ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕೇವಲ ಮಾಧ್ಯಮ ಸೃಷ್ಟಿ ಎಂದಿರುವ ಶಾಸಕ ಕೊತ್ತೂರು ಮಂಜುನಾಥ್, ಜನರ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದಿದ್ದಾರೆ. ಜಾತಿ ಆಧಾರದಲ್ಲಿ ಸಿಎಂ ಸ್ಥಾನ ಕೇಳುವುದು ತಪ್ಪು, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಅವರು ಸ್ಪಷ್ಟನೆ.

ಕೋಲಾರ (ನ.22): ಹೈಕಮಾಂಡ್‌ನಲ್ಲಿ ತೀರ್ಮಾನ ಆಗಿರೋದು ನಮಗೆ ಗೊತ್ತಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು. ಜನರ ಆಶೀರ್ವಾದ ಇರೋವರೆಗೂ ನಾನು ಸಿಎಂ ಆಗಿರುತ್ತೇನೆ ಅಂತ ಸಿದ್ದರಾಮಯ್ಯ ಹೇಳಿರೋದ್ರಲ್ಲಿ ತಪ್ಪೇನಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಸುರೇಶ್ ಹೇಳಿದಂತೆ ಸಿದ್ದರಾಮಯ್ಯ ಅವರು ಕೊಟ್ಟ ಮಾತು ತಪ್ಪೋರಲ್ಲ. ಅವರು ಏನೂ ಮಾತು ಕೊಟ್ಟಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದರು.

ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಚರ್ಚೆ:

ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಶಾಸಕರು ದೆಹಲಿಗೆ ಹೋಗಬಾರದ? ಎಂದು ಪ್ರಶ್ನಿಸಿದರು.

ಜಾತಿ ಆಧಾರದಲ್ಲಿ ಸಿಎಂ ಸ್ಥಾನ ಕೇಳೋದು ತಪ್ಪು:

ಜಾತಿ ಆಧಾರದಲ್ಲಿ ಸಿಎಂ ಸ್ಥಾನ ಕೇಳೋದು ತಪ್ಪು, ಮಾಗಡಿ ಶಾಸಕರು ಆ ರೀತಿ ಏನಾದರೂ ಕೇಳಿದರೆ ನಾವು ಒಪ್ಪೋದಿಲ್ಲ. ಕರ್ನಾಟಕದಲ್ಲಿ ಎಲ್ಲಾ ಜಾತಿ ಅವರು ಇದ್ದು, ಬೇರೆ ಬೇರೆ ಜಾತಿಗಳಲ್ಲಿ ಇವರಿಗಿಂತ ಹಿರಿಯರು ಇದ್ದಾರೆ. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಂಡು ಹೋಗೋದು ಒಳ್ಳೇಯದು. ಮುಂಬರುವ ಚುನಾವಣೆಯಲ್ಲಿ ಒಕ್ಕಲಿಗರು ಮತ ಹಾಕ್ತಾರೋ ಇಲ್ವೋ ಅನ್ನೋದು ಚುನಾವಣೆ ಸಂದರ್ಭದಲ್ಲಿ ಗೊತ್ತಾಗಲಿದೆ. ಖಂಡಿತವಾಗಿ ಶ್ರಮ ಪಡೋರಿಗೆ ಫಲ ಸಿಗಲಿದೆ ಎಂದರು.