ರಾಯಚೂರು: ಸ್ವಾಭಿಮಾನಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ

ಕರ್ನಾಟಕ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರ್ನಾಟಕ ನಾಮಕರಣ ಆಗಿ 50 ವರ್ಷ ತುಂಬಿದ ಹಿನ್ನೆಲೆ ಗೋಕಾಕ್ ಚಳುವಳಿ ಹಿನ್ನೊಟ-ಮುನ್ನೋಟ ಚರ್ಚೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

Karnataka cm siddaramaiah speech in swabhimana convention at manvi raichur district rav

ರಾಯಚೂರು (ಅ..5): ಕರ್ನಾಟಕ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರ್ನಾಟಕ ನಾಮಕರಣ ಆಗಿ 50 ವರ್ಷ ತುಂಬಿದ ಹಿನ್ನೆಲೆ ಗೋಕಾಕ್ ಚಳುವಳಿ ಹಿನ್ನೊಟ-ಮುನ್ನೋಟ ಚರ್ಚೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಂದು ಮಾನ್ವಿಯಲ್ಲಿ ನಡೆದ ಸ್ವಾಭಿಮಾನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಹಿಂದುಳಿದ, ದಲಿತರಲ್ಲಿ ಸ್ವಾಭಿಮಾನ ಹೆಚ್ಚಾಗಬೇಕು ಅಂತ ಈ ಸಮಾವೇಶ ಮಾಡುತ್ತಿದ್ದೇವೆ. ಯಾರ ಸ್ವಾಭಿಮಾನಕ್ಕೂ ಧಕ್ಕೆಯಾಗಬಾರದು ಎಂದರು.

ಜಿ.ಟಿ. ದೇವೆಗೌಡ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು. ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದ್ದು ಸರಿಯಾಗಿದೆ. ಆದರೆ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ.  ಪಾದಯಾತ್ರೆಯಲ್ಲಿ ಭಾಗವಹಿಸಿರಬಹುದು ಆದರೆ ನೇತೃತ್ವವಹಿಸಿಲ್ಲ. ಅವರೇ ಪಾದಯಾತ್ರೆ ಬೇಡ ಎಂದಿದ್ದರು. ಆದರೆ ಜೆಡಿಎಸ್-ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕೆ ಪಾದಯಾತ್ರೆ ಮಾಡಿದರು ಎಂದರು.

ಉಡಾಫೆ ಮಾತು ಬಿಟ್ಟು ಜನ ಕೊಟ್ಟಿರೋ ಅಧಿಕಾರ ಸರಿಯಾಗಿ ನಿಭಾಯಿಸಲಿ: ಹೆಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ನನ್ನ ರಾಜೀನಾಮೆ ಕೇಳುವ ಆರ್‌ ಅಶೋಕ್‌ ಮೊದಲು ರಾಜೀನಾಮೆ ಕೊಡಬೇಕು. ಅವರು ಮೊದಲು ಕೊಡಲಿ. ಅವರಿಗೆ ರಾಜೀನಾಮೆ ಕೊಡಬೇಕು ಅನ್ನಿಸಿದ್ರೆ ಕೊಟ್ಟುಬಿಡಲಿ. ಆದರೆ ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನು ಹೋರಾಟ ಮಾಡುತ್ತೇನೆ ಸತ್ಯಕ್ಕೆ ಜಯವಿದೆ ಎಂದರು.

ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದರೆ ಚರ್ಚೆ ನಡೆಯುತ್ತಿದೆ. ಬೋಸರಾಜು ಇನ್ಯಾರನ್ನೋ ಭೇಟಿ ಮಾಡಿದರೆ ಚರ್ಚೆ ನಡೆಯುತ್ತವೆ. ಆದರೆ ಈಗ ಯಾಕೆ ಊಹಾಪೋಹ ಎದ್ದಿರೋದು? ಸುಳ್ಳು ಆರೋಪಗಳಿಗೆ ನಾವು ಉತ್ತರ ಕೊಡಲು ಆಗಲ್ಲ. ನಾನು ಜೆಡಿಎಸ್ ನವರಿಗೂ ಭಯಪಡಲ್ಲ, ಬಿಜೆಪಿಯವರಿಗೂ ಭಯಪಡಲ್ಲ. ನಾನು ತಪ್ಪು ಮಾಡಿದ್ರೆ ತಾನೇ ಭಯಪಡೋಕೆ? ನಾನು ತಪ್ಪು ಮಾಡಿದ್ದೇನೆ ಅಂತಾ ಯಾರಾದ್ರೂ ಹೇಳಿದ್ರ? ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios