ ಪಡಿತರ ಕುಟುಂಬಗಳಿಗೆ ಬ್ಯಾಂಕ್‌ ಖಾತೆಯೇ ಇಲ್ಲವಾಗಿದ್ದು, ಅಂಥವರಿಗೆ ಯಾವ ರೀತಿ ಹಣವನ್ನು ಹಾಕಬೇಕು ಎಂಬುದು ಸರ್ಕಾರಕ್ಕೆ ಗೊಂದಲವಾಗಿದೆ. 

Latest Videos
Follow Us:
Download App:
  • android
  • ios