ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯ ಕನಸು ಒಂದು ಹಂತಕ್ಕೆ ಬಂದು ತಲುಪಿದ್ದು, ಆರು ಕಾರಿಡಾರ್ ಮಾರ್ಗದ ಯೋ ಜನೆಯ  ಸಾಧ್ಯತಾ ವರದಿಗೆ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.

ಬೆಂಗಳೂರು :  ಜನಸಂದಣಿ, ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯ ಕನಸು ಒಂದು ಹಂತಕ್ಕೆ ಬಂದು ತಲುಪಿದ್ದು, ಆರು ಕಾರಿಡಾರ್ ಮಾರ್ಗದ ಯೋ ಜನೆಯ ಸಾಧ್ಯತಾ ವರದಿಗೆ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಯ ಕಾರ್ಯಸಾಧು ವರದಿಗೆ ಅನುಮೋದನೆ ನೀಡಿದೆ. ಸಬ್‌ಅರ್ಬನ್ ರೈಲು ಯೋಜನೆಯಡಿ ಉದ್ದೇಶಿಸಿರುವ ಆರು ಕಾರಿಡಾರ್ ರೈಲು ಮಾರ್ಗಕ್ಕೆ ರೈಟ್ ಸಂಸ್ಥೆಯ ಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ. 

23,093 ಕೋಟಿ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶೇ.20 ಕೇಂದ್ರ, ಶೇ.20ರಾಜ್ಯ ಸರ್ಕಾರ ಮತ್ತು ಶೇ.60 ವೆಚ್ಚವನ್ನು ಸಾಲದ ಮೂಲಕ ಭರಿಸ ಲು ತೀರ್ಮಾನಿಸಲಾಗಿದೆ. ಬೆಂಗಳೂರು ಮೆಜೆಸ್ಟಿಕ್ ನಿಂದ ದೇವನಹಳ್ಳಿ, ವಸಂತನರಸಾಪುರದಿಂದ ತುಮಕೂರು ಮಾರ್ಗವಾಗಿ ಬೈಯಪ್ಪನ ಹಳ್ಳಿ, ರಾಮನಗರ ದಿಂದ ಜ್ಞಾನಭಾರತಿ, ವೈಟ್‌ಫೀಲ್ಡ್‌ನಿಂದ ಬಂಗಾರ ಪೇಟೆ, ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ಮತ್ತು ಹೊಸೂರಿನಿಂದ ದೊಡ್ಡಬಳ್ಳಾಪುರದವರೆಗೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಆರು ವರ್ಷಗಳ ಕಾಲಾವಧಿಯಲ್ಲಿ ಯೋಜನೆ ಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. 2019 - 20ರಿಂದ 2014- 25ನೇ ಸಾಲಿನ ಅವಧಿವರೆಗೆ ಹಣವನ್ನು ಪಾವತಿಸಬೇಕಾಗುತ್ತದೆ. ಕೆಂಗೇರಿ- ಕೆಎಸ್‌ಆರ್ (ಮೆಜೆಸ್ಟಿಕ್)- ಬೆಂಗಳೂರು ಕಟೋ ನ್ಮೆಂಟ್- ಬೈಯಪ್ಪನಹಳ್ಳಿ- ಕೆ.ಆರ್.ಪುರ- ವೈಟ್ ಫೀಲ್ಡ್ ಮಾರ್ಗದ ಉದ್ದವು 35.47 ಕಿ.ಮೀ. ಇದೆ. ಒಟ್ಟು 11 ನಿಲ್ದಾಣಗಳು ಉಪನಗರದ ಪ್ರಸ್ತಾವನೆ ಇದೆ. ಇದರಲ್ಲಿ 6 ನಿಲ್ದಾಣಗಳು ನೆಲಮಟ್ಟ ದಲ್ಲಿ, 5 ನಿಲ್ದಾಣಗಳು ಮೇಲ್ಸೇತುವೆ ಮಟ್ಟದಲ್ಲಿ ಮತ್ತು 8 ನಿಲ್ದಾಣಗಳು ಭಾರತೀಯ ರೈಲ್ವೆ ಲೈನುಗಳಲ್ಲಿ ಇರಲಿದೆ. ಕೆಎಸ್‌ಆರ್- ಯಶವಂತಪುರ- ಲೊಟ್ಟಗೊಲ್ಲಹಳ್ಳಿ- ಕೊಡಿಗೇಹಳ್ಳಿ- ಯಲಹಂಕ- ರಾಜಾನುಕುಂಟೆ- ದೇವನಹಳ್ಳಿ ಮಾರ್ಗದ ಉದ್ದವು 
24.88 ಕಿ.ಮೀ. ಇದೆ. ಒಟ್ಟು 14 ನಿಲ್ದಾಣಗಳಿದ್ದು, ಇದರಲ್ಲಿ ನೆಲಮಟ್ಟದಲ್ಲಿ ೫ ನಿಲ್ದಾಣಗಳು ಮತ್ತು ಮೇಲ್ಸೇತುವೆಯಲ್ಲಿ 9 ನಿಲ್ದಾಣಗಳು ಇರಲಿವೆ ಎಂದು ವಿವರಿಸಿದರು.