ಮಂಗಳೂರು[ಡಿ.23]: ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಘಟನೆಯ ಹಿನ್ನೆಲೆ ಮತ್ತು ಸತ್ಯಾಸತ್ಯ ತಿಳಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ಆದೇಶಿಸಿದೆ.

"

ಕಲ್ಲು ತೂರಾಟ ನಡೆಸಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು ಹಾಗೂ ಶಸ್ತ್ರಾಗಾರದಲ್ಲಿದ್ದ ಶಸ್ತ್ರಗಳನ್ನು ದುರುಪಯೋಗಪಡಿಸಿಕೊಳ್ಳಲು ಗೋಡೆ ಒಡೆಯಲು ಮುಂದಾದವರ ಮೇಲೆ ಗೋಲಿಬಾರ್‌ ನಡೆಸಲಾಗಿದೆ. ಈ ಸಂಬಂಧ ಸತ್ಯಾಸತ್ಯ ತಿಳಿಯುವುದಕ್ಕಾಗಿ ಸೂಕ್ತ ತನಿಖೆ ನಡೆಸಲಾಗುವುದು ಎಂದು ಬಿ. ಎಸ್. ಯಡಿಯೂರಪ್ಪ ಈ ಹಿಂದೆ ತಿಳಿಸಿದ್ದರು. ಆದರೀಗ ಪ್ರಕರಣ ನಡೆದ 4 ದಿನಗಳ ಬಳಿಕ ಇದರ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗುವುದೆಂದು ಸಿಎಂ ತಿಳಿಸಿದ್ದಾರೆ.

ಅಲ್ಲದೇ 'ಪೊಲೀಸ್ ಠಾಣೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಮಂಗಳೂರು ಶಾಂತವಾಗಿರುತ್ತೆ ಎಂದು ಭಾವಿಸಿದ್ದೇನೆ. ಪೌರತ್ವ ಕಾಯಿದೆಯಿಂದ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಆಗಲ್ಲ' ಎಂದಿದ್ದಾರೆ

ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಬೆನ್ನಲ್ಲೇ ಮಂಗಳೂರು ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು.