ಬೆಳಗಾವಿ (ನ. 19): ಗೋಕಾಕ್‌ ಕ್ಷೇತ್ರದ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ ಅವರ ಆದಾಯದಲ್ಲಿ ಕಡಿತವಾಗಿದೆ. 2018ರ ಚುನಾವಣೆಯಲ್ಲಿ .122.77 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ಆದರೆ, ಈಗ .90.50 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಅಂದರೆ .32.27 ಕೋಟಿ ಆದಾಯದಲ್ಲಿ ಕಡಿತವಾಗಿದೆ.

ಯಶವಂತಪುರ ಕೈ ಅಭ್ಯರ್ಥಿ ನಾಗರಾಜ್ ಬಳಿ ಪತ್ನಿಗಿಂತಲೂ ಹೆಚ್ಚು ಚಿನ್ನ!

ರಮೇಶ್‌ ತಮ್ಮ ಹೆಸರಿನಲ್ಲಿ 11.29 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಜಯಶ್ರೀ ಜಾರಕಿಹೊಳಿ ಹೆಸರಿನಲ್ಲಿ .9.20 ಕೋಟಿ ಹಾಗೂ ಪುತ್ರ ಅಮರನಾಥ ಹೆಸರಿನಲ್ಲಿ .9.61 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅದರಂತೆ ತಮ್ಮ ಹೆಸರಿನಲ್ಲಿ .21.14 ಕೋಟಿ, ಪತ್ನಿ ಹೆಸರಿನಲ್ಲಿ .29.26 ಕೋಟಿ ಹಾಗೂ ಪುತ್ರನ ಹೆಸರಿನಲ್ಲಿ 10 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ತಮ್ಮ ಹೆಸರಿನಲ್ಲಿ .5.22 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ .2.56 ಕೋಟಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ವಿವಿಧ ಬ್ಯಾಂಕ್‌ ಸೊಸೈಟಿಗಳಲ್ಲಿ ಸಾಲ ಮಾಡಿದ್ದಾರೆ. ತಮ್ಮ ಬಳಿ .57240, ಪತ್ನಿ ಬಳಿ .41441 ಹಾಗೂ ಪುತ್ರನ ಬಳಿ .17510 ನಗದು ಹಣ ಹೊಂದಿದ್ದಾರೆ.