ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್‌ನಿಂದ 1 ಕೋಟಿ ರೂ.!
ಲಾಕ್‌ಡೌನ್ ಸಡಿಲ, ತಮ್ಮ ಊರಿನತ್ತ ಹೊತರಟ ಕಾರ್ಮಿಕರು| ಕಾರ್ಮಿಕರ ಉಚಿತ ಪ್ರಯಾಣಕ್ಕಾಗಿ ಒಂದು ಕೋಟಿ ಮೊತ್ತದ ಚೆಕ್ ನೀಡಿದ ಕೆಪಿಸಿಸಿ| ಸರ್ಕಾರದಿಂದಲೂ ಮೂರು ದಿನ ಉಚಿತ ಬಸ್ ವ್ಯವಸ್ಥೆ
ಬೆಂಗಳೂರು(ಮೇ.03): ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆ ಕಾರ್ಮಿಕರು ತಮ್ಮ ಊರಿಗೆ ಒರಡಲು ಸಿದ್ಧರಾಮಗಿದ್ದಾರೆ. ಹೀಗಿರುವಾಗ ಕಾರ್ಮಿಕರ ಉಚಿತ ಪ್ರಯಾಣಕ್ಕಾಗಿ ಕರ್ನಾಟಕ ಕಾಂಗ್ರೆಸ್ ಘಟಕ ಒಂದು ಕೋಟಿ ರೂಪಾಯಿ ಮೊತ್ತವನ್ನು ನೀಡಿದೆ. ನಗರದಲ್ಲಿ ಸಿಲುಕಿ, ತಮ್ಮ ಊರಿಗೆ ತಲುಪಲು ಒದ್ದಾಡುತ್ತಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕೋರಿ KSRTCಗೆ ಕೆಪಿಸಿಸಿ ಒಂದು ಕೀಟಿ ರೂ. ಚೆಕ್ ನೀಡಿದೆ.
"
ಊರಿಗೆ ತೆರಳುವ ಕಾರ್ಮಿಕರಿಗೆ ಡಬಲ್ ಚಾರ್ಜ್ ವಿಧಿಸುತ್ತಿದ್ದಾಗಲೇ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಲಾಕ್‌ಡೌನ್‌ನಿಂದ ಆದಾಯವಿಲ್ಲದೇ ಕಾರ್ಮಿಕರು ಕಂಗಾಲಾಗಿದ್ದಾರೆ. ಅವರ ಬಳಿ ಹಣವಿಲ್ಲದಾಗ ಡಬಲ್ ಚಾರ್ಜ್ ವಿಧಿಸುವುದು ಸರಿಯಲ್ಲ ಎಂದಿತ್ತು. ಅತ್ತ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇವರಿಗೆ ಉಚಿತ ಪ್ರಯಾಣ ವ್ಯವಸ್ಥೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.ಅಲ್ಲದೇ ಸರ್ಕಾರದ ಬಳಿ ಹಣ ಇಲ್ಲಾಂದ್ರೆ ನಾವೇ ಕೊಡುತ್ತೇವೆ. ಬಿಕ್ಷೆ ಕೇಳಿಯಾದ್ರೂ ನೀಡುತ್ತೇವೆ ಎಂದಿದ್ದರು.
ಸರ್ಕಾರದಿಂದ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ!
ಇದೀಗ ತಮ್ಮ ಮಾತಿನಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೆಎಸ್‌ಆರ್‌ಟಿಸಿಗೆ ಒಂದು ಕೋಟಿ ಮೊತ್ತದ ಚೆಕ್ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮೊದಲಾದವರ ಜೊತೆ ಖುದ್ದು ಡಿಕೆಶಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರನ್ನು ಮಾತನಾಡಿಸದ್ದಾರೆ ಹಾಗೂ ಧೈರ್ಯ ತುಂಬಿದ್ದಾರೆ.
ಇನ್ನು ಕೆಪಿಸಿಸಿ ಈ ಚೆಕ್ ನೀಡುವ ಕೆಲವೇ ಕ್ಷಣಕ್ಕಿಂತ ಮೊದಲು ಸರ್ಕಾರ ಮೂರು ದಿನಗಳವರೆಗೆ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಗೆ ಆದೇಶ ನೀಡಿತ್ತು ಎಂಬುವುದು ಉಲ್ಲೇಖನೀಯ.