ಇಡೀ ದೇಶವೇ 'ಕರ್ನಾಟಕ ಮಾಡೆಲ್' ಅನುಸರಿಸುತ್ತಿದೆ; ಗುಜರಾತ್ ಮಾಡೆಲ್ ಹೋಗಿಬಿಟ್ಟಿದೆ: ಸಚಿವ ಎನ್‌ಎಸ್ ಬೋಸರಾಜು
ನಮ್ಮ ಪಕ್ಷದಲ್ಲಿ ಏನೂ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಇಲ್ಲ. ಏನೂ ಗೊಂದಲವೂ ಇಲ್ಲ. ನಿನ್ನೆ ಸಹ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಇಬ್ಬರೂ ಕುಳಿತು ಮಾತನಾಡಿದ್ದಾರೆ ಎಂದು ಸಣ್ಣ ಮತ್ತು ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸ್ಪಷ್ಟನೆ ನೀಡಿದರು.

ರಾಯಚೂರು (ನ.5): ನಮ್ಮ ಪಕ್ಷದಲ್ಲಿ ಏನೂ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಇಲ್ಲ. ಏನೂ ಗೊಂದಲವೂ ಇಲ್ಲ. ನಿನ್ನೆ ಸಹ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಇಬ್ಬರೂ ಕುಳಿತು ಮಾತನಾಡಿದ್ದಾರೆ ಎಂದು ಸಣ್ಣ ಮತ್ತು ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸ್ಪಷ್ಟನೆ ನೀಡಿದರು.
ಇಂದು ರಾಯಚೂರಿನಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಇದು ಸಹಜ. ರಾಜ್ಯದಲ್ಲಿ ಬಿಜೆಪಿಯವರು ಪೂರ್ತಿ ವಿಫಲರಾಗಿದ್ದಾರೆ. ಈಗ ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ನ ಗ್ಯಾರಂಟಿ ರೀತಿ ಯೋಜನೆಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಯನ್ನು ವಿರೋಧಿಸಿದವರು ಈಗ ನಮ್ಮ ಪಕ್ಷದ ಗ್ಯಾರಂಟಿಯಂತೆ ಮದ್ಯಪ್ರದೇಶದಲ್ಲಿ ನೀಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯಾವ ದೇಶ ಬಡತನದಲ್ಲಿತ್ತೋ, ಇವತ್ತು ಆ ದೇಶ ಜಗತ್ತಿನ 4ನೇ ಆರ್ಥಿಕ ಶಕ್ತಿಯಾಗಿದೆ: ಗೃಹ ಸಚಿವ ಪರಮೇಶ್ವರ್
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ನಾಯಕತ್ವದ ಮುಂದೆ ಬಿಜೆಪಿಯವರು ಎಷ್ಟು ವೀಕ್ ಆಗಿದ್ದಾರೆ ಎಂಬುವುದು ಈಗ ಗೊತ್ತಾಗುತ್ತಿದೆ. ಬಿಜೆಪಿ ನಾಯಕರಿಗೆ ಈಗ ಕನ್ಫ್ಯೂಸ್ ( ಗೊಂದಲ) ಆಗಿದೆ. ಜೆಡಿಎಸ್ ನಾಯಕರ ಕತೆ ಅಂತೂ ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿಯಲ್ಲಿ ಈಗ ಯಾರು ಹೋಗುತ್ತಾರೋ, ಯಾರು ಇರುತ್ತಾರೋ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಏನಾದರೂ ಒಂದು ಮಾತನಾಡಿ ಜನರ ನಡುವೆ ಕನ್ಫ್ಯೂಸ್ ಕ್ರಿಯೇಟ್ ಮಾಡಲು ನೋಡುತ್ತಿದ್ದಾರೆ ಎಂದರು.
ಮುಂದಿನ ಸಿಎಂ ಪರಮೇಶ್ವರ್ ಎಂಬ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವ ರಾಜಣ್ಣ ಅವರು ಸಹ ನಿನ್ನೆಯ ಸಭೆಯಲ್ಲಿ ಇದ್ರು. ಸಿಎಂ ಮಾಡಬೇಕು ಅಂತ ಬಂದಾಗ ಇವರನ್ನ ಮಾಡಬೇಕು ಅಂತ ಹೇಳಿದ್ದಾರೆ. ಜಿ.ಪರಮೇಶ್ವರ ಹೆಸರು ಸಹ ಹೇಳದೇ ಪರೋಕ್ಷವಾಗಿ ಮಾತನಾಡಿದ ಸಚಿವ ಬೋಸರಾಜು.
ಎಂಪಿ ರೇಣುಕಾಚಾರ್ಯ ಸೇರಿ ಹಲವರು ಕೈ ನಾಯಕರ ಭೇಟಿ: ಸಚಿವ ಭೋಸರಾಜ್ ಸ್ಫೋಟಕ ಹೇಳಿಕೆ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿರ್ಧಾರ ಮಾಡುವುದಕ್ಕೆ ಹೈಕಮಾಂಡ್ ಇದೆ. ಆ ಸಂಸ್ಕೃತಿ ಹಿಂದಿನಿಂದ ಬಂದಿದೆ. ಈಗಲೂ ಇದೆ,ಮುಂದೆಯೂ ಮುಂದುವರೆಯುತ್ತೆ. ಯಾರಿಗೆ ಎಂಎಲ್ ಸಿ ಮಾಡಬೇಕು, ನಿಗಮ ಮಂಡಳಿ ನೀಡಬೇಕು. ಲೋಕಲ್ ಲೀಡರ್ ಜೊತೆಗೆ ಮಾತನಾಡಿ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಏನೇ ನಡೆದರೂ ಹೈಕಮಾಂಡ್ ಹೇಳಿದಂತೆ ನಾವು ನಡೆಯುತ್ತೇವೆ. ಯಾವುದೇ ಬಣವಿಲ್ಲ. ಕಾಂಗ್ರೆಸ್ ನಲ್ಲಿರುವುದು ಒಂದೇ ಬಣ ಅದುವೆ ಕಾಂಗ್ರೆಸ್ ಬಣ. ಪಾರ್ಟಿಯಲ್ಲಿ ಎಲ್ಲರೂ ಶಿಸ್ತಿನಿಂದ ಇದ್ದಾರೆ. ಜನರು ನಮಗೆ ಅಶೀರ್ವಾದ ಮಾಡಿದ್ದಾರೆ. ಜನರ ಆಪೇಕ್ಷ ಈಡೇರಿಸಲು ನಾವು ಗ್ಯಾರೆಂಟಿ ತಂದಿದ್ದೇವೆ. ಇಡೀ ದೇಶವೇ ಈಗ ಕರ್ನಾಟಕ ಮಾಡೆಲ್ ಅನುಸರಿಸುತ್ತಿದೆ. ಈಗ ಗುಜರಾತ್ ಮಾಡೆಲ್ ಹೋಗಿಬಿಟ್ಟಿದೆ. ಈಗ ಕರ್ನಾಟಕ ಮಾಡಲ್ ಇಡೀ ರಾಷ್ಟ್ರಕ್ಕೆ ಆಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಾಯಕತ್ವದಲ್ಲಿ ಸರ್ಕಾರ ಬಹಳ ಭದ್ರವಾಗಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ. ಕೆಲವರನ್ನ ಸೇರಿಸಿಕೊಂಡು ತಪ್ಪು ಮೆಸೇಜ್ ಕೊಟ್ಟು. ತಪ್ಪು ದಾರಿ ಹಿಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್- ಬಿಜೆಪಿಯವರು ಸಫಲರಾಗುವುದಿಲ್ಲ ಎಂದರು.