ಬೆಂಗಳೂರು(ಸೆ.30): ಬಾಬ್ರಿ ಮಸೀದಿ ಧ್ವಂಸ ಪ್ರಕರ ಸಂಬಂಧ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಜೋಷಿ ಸೇರಿ ಎಲ್ಲಾ 32 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಸತ್ಯಕ್ಕೆ ಜಯ ಆಗಿದೆ. ಅಡ್ವಾಣಿಯಂತಹ ಮಹಾನ್ ವ್ಯಕ್ತಿಗೆ ಇಂದು ನ್ಯಾಯ ಸಿಕ್ಕಿದೆ ಎಂದಿದ್ದಾರೆ.

"

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!

ಈ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿರುವ ಬಿ. ಎಸ್, ಯಡಿಯೂರಪ್ಪ 'ಕೋರ್ಟ್‌ ಇದೊಂದು ಪೂರ್ವ ನಿಯೋಜಿತ ಕೃತ್ಯ ಅಲ್ಲ ಎಂದಿದೆ. ಸತ್ಯಕ್ಕೆ ಜಯ ಆಗಿದೆ. . ಈ ಹೋರಾಟದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿ ಇದ್ದೆ. ಈ ತೀರ್ಪು ನನಗೆ ಸಂತಸ ತಂದಿದೆ, ಹೋರಾಟಗಾರರಿಗೆ ಯಾವತ್ತು ಅನ್ಯಾಯ ಆಗಲ್ಲ ಎಂದು ಸಾಬೀತಾಗಿದೆ  ಎಂದಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪು , ಕಾಂಗ್ರೆಸ್ ಕ್ಷಮೆ ಕೇಳಲಿ : ಸಿ.ಟಿ ರವಿ

ಇನ್ನು ಅಡ್ವಾಣಿ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ಅಡ್ವಾಣಿ ಅವರ ಅಂದಿನ ಐತಿಹಾಸಿಕ ಭಾಷಣ ನಮಗೆಲ್ಲಾ ಪ್ರೇರಣೆ ಆಗಿತ್ತು. ಅಂತಹ ಮಹಾನ್ ವ್ಯಕ್ತಿಗೆ ಇಂದು ನ್ಯಾಯ ಸಿಕ್ಕಿದೆ. ಹೋರಾಟಗಾರರಿಗೆ ನ್ಯಾಯ ಶತಸಿದ್ಧ ಎನ್ನೋದು ಸಾಬೀತಾಗಿದೆ ಎಂದಿದ್ದಾರೆ.