Asianet Suvarna News Asianet Suvarna News

ಚಾಮರಾಜಪೇಟೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ; ಕನ್ನಡ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.  rSCSP/TSP ಸಭೆಯ ಬಳಿಕ ಸಚಿವ ಮಹದೇವಪ್ಪ ಅವರೊಂದಿಗೆ ನೇರವಾಗಿ ವಸತಿ ಶಾಲೆಗೆ ಭೇಟಿ ನೀಡಿದರು.

CM Siddaramaiah visits chamarajpet morarji residential school today rav
Author
First Published Jul 5, 2024, 6:19 PM IST

ಚಾಮರಾಜಪೇಟೆ (ಜು.5): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. 

SCSP/TSP ಸಭೆಯ ಬಳಿಕ ಸಚಿವ ಮಹದೇವಪ್ಪ ಅವರೊಂದಿಗೆ ನೇರವಾಗಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ. ವಸತಿ ಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಮೊದಲಿಗೆ 10ನೇ ತರಗತಿ ಕೊಠಡಿಗೆ ಸಿಎಂ ಮತ್ತು ಸಚಿವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೋಚಿಂಗ್ ಚನ್ನಾಗಿದ್ಯ? ಶಿಕ್ಷಕರು ಚೆನ್ನಾಗಿ ಪಾಠ ಹೇಳ್ಕೊಡ್ತಾರಾ? ಎಂದು ವಿದ್ಯಾರ್ಥಿಗಳನ್ನ ಪ್ರಶ್ನಿಸಿದ ಸಿಎಂ ಈ ವೇಳೆ ಹೂಂ ಎಂದು ವಿದ್ಯಾರ್ಥಿಗಳು. ಬಳಿಕ ಊಟ ಚೆನ್ನಾಗಿ ಕೊಡ್ತಾರಾ? ಏನೇನು ಊಟ ಕೊಡ್ತಾರೆ? ಎಂದು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ. ಬಳಿಕ ವಿದ್ಯಾರ್ಥಿ ಕುರಿತಾಗಿ ಶಿಕ್ಷಕರ ಬಳಿ ಮಾಹಿತಿ ಪಡೆದುಕೊಂಡರು. ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿದ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರು ವಿವರಿಸಿದರು. 

ಮಂಡ್ಯ: ಜನರ ಅಹವಾಲು ಸ್ವೀಕರಿಸುತ್ತಲೇ ಊಟ ಮಾಡಿದ ಹೆಚ್ಡಿಕೆ!

ಕನ್ನಡ ಮೇಷ್ಟ್ರಾದ ಸಿಎಂ:

ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಸಂಧಿಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು. ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು. ಇದೇ ವೇಳೆ 'ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು?' ಎಂದು ಸಿಎಂ ಪ್ರಶ್ನಿಸಿದ ಸಿಎಂ. ಈ ವೇಳೆ ವಿದ್ಯಾರ್ಥಿಗಳು ನೀವೇ ಆರಂಭಿಸಿದ್ದ ಎಂದ ವಿದ್ಯಾರ್ಥಿಗಳು ಆದರೆ ಇಸವಿ ಹೇಳಲಿಲ್ಲ. ಬಳಿಕ 1994-95 ರಲ್ಲಿ ಆರಂಭಿಸಿದ್ದಾಗಿ ಸಿಎಂ ತಿಳಿಸಿದರು. ಮಕ್ಕಳು ಚಪ್ಪಾಳೆ ತಟ್ಟಿದರು.

Latest Videos
Follow Us:
Download App:
  • android
  • ios