ನವದೆಹಲಿ (ಡಿ. 23): ಜನವರಿ 20ರಿಂದ 24 ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್‌) 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಭಾರತೀಯ ನಿಯೋಗದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಇರಲಿದ್ದಾರೆ.

ಮಂಗಳೂರು ಗೋಲಿಬಾರ್, ಸಿಐಡಿ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ!

ದಾವೋಸ್‌ಗೆ ತೆರಳಲಿರುವ ಭಾರತದ ನಿಯೋಗದ ಪಟ್ಟಿಅಂತಿಮಗೊಂಡಿದ್ದು, ಇವರಲ್ಲಿ ‘ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್‌ ಹಾಗೂ ಮನಸುಖ್‌ ಮಾಂಡವೀಯ, ಮುಖ್ಯಮಂತ್ರಿಗಳಾದ ಅಮರಿಂದರ್‌ ಸಿಂಗ್‌, ಕಮಲ್‌ನಾಥ್‌, ಬಿ.ಎಸ್‌. ಯಡಿಯೂರಪ್ಪ ಹಾಗೂ ವಿವಿಧ ಭಾರತೀಯ ಕಂಪನಿಗಳ 100 ಸಿಇಒಗಳು ಇರಲಿದ್ದಾರೆ’ ಎಂದು ತಿಳಿಸಲಾಗಿದೆ.

ಕಡೆ​ಗ​ಣಿ​ಸಿ​ದರೆ ಬೇರೆ​ ದಾರಿ ತುಳಿವೆ: ಬಿಜೆಪಿಗೆ ಶಾಸಕನ ಎಚ್ಚರಿಕೆ ಸಂದೇಶ!

ಇದೇ ವೇಳೆ, ವಿಶ್ವದ ಅನೇಕ ಗಣ್ಯರು ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಭಾಗಿಯಾಗುವ ನಿರೀಕ್ಷೆಯಿದೆ. ಭಾರತದ ಸಿಇಒಗಳ ಪಟ್ಟಿಯಲ್ಲಿ ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ, ಸಜ್ಜನ್‌ ಜಿಂದಾಲ್‌, ನಂದನ್‌ ನಿಲೇಕಣಿ, ಆನಂದ್‌ ಮಹೀಂದ್ರಾ, ಉದಯ್‌ ಕೋಟಕ್‌, ರಾಹುಲ್‌ ಬಜಾಜ್‌, ಮೊದಲಾದವರಿದ್ದಾರೆ.