Asianet Suvarna News Asianet Suvarna News

ಮೋದಿಗೆ ಜನರ ದಾಹಕ್ಕಿಂತ ಚುನಾವಣೆ ಮುಖ್ಯ: ಸಿದ್ದು ಕಿಡಿ

ಚುನಾವಣಾ ಪ್ರಚಾರ ಹಾಗೂ ಕಾವೇರಿ ಸಮಸ್ಯೆ ಇತ್ಯರ್ಥ ಎರಡರಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾವೇರಿ ಸಮಸ್ಯೆ ಇತ್ಯರ್ಥ ಅವರು ಎಂದೂ ತುಳಿಯದ ಹಾದಿ ಎಂದು ಗ್ರಾಫಿಕ್ಸ್‌ ಫೋಟೋ ಮೂಲಕ ಉಲ್ಲೇಖಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

Karnataka CM Siddaramaiah Slams PM Narendra Modi on Kaveri Issue grg
Author
First Published Sep 29, 2023, 5:59 AM IST

ಬೆಂಗಳೂರು(ಸೆ.29):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತದಾರರ ದಾಹ ತಣಿಸುವುದಕ್ಕಿಂತ ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೋಟೋ ಟ್ವೀಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಮೋದಿ ಅವರು ಚುನಾವಣಾ ಪ್ರಚಾರದತ್ತ ಹೆಜ್ಜೆ ಹಾಕುತ್ತಿರುವ ಫೋಟೋ ಹಂಚಿಕೊಂಡಿರುವ ಅವರು, ‘ಎಂದೂ ತುಳಿಯದ ಹಾದಿ’ ಎಂದು ಕರ್ನಾಟಕ ಹಾಗೂ ತಮಿಳುನಾಡಿನ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಪ್ರವೇಶ ಮಾಡದ ಬಗ್ಗೆ ಟೀಕಿಸಿದ್ದಾರೆ.

ಕಾವೇರಿ ನೀರು ಬರಿದಾದ ಮೇಲೆ ತುರ್ತು ಸಭೆ ಕರೆದ ಸಿದ್ದರಾಮಯ್ಯ!

ಚುನಾವಣಾ ಪ್ರಚಾರ ಹಾಗೂ ಕಾವೇರಿ ಸಮಸ್ಯೆ ಇತ್ಯರ್ಥ ಎರಡರಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾವೇರಿ ಸಮಸ್ಯೆ ಇತ್ಯರ್ಥ ಅವರು ಎಂದೂ ತುಳಿಯದ ಹಾದಿ ಎಂದು ಗ್ರಾಫಿಕ್ಸ್‌ ಫೋಟೋ ಮೂಲಕ ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios