ಬೆಂಗಳೂರು(ಜು.01): ಕಬ್ಬನ್‌ ಉದ್ಯಾನವನದಲ್ಲಿ ಉತ್ಪತ್ತಿಯಾಗುವ ಎಲೆ, ಹುಲ್ಲು ಸೇರಿದಂತೆ ಇತರೆ ತ್ಯಾಜ್ಯವನ್ನು ಬಳಸಿ ಎರೆಹುಳು ಗೊಬ್ಬರ ತಯಾರಿಸುವ ಘಟಕವನ್ನು ತೋಟಗಾರಿಕೆ ಇಲಾಖೆ ಪ್ರಾರಂಭಿಸಿದೆ.

ಉದ್ಯಾನವನದಲ್ಲಿನ ತ್ಯಾಜ್ಯವನ್ನು ಈವರೆಗೂ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಇದೀಗ ಎರೆಹುಳು ಗೊಬ್ಬರಕ್ಕೆ ಬಳಸಲಾಗುತ್ತಿದೆ. ಈ ಗೊಬ್ಬರವನ್ನು ಕಬ್ಬನ್‌ ಉದ್ಯಾನ ಸೇರಿದಂತೆ ವಿಧಾನಸೌಧ ಹಾಗೂ ರಾಜಭವನದ ಉದ್ಯಾನಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಕರುವಿನ ಮೈದಡವಿದ ಶ್ರೀಗಳು!

ಎರೆಹುಳು ಗೊಬ್ಬರ ತಯಾರಿಸುವುದಕ್ಕೆ ಮುಖ್ಯಮಂತ್ರಿಗಳ ಮನೆಯಲ್ಲಿನ ಹಸುಗಳ ಸಗಣಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಕೊರತೆಯಾದ ಸಗಣಿಯನ್ನು ಹೊರಭಾಗದಿಂದ ಖರೀದಿ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ (ಕಬ್ಬನ್‌ ಉದ್ಯಾನವನ) ಜಿ.ಗುಣವಂತ ತಿಳಿಸಿದ್ದಾರೆ.

ಲಾಕ್‌ಡೌನ್ ಮಧ್ಯೆ ಸಿಎಂ ಮನೆಗೆ ಹೊಸ ಅತಿಥಿ: ಸಂತಸದಿಂದ ಸ್ವಾಗತಿಸಿದ ಬಿಎಸ್‌ವೈ

ಉದ್ಯಾನದ ಈ ಘಟಕದಲ್ಲಿ ವಾರ್ಷಿಕ ಸುಮಾರು ಐದು ಟನ್‌ ಎರೆಹುಳು ಗೊಬ್ಬರ ಉತ್ಪಾದನೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಸುಮಾರು 1.5 ಟನ್‌ ಎರೆಹುಳು ಗೊಬ್ಬರ ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ಇಲಾಖೆ ಅಧೀನದ ಉದ್ಯಾನವನಗಳಿಗೆ ಬಳಕೆ ಮಾಡುತ್ತಿದ್ದು, ಉತ್ಪಾದನೆ ಹೆಚ್ಚಾದಲ್ಲಿ ಖಾಸಗಿಯವರಿಗೆ ಮಾರುವ ಕುರಿತು ಯೋಚಿಸಬಹುದಾಗಿದೆ ಎಂದು ಅವರು ಹೇಳಿದರು.