Asianet Suvarna News Asianet Suvarna News

ಕನ್ನಡಿಗರಿಗೆ ಒಲಿಯದ ಕಾವೇರಿ: ಮುಂದಿನ 15 ದಿನ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಆದೇಶ

ಕರ್ನಾಟಕದಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಆದೇಶ ನೀಡಿದೆ.

 

Karnataka Cauvery water dispute 3000 cusecs water flow to Tamil Nadu CWRC order sat
Author
First Published Oct 11, 2023, 3:58 PM IST

ನವದೆಹಲಿ (ಅ.11): ಕರ್ನಾಟಕ - ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಕಾವೇರಿ ನೀರು ನಿಯಂತ್ರಣಾ ಸಮಿತಿ (Cauvery Water Regulatory Committee-CWRC) ಸಭೆಯಲ್ಲಿ ಪುನಃ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿದೆ. ಈಗ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್‌ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದೆ.

ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಈ ಹಿಂದೆ 226 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯಲು ಕಾವೇರಿ ನೀರಿನ ಸಮಸ್ಯೆಯಾಗಲಿದೆ ಎಂದು ಕರ್ನಾಟಕ ಸರ್ಕಾರ ಆತಂಕದಲ್ಲಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ನಮ್ಮ ರೈತರ ಬೆಳೆಹಳು ಒಣಗುತ್ತಿವೆ ಮುಂದಿನ 15 ದಿನಗಳಲ್ಲಿ ತಲಾ 13,000 ಕ್ಯೂಸೆಕ್‌ ನೀರು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ವಾದವನ್ನು ಮಂಡಿಸಿದೆ. ಆದರೆ, ಸಭೆಯಲ್ಲಿ ಕರ್ನಾಟಕದ ಸಂಕಷ್ಟವನ್ನು ಪರಿಗಣಿಸಿದ ಸಿಡಬ್ಲ್ಯೂಆರ್‌ಸಿ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್‌ ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕಕ್ಕೆ ಭಾರಿ ದೊಡ್ಡ ಹಿನ್ನಡೆಯಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಲಕ್ಷಣಗಳು ಕಂಡುಬರುತ್ತಿವೆ. 

ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ ಮದ್ದಿನೇನಿ ಪತಿಯೇ ಕಾರಣ: ವಿದ್ಯಾ ಹಿರೇಮಠ ಆರೋಪ

Karnataka Cauvery water dispute 3000 cusecs water flow to Tamil Nadu CWRC order sat

ಸಿಡಬ್ಲ್ಯೂಆರ್‌ಸಿ ಆದೇಶ ನಿರೀಕ್ಷಿತವೆಂದ ಸಂಸದೆ ಸುಮಲತಾ: ಕಾವೇರಿ ನೀರು ಹಂಚಿಕೆಯ ಸಿಡಬ್ಲ್ಯೂಆರ್‌ಸಿ ಆದೇಶದ ಕುರಿತು ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು, CWRC ಆದೇಶ ನಿರೀಕ್ಷಿತವಾಗಿದೆ. ಯಾಕೆ ನಮ್ಮ ಅಧಿಕಾರಿಗಳು ಸರಿಯಾಗಿ ಮನವರಿಕೆ ಮಾಡಲಾಗ್ತಿಲ್ಲ ಗೊತ್ತಾಗ್ತಿಲ್ಲ. ದೇವರ ದಯೆಯಿಂದ ಮಳೆ ಬಂದು ಕೆಆರ್‌ಎಸ್‌ 100 ತಲುಪಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಈಗ ಆಗಲೇಬೇಕು. ತಮಿಳುನಾಡು ಒತ್ತಡ ಹೇರುವ ಹಾಗೇ ನಮ್ಮವರು ಹೋರಾಟ ಮಾಡಬೇಕು. ಸರ್ಕಾರದ ಸಭೆಗಳಲ್ಲೂ ಭಾಗಿಯಾಗಿ ಸಲಹೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಶಾಸಕ ಮುನಿರತ್ನ: ಅನುದಾನ ಬಿಡುಗಡೆಗೆ ಮನವಿ ಸಲ್ಲಿಕೆ

ನೀರು ಬಿಡೊಲ್ಲವೆಂದು ಹೇಳಲು ಆಗೊಲ್ಲ:  ತಮಿಳುನಾಡು, ಕರ್ನಾಟಕ ಸರ್ಕಾರ ಪರಸ್ಪರ ಕುಳಿತು ಮಾತನಾಡಬೇಕು. ಹಾಗಾದರೆ ಮಾತ್ರ ಸಮಸ್ಯೆ ಬಗೆಹರಿಸಬಹುದು. ನಮ್ಮ ಸರ್ಕಾರದ ಪ್ರಯತ್ನ ರಾಜ್ಯದ ಹಿತಕಾಯಲು ಸಾಕಾಗುತ್ತಿಲ್ಲ. ನೀರಿನ ವಿಚಾರ ನಮ್ಮ‌ ಜನರು ಭಾವನಾತ್ಮಕವಾಗಿ ತೆಗೆದುಕೊಳ್ತಾರೆ. ಆದರೆ, ನಾವು ವಾಸ್ತವಿಕವಾಗಿ ಮಾತನಾಡಬೇಕು. ನೀರು ಬಿಡಲ್ಲ ಎಂದು ಹೇಳಿದರೆ ಸುಪ್ರೀಂ ಕೋರ್ಟ್ ತಕ್ಷಣ ವಜಾ ಮಾಡಿಬಿಡುತ್ತದೆ. ಇಲ್ಲಿ ಒಂದು ಹನಿ ನೀರು ಬಿಡಲ್ಲ ಎಂದು ಹೇಳುವುದು ಸುಲಭ. ಆದರೆ ಹರಿಯುವ ನೀರನ್ನ ಬಿಡಲ್ಲ ಎಂದು ಹೇಳಲು ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದರು.

Follow Us:
Download App:
  • android
  • ios