11:01 AM (IST) Apr 09

Karnataka Assembly by election 2026 Live:ದಾವಣಗೆರೆ: ಅತಿಸೂಕ್ಷ್ಮ ಮತಗಟ್ಟೆ ಪರಿಶೀಲನೆ

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾಣೆಗೆ ಮತದಾನ. ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಡಿಸಿಎಸ್‌ಪಿ. 284 ಮತಗಟ್ಟೆಗಳಲ್ಲಿ 74 ಅತಿಸೂಕ್ಷ್ಮ ಮತಗಟ್ಟೆಗಳು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್ಪಿ ಶೇಖರ್ ಹೆಚ್.ಡಿ. ಮತಗಟ್ಟೆಗಳಿಗೆ ಭೇಟಿ. ದಾವಣಗೆರೆ ನಗರದ ಬಾಷಾ ನಗರದ ಮಿಲ್ಲತ್ ಸಂಸ್ಥೆಯ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಿಗೆ ಭೇಟಿ. ಮತಗಟ್ಟೆ ಸಂಖ್ಯೆ 94, 95, 96ಕ್ಕೆ ಭೇಟಿ ನೀಡಿ ಪರಿಶೀಲನೆ. ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. 

ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಉತ್ತಮ ಮತದಾನ ನಡೆಯುತ್ತಿದೆ. ಮತದಾನ ಪ್ರಮಾಣ ಕಡಿಮೆ ಇರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಎಂದ ಡಿಸಿ ಗಂಗಾಧರಸ್ವಾಮಿ. ಅತಿಸೂಕ್ಷ್ಮ ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಿದ್ದೇವೆ ಎಂದ ಎಸ್‌ಪಿ ಶೇಖರ್ ಹೆಚ್.ಟಿ.

10:56 AM (IST) Apr 09

Karnataka Assembly by election 2026 Live:ಯುವಕರೇ ನಾಚಿಸುವಂತೆ ಹಿರಿಯರಿಂದ ದಾವಣೆಗರೆಯಲ್ಲಿ ಮತದಾನ

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾನ ಮಾಡೋದ್ರಲ್ಲಿ ಹಿರಿಯ ಮತದಾರರೇ ಮುಂದು. ವೃದ್ದಾಪ್ಯ, ಅನಾರೋಗ್ಯ, ದೈಹಿಕ ಸಮಸ್ಯೆಗಳಿದ್ದರೂ ಬಂದು ಉತ್ಸಾಹದಿಂದ ಮತದಾನ. ದಾವಣಗೆರೆ ದಕ್ಷಿಣ ಕ್ಷೇತ್ರದ ಹದಡಿ ಗ್ರಾಮದಲ್ಲಿ ಸರತಿ ಸಾಲಿನಲ್ಲಿ ಕುಳಿತು ಹಿರಿಯ ಮತದಾರರಿಂದ ಮತದಾನ. ಹದಡಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಡ ಶಾಲೆಯಲ್ಲಿರೋ 5 ಭೂತ್ ಗಳಲ್ಲಿ ಬಿರುಸಿನ ಮತದಾನ. ನಮ್ಮ ಕರ್ತವ್ಯ, ಬೆಳಿಗ್ಗೆ 5 ಗಂಟೆ ಗೆ ಬನ್ನಿ ಅಂದರೂ ನಾವು ಓಟ್ ಮಾಡ್ತೀವಿ ಎಂದ ಹಿರಿಯ ಮತದಾರರು

10:33 AM (IST) Apr 09

Karnataka Assembly by election 2026 Live:ಬಾಗಲಕೋಟೆ ಸಮರ: ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಚರಂತಿಮಠ

ಬಾಗಲಕೋಟೆ: ಹಳದಿ ಶಾಲು ಹಾಕಿಕೊಂಡು ಪತ್ನಿ ಹಾಗೂ ಕುಟುಂಬ ಸಮೇತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮತಗಟ್ಟೆ ಸಂಖ್ಯೆ 166ರಲ್ಲಿ ಮತದಾನ ಮಾಡಿದರು. 

ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮವಾಗಿ ಮತದಾನ ಆಗ್ತಿದೆ. ಸಿಎಂ ಸೇರಿ ಎಲ್ಲರೂ ಪ್ರಚಾರ ಮಾಡಿ ಹೋದ್ರು. ಬಂದವರೆಲ್ಲಾ ಹೋಗಲೇಬೇಕಲ್ಲ. ಆದ್ರೆ ಕ್ಷೇತ್ರದಲ್ಲಿರೋರು ಅವರು ಮತದಾನ ಮಾಡ್ತಿದ್ದಾರೆ. ಸಿಎಂ ಇಲ್ಲೇನೂ ಮತದಾನ ಮಾಡೋದಿಲ್ಲ. ಕೆಲವರು ಬೆಳಗಾವಿ ಸೇರಿ ಹೊರ ಜಿಲ್ಲೆಯವರು ಇಲ್ಲಿರೋ ಮಾಹಿತಿ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಲಾಡ್ಜ್ ನಲ್ಲಿ ಬಿಡಿಸಿ ಕಳಿಸಿದ್ದಾರೆ.

ಆದ್ರೆ ಕೆಲವರು ಮನೆ ಮಾಡಿಕೊಂಡಿದ್ದಾರೆ. ಸರಾಯಿ, ಹಣ ಹಂಚುವ ಕೆಲಸ ಮಾಡ್ತಿದ್ದಾರೆ. ಗೂಂಡಾಗಿರಿ ಮಾಡಿ ಇಲ್ಲಿ ಗಲಾಟೆ ಮಾಡಿಸಬೇಕು ಅಂತ ಅವರನ್ನು ಕರೆತಂದಿದ್ದಾರೆ. ಚುನಾವಣೆ ವೇಳೆ ಗೃಹಲಕ್ಷ್ಮೀ ಹಣ ಹಾಕಿದ್ದಕ್ಕೆ ಚುನಾವಣೆ ಆಯೋಗ ಪ್ರಶ್ನೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಚುನಾವಣೆ ಆಯೋಗದ ಹೇಳಿಕೆಗೆ ಬಗ್ಗಲ್ಲ ಅಂತ ಹೇಳಿದ್ದಾರೆ. ಇದು ಸಿಎಂ ಅವರ ದುಹಂಕಾರದ ವರ್ತನೆ ತೋರಿಸುತ್ತೆ. ಚುನಾವಣೆ ಆಯೋಗ ಸ್ವತಂತ್ರವಾಗಿರೋದು, ಎಲ್ಲರೂ ಮಾನ್ಯ ಮಾಡಬೇಕು. ರಾಜ್ಯದ ಸಿಎಂ ಆಗಿ ಈ ರೀತಿ ಮಾತಾಡೋದು ಶೋಭೆ ತರುವುದಿಲ್ಲ. ಈ ಬಾರಿ ಯುವಕರು ಸೇರಿ ಎಲ್ಲರೂ ಒಳ್ಳೆಯ ಮತದಾನ ಮಾಡಬೇಕು. ಈ ಸಲ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ವೀರಣ್ಣ ಚರಂತಿಮಠ.

09:34 AM (IST) Apr 09

Karnataka Assembly by election 2026 Live:ದಾವಣಗೆರೆ ದಕ್ಷಿಣದಲ್ಲಿ ಬೆ.9 ಗಂಟೆಯವರೆಗೆ ಶೇ. 8.90ರಷ್ಟು ವೋಟಿಂಗ್‌

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 9 ಗಂಟೆಯವರೆಗೆ 8.90% ಮತದಾನ. ದಾವಣಗೆರೆಯ 284 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ. ನಗರ ಪ್ರದೇಶದ 234, ಗ್ರಾಮೀಣ ಪ್ರದೇಶದ 50 ಮತಗಟ್ಟೆಗಳಲ್ಲಿ ವೋಟಿಂಗ್

09:30 AM (IST) Apr 09

Karnataka Assembly by election 2026 Live:ದಾವಣಗೆರೆ ಉಪಚುನಾವಣೆ - ಸಖಿ ಮತಗಟ್ಟೆಯಲ್ಲಿ ಮತದಾನ ಸಂಭ್ರಮ, ಹಿರಿಯರು-ಅಂಗವಿಕಲರ ವೋಟಿಂಗ್‌

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಶಿರ್ಮಗೊಂಡನಹಳ್ಳಿಯ ಆಕರ್ಷಕ ಸಖಿ ಮತಗಟ್ಟೆ ಎಲ್ಲರ ಗಮನ ಸೆಳೆದಿದೆ. ಯುವಕರು, ಹಿರಿಯರು ಹಾಗೂ ಅಂಗವಿಕಲರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

Read Full Story
09:18 AM (IST) Apr 09

Karnataka Assembly by election 2026 Live:ದಾವಣಗೆರೆ: ಕಾಲೇಜು ಆರಂಭಕ್ಕೂ ಮುನ್ನವೇ ಬಂದು ಮತ ಚಲಾಯಿಸಿದ ವಿದ್ಯಾರ್ಥಿಗಳು;

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಯುವ ಸಮೂಹ ಅಭೂತಪೂರ್ವ ಆಸಕ್ತಿ ತೋರುತ್ತಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ತಮ್ಮ ತರಗತಿಗಳು ಆರಂಭವಾಗುವ ಮುನ್ನವೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

08:19 AM (IST) Apr 09

Karnataka Assembly by election 2026 Live:Bagalkote By-election 2026: ಬಾಗಲಕೋಟೆ ಉಪಕದನ, ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ

ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜಿಲ್ಲಾಡಳಿತ ಶಾಂತಿಯುತ ಮತದಾನಕ್ಕಾಗಿ 322 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಚುನಾವಣಾ ಸಿಬ್ಬಂದಿ ಅಗತ್ಯ ಸಾಮಗ್ರಿಗಳೊಂದಿಗೆ ತಮ್ಮ ಕರ್ತವ್ಯಕ್ಕೆ.

Read Full Story
08:19 AM (IST) Apr 09

Karnataka Assembly by election 2026 Live:ರಾಜ್ಯದ 2 ಕ್ಷೇತ್ರಕ್ಕೆ ಇಂದು ಉಪಕದನ - ದಾವಣಗೆರೆ, ಬಾಗಲಕೋಟೇಲಿ ಮತದಾನ । ಮೇ 4ಕ್ಕೆ ಫಲಿತಾಂಶ , ಕಾಂಗ್ರೆಸ್‌- ಬಿಜೆಪಿ ನಡುವೆ ಭರ್ಜರಿ ಪೈಪೋಟಿ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಕಾಂಗ್ರೆಸ್ ಹಿರಿಯ ನಾಯಕರ ನಿಧನದಿಂದ ತೆರವಾದ ಈ ಕ್ಷೇತ್ರಗಳಲ್ಲಿ, ಅನುಕಂಪದ ಅಲೆ ಮತ್ತು ಸರ್ಕಾರದ ಗ್ಯಾರಂಟಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರಲಿವೆಯೇ?

Read Full Story