Asianet Suvarna News Asianet Suvarna News

ಚಾಮರಾಜಪೇಟೆ ವಸತಿ ಶಾಲೆಗೆ ದಿಢೀರ್ ಭೇಟಿ; 'ಮುದ್ದೆ ಇನ್ನೂ ಬೇಯಿಸಬೇಕಮ್ಮ..' ಎಂದ ಸಿಎಂ

ಇಂದು ಚಾಮರಾಜಪೇಟೆ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ್ದ ವೇಳೆ ವಸತಿ ಶಾಲೆಯಲ್ಲೇ ಮಧ್ಹಾಹ್ನದ ಬಿಸಿಯೂಟ ಸವಿದ ಸಿಎಂ.  ಮುದ್ದೆ ಇನ್ನೂ ಸರಿಯಾಗಿ ಬೇಯಿಸಬೇಕಮ್ಮ, ಯಾರು ಮುದ್ದೆ ಬೇಯಿಸಿದ್ದು, ಬಾರಮ್ಮ ಇಲ್ಲಿ ಅರ್ಧಂಬರ್ಧ ಬೆಂದಿದೆ ಇನ್ನೂ ಚೆನ್ನಾಗಿ ಬೇಯಿಸಬೇಕು ಎಂದರು. 

Karnataka CM siddaramaiah visits morarji resident school in chamarajapete at bengaluru rav
Author
First Published Jul 5, 2024, 7:31 PM IST

ಬೆಂಗಳೂರು (ಜು.5): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. SCSP/TSP ಸಭೆಯ ಬಳಿಕ ಸಚಿವ ಮಹದೇವಪ್ಪ ಅವರೊಂದಿಗೆ ನೇರವಾಗಿ ವಸತಿ ಶಾಲೆಗೆ ಭೇಟಿ ನೀಡಿದರು. ಶಾಲೆಯ ವ್ಯವಸ್ಥೆ ಕುರಿತು ಮಕ್ಕಳಿಂದ, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. 

ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವಸತಿ ಶಾಲೆಯ ಭೋಜನ ಕೊಠಡಿ ಪರಿಶೀಲಿಸಿದರು. ಆ ವೇಳೆ ಮಧ್ಹಾಹ್ನ ಊಟದ ಸಮಯವಾಗಿದ್ದರಿಂದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ(HC mahadevappa) ಅವರೊಂದಿಗೆ ವಸತಿ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.

ಚಾಮರಾಜಪೇಟೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ; ಕನ್ನಡ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ!

ಮುದ್ದೆ, ತರಕಾರಿ ಸಾಂಬಾರ್, ಹಪ್ಪಳ, ಮೆಣಸಿನಕಾಯಿ ಮಿರ್ಚಿ, ಮೈಸೂರು ಪಾಕ್ ಸವಿದರು. ಈ ವೇಳೆ 'ಮುದ್ದೆ ಇನ್ನೂ ಸರಿಯಾಗಿ ಬೇಯಿಸಬೇಕಮ್ಮ, ಯಾರು ಮುದ್ದೆ ಬೇಯಿಸಿದ್ದು, ಬಾರಮ್ಮ ಇಲ್ಲಿ ಅರ್ಧಂಬರ್ಧ ಬೆಂದಿದೆ ಇನ್ನೂ ಚೆನ್ನಾಗಿ ಬೇಯಿಸಬೇಕು ಎಂದರು. ದಿನಾ ಹಿಂಗಾ ಮಾಡ್ತಿರಾ? ಎಂದು ಪ್ರಶ್ನಿಸಿದ ಸಿಎಂ ಇನ್ಮೇಲೆ ಚೆನ್ನಾಗಿ ಅಡುಗೆ ಮಾಡ್ತಿನಿ ಎಂದ ಅಡುಗೆ ಸಹಾಯಕಿ. ಮದ್ಯಾಹ್ನ ಊಟ ಮುಗಿಸಿ ತೆರಳಿದ ಸಿಎಂ ಈ ವೇಳೆ ಚಪ್ಪಾಳೆ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯರ(CM Siddaramaiah)ನ್ನ ಮಕ್ಕಳು ಬೀಳ್ಕೊಟ್ಟರು.

Latest Videos
Follow Us:
Download App:
  • android
  • ios