ಉತ್ತರ ಕರ್ನಾಟಕ ಯುವಕರಿಗೆ ಬಂಪರ್‌ ಲಾಟರಿ: ಕಲ್ಯಾಣ, ಕಿತ್ತೂರು ಭಾಗದಲ್ಲಿ ಹೆಚ್ಚು ಕೈಗಾರಿಕೆಗಳ ಆರಂಭ

ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲೆಡೆ ಕೈಗಾರಿಕೆಗಳನ್ನು ಸ್ಥಾಪಿಸಿ ವಿಸ್ತಾರವಾಗಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡಲಾಗುತ್ತಿದೆ.

Karnataka congress government will be industries start in Kalyana and Kittur area sat

ವಿಜಯಪುರ (ಜೂ.04): ಪಂಜಾಬ್, ತೆಲಂಗಾಣ ರಾಜ್ಯದಲ್ಲಿ ಕೈಗಾರಿಕೆಗಳ ಪ್ರಗತಿಗೆ ಕೈಗೊಂಡಿರುವ ಕಾರ್ಯಕ್ರಮ ಅಧ್ಯಯನ ಮಾಡಿ ಕರ್ನಾಟಕವನ್ನು ಕೈಗಾರಿಕಾ ವಲಯ ಪ್ರಗತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲೆಡೆ ಕೈಗಾರಿಕೆಗಳನ್ನು ಸ್ಥಾಪಿಸಿ ವಿಸ್ತಾರವಾಗಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡಲಾಗುತ್ತಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಕೆಗಳ ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದರು.

ವಿಜಯಪಯರದಲ್ಲಿ ತಂದೆ ತಾಯಿಯನ್ನು ಭೇಟಿ ಮಾಡಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿ ಇಂಧನ, ಪರಿಸರ ಸೇರಿದಂತೆ ವಿವಿಧ ಇಲಾಖೆಯ ಕೆಲವೊಂದು ಕಚೇರಿಗಳನ್ನು ಒಂದೇ ಸ್ಥಳದಲ್ಲಿ ಇದ್ದು, ಆ ಒಂದೇ ಸ್ಥಳದಲ್ಲಿಯೇ ಎಲ್ಲ ಇಲಾಖೆಗಳ ನಿರಪೇಕ್ಷಣ ಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆದುಕೊಳ್ಳುವ ಅವಕಾಶವಿದೆ. ಹೀಗಾಗಿ, ಕೈಗಾರಿಕೆಗಳಿಗೆ ಇದು ಅನುಕೂಲ. ಈ ನಿಟ್ಟಿನಲ್ಲಿಯೂ ಅಧ್ಯಯನ ನಡೆಸಲಾಗುವುದು, ಅದೇ ತೆರನಾಗಿ ತೆಲಂಗಾಣಲ್ಲಿ ಏಕಗವಾಕ್ಷಿಯಡಿಯಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿದೆ, ಈ ಬಗ್ಗೆಯೂ ಅಧ್ಯಯನ ನಡೆಸಿ ಸಮಗ್ರವಾದ ಮಾದರಿ ಕಾರ್ಯವನ್ನು ಕರ್ನಾಟಕದಲ್ಲಿ ರೂಪಿಸಲಾಗುವುದು. ಶೀಘ್ರದಲ್ಲಿಯೇ ಸಭೆ ನಡೆಸಿ ಯಾವ ರೀತಿ ಮುನ್ನಡೆಯಬೇಕು ಎಂಬುದರ ಕುರಿತು ಚರ್ಚೆ ನಡೆಸಿ ಹೆಜ್ಜೆ ಇರಿಸಲಾಗುವುದು ಎಂದು ಮಾಹಿತಿ ನೀಡಿದರು. 

ಬೆಂಗಳೂರಿನ ಪೀಪಲ್ಸ್‌ ಮ್ಯಾನ್‌ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ಗೆ ಬಲಿ

ಕೈಗಾರಿಕಾ ಇಲಾಖೆಯ ಸಿಂಗಲ್‌ ವಿಂಡೋ ದುರ್ಬಳಕೆ:  ಈಗಾಗಲೇ ಸ್ಥಾಪಿಸಲಾಗಿರುವ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ಒದಗಿಸುವ ಸಿಂಗಲ್ ವಿಂಡೋ ಪ್ರಕ್ರಿಯೆ ನೈಜವಾಗಿಯೂ ಸಿಂಗಲ್ ವಿಂಡೋ ಆಗಿರದೇ ಕೈಗಾರಿಕಾ ಉದ್ದೇಶಗಳಿಗೆ ಭೂಮಿ ಪಡೆದುಕೊಂಡು ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಎಲ್ಲವೂಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ಬದ್ಧವಾಗಿದೆ. ಕೈಗಾರಿಕೆಗಳಿಗೆ ನೀರು ಅತ್ಯಂತ ಅವಶ್ಯವಾಗಿ ಬೇಕು. ಹಾಗಾಗಿ, ನೀರು ಲಭಯವಿರುವ ಸ್ಥಳಗಳಲ್ಲಿ ಕೈಗಾರಿಕಾ ವಲಯಗಳನ್ನು ಮಾಡಲಾಗುವುದು. ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದ ಶೇ.40 ರಷ್ಟು ಭ್ರಷ್ಟಾಚಾರ ಸೇರಿದಂತೆ ಎಲ್ಲವನ್ನೂ ಸಹ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗಗಳಿಗೆ ಆದ್ಯತೆ: ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ನೈಸರ್ಗಿಕ ಅವಲಬ್ಯತೆ, ಸೌಹಾರ್ದತೆ ವಾತಾವರಣವಿದೆ. ಹೀಗಾಗಿ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲೆಡೆ ಕೈಗಾರಿಕೆಗಳು ವಿಸ್ತಾರವಾಗಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕೆಗಳು ಯಾವ ರೀತಿ ಯುವ ಸಂಪನ್ಮೂಲ ಅಗತ್ಯವಿದೆ ಎಂದು ಮಾಹಿತಿ ಸಂಗ್ರಹಿಸಿ ಅದಕ್ಕೆ ಪೂರಕವಾಗಿಯೇ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ನಿಟ್ಟಿನಲ್ಲಿ ಪಠ್ಯಕ್ರಮ ಬದಲಾವಣೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ ಎಂದರು.

ದೇಶದ ಪ್ರತಿ ಮೂವರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆಯಿದೆ: ರಾಜ್ಯಪಾಲ

ಕೋಮುದ್ವೇಷ ಬಿತ್ತಿದ ಬಿಜೆಪಿ ಸರ್ಕಾರ:  ಹಿಂದಿನ ಸರ್ಕಾರ ಅನಾವಶ್ಯಕವಾಗಿ ಹಿಜಾಬ್, ಹಲಾಲ್ ಎನ್ನುವ ಅರ್ಥವಿಲ್ಲದ ವಿಚಾರಗಳನ್ನು ಮಾತ್ರ ಬಿತ್ತಿ ಕೋಮುದ್ವೇಷ ಬಿತ್ತಿದೆ. ಆದರೆ ನಮ್ಮ ಸರ್ಕಾರ ಎಲ್ಲ ಸಮಾಜಗಳ ರಕ್ಷಣೆಗೆ ಬದ್ಧವಾಗಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ತನ್ನ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು. ಉರಿಗೌಡ-ನಂಜೇಗೌಡರ ಗಿರಾಕಿಗಳನ್ನು ಹುಟ್ಟಿಸಿದ್ದು ಬಿಜೆಪಿ, ಈ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು. ಮಕ್ಕಳು ಅಣ್ಣ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ, ಕೆಂಪೆಗೌಡರನ್ನು ಓದಬೇಕು. ಇವರ ಸಾಧನೆ ಪಠ್ಯದಲ್ಲಿ ಇರಬೇಕು ಎಂದರು.

ಪಠ್ಯದಲ್ಲಿ ಕೇಸರೀಕರಣ ಬರಲು ಬಿಡೊಲ್ಲ:  ಪಠ್ಯದಲ್ಲಿ ಕೇಸರಿಕರಣ ಎನ್ನುವುದು ಒಪ್ಪುವುದಿಲ್ಲ, ಕೇಸರಿ ಎಂದರೆ ಅದು ಬಿಜೆಪಿ ಆಸ್ತಿಯಲ್ಲ. ಕೇಸರಿಯನ್ನು ಅವರಿಗೆ ಬರೆದುಕೊಟ್ಟಿಲ್ಲ. ಎಲ್ಲ ದೇವಾಲಯಗಳಲ್ಲಿಯೂ ಕೇಸರಿ ಇದೆ. ಆದರೆ, ಬಿಜೆಪಿ ಕೇಸರಿಕರಣ ಎಂದು ಹೇಳಿ ಪಠ್ಯಪುಸ್ತಕವನ್ನು ಆರ್‌ಎಸ್‌ಎಸ್ ಅಜೆಂಡಾ ಅಳವಡಿಸಿತ್ತು. ಮೀಸಲಾತಿ ವಿಷಯವಾಗಿ ಬಿಜೆಪಿ ನಾಟಕವಾಡಿತ್ತು. ಕೇವಲ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಎಂದು ಬಿಜೆಪಿ ಘೋಷಣೆ ಮಾಡಿತ್ತು. ಇದು ಕೇವಲ ನಾಟಕ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios