ಬೆಂಗಳೂರು, (ಜ.16): ಟ್ರಾಯ್‌ನ ಹೊಸ ಕೇಬಲ್ ನಿಯಮಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳು ಜನವರಿ 24ರಂದು ರಾಜ್ಯಾದ್ಯಾಂತ ಕೇಬಲ್ ಬಂದ್ ಮಾಡಲಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಇಂದು [ಬುಧವಾರ] ಕೇಬಲ್ ಆಪರೇಟರ್‌ಗಳು ಸಭೆ ನಡೆಸಿದ್ದು, ಟ್ರಾಯ್ ನ ಹೊಸ ನೀತಿ ಮತ್ತು ದರ ಪದ್ಧತಿ ವಿರುದ್ಧ ಸಾಮೂಹಿಕವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. 

ಟೀವಿ ಚಾನಲ್ ಹೊಸ ದರ ಫೆ. 1 ಕ್ಕೆ ಮುಂದೂಡಿಕೆ

ಫೆಬ್ರವರಿ 1ರಿಂದ ಟ್ರಾಯ್ ಹೊಸ ದರಗಳು ಮತ್ತು ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ದರ ಮತ್ತು ನಿಯಮಗಳನ್ನು ವಿರೋಧಿಸಿ ಆಪರೇಟರ್‌ಗಳು ಪ್ರತಿಭಟನೆ ಮಾಡಲಿದ್ದಾರೆ. ಇದ್ರಿಂದ ಜನವರಿ 24 ರಂದು ಕೇಬಲ್ ಟಿವಿ ಬಂದ್ ಆಗಲಿದೆ.

ಕೇಬಲ್‌, ಡಿಟಿಎಚ್‌ ನಿಜಕ್ಕೂ ದುಬಾರಿಯಾಗುತ್ತಾ?

ಜನವರಿ 24 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕದಲ್ಲಿ ಕೇಬಲ್ ಬಂದ್ ಆಗಲಿದೆ. ಕರ್ನಾಟಕದಾದ್ಯಂತ ಕೇಬಲ್ ಟಿವಿ ಬಂದ್ ಆಗಲಿದೆ. ಟ್ರಾಯ್‌ ನೀತಿಗಳ ವಿರುದ್ಧ ಕೇಬಲ್ ಆಪರೇಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ. 

ಹಿನ್ನಲೆಯಲ್ಲಿ ಸುಪ್ರಿಂ ತೀರ್ಪನ್ನು ಮರುಪರಿಶೀಲನೆಗೆ ಅರ್ಜಿ ಹಾಕಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.