Karnataka Budget Session 2023: ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ಫೆಬ್ರುವರಿ 17ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, 24ರವರೆಗೂ ಅಧಿವೇಶನ ನಡೆಯಲಿದೆ. ಅದಕ್ಕೂ ಮುನ್ನ ಇಂದು ರಾಜ್ಯಪಾಲ ಥಾವರ್‌ಚಂದ ಗಗೆಹ್ಲೋಟ್ ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.
ಬೆಂಗಳೂರು (ಫೆ.10) : ಕರ್ನಾಟಕ ವಿಧಾನ ಪರಿಷತ್ತಿನ ಸನ್ಮಾನ, ಸಭಾಪತಿಗಳೇ,
'ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರೇ, ಸನ್ಮಾನ್ಯ ಕರ್ನಾಟಕದ ಮುಖ್ಯಮಂತ್ರಿಯವರೇ, ಸನ್ಮಾನ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರೇ, ಸನ್ಮಾನ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೇ, ಸನ್ಮಾನ್ಯ ಸಚಿವರೇ ಹಾಗೂ ಕರ್ನಾಟಕ ವಿಧಾನ ಮಂಡಲದ ಸನ್ಮಾನ್ಯ ಸದಸ್ಯರೇ, ಕರ್ನಾಟಕ ವಿಧಾನಮಂಡಲದ ಈ' 'ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರನ್ನು ಹತ್ತೂರ್ವಕವಾಗಿ ಸ್ವಾಗತಿಸುತ್ತೇನೆ.' ಅಧಿವೇಶನ ಉದ್ದೇಶಿಸಿ ಗೌರ್ನರ್ ಭಾಷಣ.
ಇಂದು, ತಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ನನ್ನ ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದ ಜೊತೆಗೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ > ದಾವುಗಾಲಿಡುತ್ತಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯನ್ನು ನನ್ನ ಸರ್ಕಾರ ಅನುಸರಿಸುತ್ತಿದ್ದು, ಮಾನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ(PM Narendra Modi) ಅವರು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ನನಗಿದ.
ರೈತಪರ ಸರ್ಕಾರ:
ರೈತನು ಈ ದೇಶದ ಬೆನ್ನೆಲುಬು, ರೈತ ಮತ್ತು ಅವನ ಕುಟುಂಬವನ್ನು ಸದೃಢಗೊಳಿಸಲು ನನ್ನ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ(Raita vidyanidhi)ಯನ್ನು ನೇಕಾರರು, ಕೃಷಿ ಕಾರ್ಮಿಕರು, ಮುಂತಾದ ವಿವಿಧ ವರ್ಗಗಳಿಗೂ ವಿಸ್ತರಿಸಲಾಗಿದೆ. ಅದರಂತೆ 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ವರ್ಗಾಯಿಸಲಾಗಿದೆ.
ರೈತಶಕ್ತಿ(Raita shakti Scheme) ಯೋಜನೆಯಡಿ ಕೃಷಿ ಯಾಂತ್ರೀಕರಣ ಪ್ರೋತ್ಸಾಹಿಸಲು ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಗೆ ಡೀಸೆಲ್ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ, 400 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, 386.98 ಕೋಟಿ ರೂಪಾಯಿ ಬಿಡುಗಡೆ ಮಾಡಿದ. ಇದರಿಂದ 53.22 ಲಕ್ಷ ರೈತರುಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯ ಮಾಡಲಾಗಿದೆ. ಕೀಟ, ರೋಗ, ಕಳೆಬಾಧೆ ಮತ್ತು ಮಣ್ಣಿನ ಪೋಷಕಾಂಶದ ಸಮರ್ಪಕ ನಿರ್ವಹಣೆಗಾಗಿ ಕೃಷಿ ಸಂಜೀವಿನಿ ಯೋಜನೆಯಡಿ 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಲೋಕಾರ್ಪಣ ಮಾಡಿದ್ದು, 2022-23ನೇ ಸಾಲಿಗೆ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು ಅನುಷ್ಠಾನ ಮಾಡಲಾಗಿದೆ.
ನನ್ನ ಸರ್ಕಾರವು ಅಮೃತ ಮಹೋತ್ಸವ(Amrit Mahotsav)ದ ಅಂಗವಾಗಿ 750 ಅಮೃತ ರೈತ / ಮೀನುಗಾರರ / ನೇಕಾರರ ಉತ್ಪಾದಕರ ಸಂಸ್ಥೆಗಳನ್ನು ರಚಿಸಿರುವುದಾಗಿ ಘೋಷಿಸಿದ್ದು, ಇಲ್ಲಿಯವರೆಗೆ 364 ಸಂಸ್ಥೆಗಳನ್ನು ನೊಂದಾಯಿಸಲಾಗಿದೆ. ಇದಕ್ಕಾಗಿ, 24.57 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ. ಪುಸಕ್ತ ಸಾಲಿನಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನವಾಗಿ ಕೃಷಿ ಕಾಲೇಜನ್ನು ಪ್ರಾರಂಭಿಸಲಾಗಿದೆ. ಪುಸಕ್ತ ಸಾಲಿನಲ್ಲಿ 50,335 ರೈತರ ತಾಕುಗಳಲ್ಲಿ ಸುಮಾರು 27,910 ಹಕ್ಕೇ ಪುದೇಶದಲ್ಲಿ ಇಲಾಖೆಯ ವತಿಯಿಂದ ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸಲಾಗಿದೆ. 60 ಲಕ್ಷ ಸಂಖ್ಯೆ ತೋಟಗಾರಿಕೆ ಬೆಳೆಗಳ ಸಸಿ / ಕಸಿಗಳನ್ನು ರೈತಾಪಿ ವರ್ಗಕ್ಕೆ ವಿತರಿಸಲಾಗಿದೆ ಮತ್ತು ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು 484 ಸಂಖ್ಯೆಯ ಕೃಷಿ ಹೊಂಡ ಘಟಕಗಳನ್ನು ನಿರ್ಮಿಸಲಾಗಿದೆ.
ಕರ್ನಾಟಕ ರಾಜ್ಯವು ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿದೆ. 1.15 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪು ನೇರಳೆ ಬೇಸಾಯವಿದ್ದು, 1.38 ಲಕ್ಷ ರೈತ ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದು, ವಾರ್ಷಿಕವಾಗಿ 11,191 ಮೆಟ್ರಿಕ್‌ನಷ್ಟು ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲಾಗಿದ್ದು, ಅಂದಾಜು 14.91 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. 104.19 és ರೂಪಾಯಿಗಳ ಸಹಾಯಧನ ಸೌಲಭ್ಯವನ್ನು 47,682 ರೇಷ್ಮೆ ಭಾಗೀದಾರರಿಗೆ ನನ್ನ ಸರ್ಕಾರವು ಒದಗಿಸಿದೆ. ಪ್ರಮುಖ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸ್ಪರ್ಧಾತ್ಮಕ ದರ ನೀಡಲು ಇ-ಹರಾಜು, ಇ-ವೇಮೆಂಟ್ ಮತ್ತು ಇ-ಪೇಮೆಂಟ್ ವ್ಯವಸ್ಥೆ ಜಾರಿ ಮಾಡಿದ ದೇಶದ ಮೊದಲ ಹಾಗೂ ಏಕೈಕ ರಾಜ್ಯ ಕರ್ನಾಟಕವಾಗಿದೆ.
ಮತ್ತೊಮ್ಮೆ ಭಾರತ ವಿಶ್ವ ನಾಯಕನಾಗಿಸಲು ಕೈಜೋಡಿಸಿ: ಥಾವರಚಂದ
ಗೋರಕ್ಷಣೆಗೆ ಬದ್ಧ:
ಗೋ ಸಂಪತ್ತಿನ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅಶಕ್ತ, ಅನಾರೋಗ್ಯ ಪೀಡಿತ ನಿರ್ಗತಿಕ, ರೈತರು ಸಾಕಲಾಗದ ಜಾನುವಾರುಗಳನ್ನು ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರದಿಂದ 100 .ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಗೋ ಶಾಲೆಗಳಲ್ಲಿರುವ ಜಾನುವಾರುಗಳನ್ನು ಸಂರಕ್ಷಿಸಲು ಸಾರ್ವಜನಿಕ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಪುಣ್ಯ ಕೋಟಿ ದತ್ತು ಯೋಜನೆಯನ್ನು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನದಿಂದ 26,97 ಕೋಟಿ ರೂಪಾಯಿಗಳನ್ನು ಸ್ವ-ಪ್ರೇರಣೆಯಿಂದ ವಂತಿಗೆಯಾಗಿ ನೀಡಿರುವುದನ್ನು ನನ್ನ ಸರ್ಕಾರವು ಪುಶಂಸಿಸುತ್ತದೆ. ನನ್ನ ಸರ್ಕಾರದ ವತಿಯಿಂದ ರಾಜ್ಯದ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗೋದ್ರೇಕ ನಿಯಂತ್ರಣಕ್ಕಾಗಿ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕ ಹಾಕಿಸಲಾಗಿದೆ. ಮರಣ ಹೊಂದಿದ ಕರು, ದನ ಮತ್ತು ಎತ್ತುಗಳಿಗೆ ಪರಿಹಾರಧನ ನೀಡಲು ಸರ್ಕಾರದಿಂದ 37 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಪ್ರಸಕ್ತ ವರ್ಷದಲ್ಲಿ ಭಾರತ ಸರ್ಕಾರವು ಕರ್ನಾಟಕ ರಾಜ್ಯವನ್ನು ಅತ್ಯುತ್ತಮ ಕರಾವಳಿ ರಾಜ್ಯ ಎಂದು ಗುರುತಿಸಿರುವುದು ಹೆಮ್ಮೆಯ ಈ ವಿಷಯವಾಗಿದೆ. ಮೀನುಗಾರರ ಆದಾಯವನ್ನು ಹಚ್ಚಿಸಲು do.2758.70 ಲಕ್ಷಗಳ ಸಹಾಯಧನವನ್ನು ನೀಡುವುದರ ಮೂಲಕ ರಾಜ್ಯದಲ್ಲಿ ಮತ್ಸ ಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. .2022-23ನೇ ಸಾಲಿನಲ್ಲಿ 15,066 ಕೋಟಿ ರೂಪಾಯಿಗಳ ಅಲ್ಪಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 20.19 ಲಕ್ಷ ರೈತರಿಗೆ ವಿತರಿಸಲಾಗಿದೆ. ಡಿಸೆಂಬರ್ ಅಂತ್ಯದವರೆಗೆ 29638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 1215 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ದಿನಾಂಕ: 17-01-2023ರ ಅಂತ್ಯಕ 32.60 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದೆ. ಜನವರಿ ತಿಂಗಳಿನಿಂದ ಚಿಕಿತ್ಸಾ ಸೌಲಭ್ಯ ಪ್ರಾರಂಭಿಸಲಾಗಿದೆ.
.ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 6040 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರತೀ ಸಂಘಕ್ಕೆ 3.99 ಲಕ್ಷ ರೂಪಾಯಿಗಳಂತ ಒಟ್ಟು 193 ಕೋಟಿ ರೂಪಾಯಿಗಳ ವಚ್ಚದಲ್ಲಿ ಗಣಕೀಕರಣಗೊಳಿಸಲಾಗುತ್ತಿದೆ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಣಮೆಣಸಿನ ಕಾಯಿ ಉತ್ಪನ್ನಕ್ಕ ಆಧುನಿಕ ಗುಣ ವಿಶ್ಲೇಷಣಾ ಘಟಕವನ್ನು ಅಂದಾಜು 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ.
ನನ್ನ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 6038.98 ಕೋಟೆ ರೂಪಾಯಿಗಳ ಬಂಡವಾಳದಲ್ಲಿ ಪ್ರಸ್ತುತ ವರ್ಷದಲ್ಲಿ 27.85 ಲಕ್ಷ ಕುಟುಂಬಗಳ, 50 ಲಕ್ಷ ಜನರಿಗೆ ಕೆಲಸ ಒದಗಿಸಿದ. ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ ಆರಂಭದಿಂದ ಇಲ್ಲಿಯವರೆಗೆ 37.54 ಲಕ್ಷ ಮನೆಗಳಿಗೆ ನಳ ನೀರಿನ ಸಂಪರ್ಕ ಕಲ್ಪಿಸಿದ್ದು, ಇದರಿಂದ, ರಾಜ್ಯದ ಶೇಕಡ 61.34 ರಷ್ಟು ಮನೆಗಳಿಗೆ ನಳ ನೀರಿನ ಸಂಪರ್ಕ ಕಲ್ಪಿಸಿದಂತಾಗಿದೆ. ಈ ಯೋಜನೆಯಡಿ 30,308 ಕೋಟಿ ರೂಪಾಯಿಗಳ ವೆಚ್ಚದಲ್ಲಿ 101 ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಪುಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ :
ಪುಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (Pudhana Mantri Gram Sadak Yojana)ಯಡಿ ಪುಸಕ್ತ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 1119.08 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳನ್ನು 590.92 ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೋಟಿ ರೂಪಾಯಿಗಳ ಸ್ವಚ್ಛ ಭಾರತ ಯೋಜನೆಯಡಿ 5216 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ನೈರ್ಮಲ್ಯ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬುದು ಹಮ್ಮೆಯ ವಿಷಯವಾಗಿದೆ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ:
3 ರಿಂದ 6ರ ವಯೋಮಾನದ ಪೂರ್ವ ಪ್ರಾಥಮಿಕ ಮಕ್ಕಳ ಕಲಿಕೆ ಮತ್ತು ಯೋಗ ಕ್ಷೇಮಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕೋವಿಡ್-19 ರಿಂದಾಗಿ ಉಂಟಾದ ಕಲಿಕಾ ಅಂತರವನ್ನು ಸರಿಪಡಿಸಲು ಎನ್.ಇ.ಪಿ. 2020ರ ದೂರದೃಷ್ಟಿಯಂತೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಕಲಿಕಾ ಚೇತರಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 9556 ಹೆಚ್ಚುವರಿ ಶಾಲಾ ಕೊಠಡಿಗಳು, ಶೌಚಾಲಯಗಳನ್ನು ನಿರ್ಮಿಸಲು 1923.5 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 1 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಲ್ಯಾಣ ಕರ್ನಾಟಕ ಪದೇಶವನ್ನು ಒಳಗೊಂಡಂತೆ 46 ಲಕ್ಷ ವಿದ್ಯಾರ್ಥಿಗಳಿಗೆ 132.42 ರೂಪಾಯಿ ವೆಚ್ಚದಲ್ಲಿ ಮೊಟ್ಟೆ ಅಥವಾ ಬಾಳಹಣ್ಣು / ic ಚಿಕ್ಕಿ ಹಾಗೂ 46 ದಿನಗಳು ಮಧ್ಯಾಹ್ನದ ಬಿಸಿ ಊಟದೊಂದಿಗೆ ಹಾಲನ್ನು ಸಹ ನೀಡಲಾಗುತ್ತಿದೆ. ವಿದ್ಯಾವಿಕಾಸ ಯೋಜನೆಯಡಿಯಲ್ಲಿ 61 ಲಕ್ಷ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯ ಪುಸ್ತಕ ಮತ್ತು 46 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸಲಾಗಿದೆ.
.ನನ್ನ ಸರ್ಕಾರವು ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರನ್ವಯ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದಿದೆ. ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನದಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ವಾಪಿಸಿದ್ದು, 7 ಇಂಜಿನಿಯರಿಂಗ್ ರ್ಕಾಲೇಜುಗಳನ್ನು ಐ.ಐ.ಟಿ. ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಗುಣಮಟ್ಟ ಮತ್ತು ಪಾರದರ್ಶಕತೆ ತರಲು ನನ್ನ ಸರ್ಕಾರವು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಅನುಷ್ಕಾನಗೊಳಿಸಿದ.
ನನ್ನ ಸರ್ಕಾರವು ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯವನ್ನು ಮೇಲೆತ್ತಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರನ್ವಯ, ಶಿಕ್ಷಣ ಮತ್ತು ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17ಕ್ಕೆ ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7ಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಿ ಐತಿಹಾಸಿಕ ಕ್ರಮಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಪುಸಕ್ತ ಸಾಲಿನಲ್ಲಿ ಎಸ್.ಸಿ.ಪಿ / ಟಿ.ಎಸ್.ಪಿ ಅಡಿ 29 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.
ಪರಿಶಿಷ್ಟ ಜಾತಿ/ಪಂಗಡ ಅಭಿವೃದ್ಧಿ:
'ಅಮೃತ ಜ್ಯೋತಿ ಯೋಜನೆ(Amritajyoti scheme)ಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್ ಕುಟುಂಬ(BPL Family)ಗಳಿಗೆ ಮಾಸಿಕ 75 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ನೀಡಲಾಗುತ್ತಿದೆ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಸಹಾಯಧನವನ್ನು 1.75 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 100 ಅಂಬೇಡ್ಕರ್ ಹಾಸ್ಟೆಲ್‌ಗಳ ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಪ್ರಬುದ್ಧ ಯೋಜನೆಯಡಿ ಪರಿಶಿಷ್ಟಜಾತಿ ಮತ್ತು ಪಂಗಡದ 133 ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪ್ರಾಯೋಜಿಸಲಾಗಿದೆ. ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ವಿದೇಶಿ
ವಿವಿಧ ಇಲಾಖೆಗಳ ಅಭಿವೃದ್ಧಿ ನಿಗಮಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡ 25ರಷ್ಟು ಪಾಲನ್ನು ಮೀಸಲಿರಿಸಲಾಗಿದೆ. ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚ 15 ಲಕ್ಷ ಮತ್ತು 20 ಲಕ್ಷ ರೂಪಾಯಿಗಳಿದ್ದು, ಅದನ್ನು 20 ಲಕ್ಷ ರೂಪಾಯಿ ಹಾಗೂ 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ನಮ್ಮದು ನಿಜವಾದ ಜಾತ್ಯತೀತತೆ: ಮೋದಿ
ಪರಿಶಿಷ್ಟಜಾತಿ ಮತ್ತು ಪಂಗಡದ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಅವರ ಆತ್ಮಸ್ಥೆರ್ಯ ಹೆಚ್ಚಿಸಲು "ಓಬಮ್ಮ ಆತ್ಮ ರಕ್ಷಣಾ ಕಲೆ' ತರಬೇತಿಯನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿನಿಯರಿಗೆ "ಆತ್ಮ ರಕ್ಷಣಾ ಕಲೆ" ತರಬೇತಿಯನ್ನು 106314 ನೀಡಲಾಗುತ್ತಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದ್ದುದರಿಂದ, 2022-23ನೇ ಸಾಲಿನಲ್ಲಿ ಶೇಕಡಾ 25 ರಂತೆ ಸಂಖ್ಯಾಬಲವನ್ನು ಹೆಚ್ಚಳ ಮಾಡಿ, ಹಾಲಿ ಮಂಜೂರಾತಿ ಸಂಖ್ಯೆಗೆ ಹೆಚ್ಚುವರಿಯಾಗಿ 30000 ವಿದ್ಯಾರ್ಥಿಗಳಿಗೆ ಪುವೇಶಾತಿ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.
ಇಲಾಖಾ ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 150 ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು, ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾದ ರೂ.129.00 ಕೋಟಿಗಳ ಅನುದಾನದಲ್ಲಿ do.101.68 ಕೋಟಿಗಳನ್ನು ಮಾಡಲಾಗಿದ್ದು, 50 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ. 2022-233 ಸಾಲಿನಲ್ಲಿ 250 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಸಂಖ್ಯಾಬಲದ 50 ಕನಕದಾಸ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗಿರುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪ ಸಂಖ್ಯಾತ ಮತ್ತು ಇತರ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು "ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ” ಎಂಬ ಹೊಸ ಯೋಜನೆಯಡಿ ಶೈಕ್ಷಣಿಕ ಕೇಂದ್ರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ವಿದ್ಯಾರ್ಥಿ ನಿಲಯ ಸಮುಚ್ಚಯಗಳನ್ನು ನಿರ್ಮಿಸಲು ಕಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮ:
ನನ್ನ ಸರ್ಕಾರವು ರಾಜ್ಯದ 29 ಸ್ಥಳಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ 6 ರಿಂದ 12ನೇ ತರಗತಿಯವರೆಗೆ ಸಿ.ಬಿ.ಎಸ್.ಇ ಪಠ್ಯಕ್ರಮದೊಂದಿಗೆ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಲು 24/7 ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಜೈನ್, ಬೌದ್ಧ, ಸಿಖ್ ಮತ್ತು ಕ್ರೈಸ್ತ ಸಮುದಾಯದ ದೇವಾಲಯ / ಚರ್ಚ್ ನವೀಕರಣ, ದುರಸ್ತಿ / ಜೀರ್ಣೋದ್ಧಾರಕ್ಕಾಗಿ / ಸಮುದಾಯ ಭವನ ಕಟ್ಟಡ ನಿರ್ಮಾಣ ಮತ್ತು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅಂದಾಜು 26 ಕೋಟಿ ರೂಪಾಯಿಗಳ ವಚ್ಚದಲ್ಲಿ 186 ಸಂಸ್ಥೆಗಳಿಗೆ ಸಹಾಯಧನ ನೀಡಿದೆ. ವಕ್ಸ್ ಆಸ್ತಿಗಳ ಡೋನ್, ಸರ್ವ ಕಾರ್ಯಕ್ಕಾಗಿ 25 ರೂಪಾಯಿಗಳನ್ನು ಒದಗಿಸಿದ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಕಛೇರಿಗಳ ಉದ್ದೇಶಕ್ಕಾಗಿ 17.30 ಕೋಟಿ ರೂಪಾಯಿ ವಚ್ಚದಲ್ಲಿ ಕೆ.ಎಂ.ಡಿ.ಸಿ ಭವನವನ್ನು ನಿರ್ಮಿಸಲಾಗಿದೆ. ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಶಾಸ್ತ್ರೀಯ ಭಾಷೆಗಳ ಉತ್ಕೃಷ್ಟ ಸಾಹಿತ್ಯದ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದ ಮಾಡುವ ಪ್ರಕ್ರಿಯೆಯು ಜಾರಿಯಲ್ಲಿದೆ.
ಮಹಿಳೆ ಮತ್ತು ಮಕ್ಕಳ ರಕ್ಷಣೆ:
ನನ್ನ ಸರ್ಕಾರವು ಮಹಿಳೆ ಮತ್ತು ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದು, ಅವರ ಭದ್ರತೆ ಮತ್ತು ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಗರ್ಭಿಣಿಯರು, ಬಾಣಂತಿಯರು, 6 ತಿಂಗಳಿನಿಂದ 6 ವರ್ಷದ ಮಕ್ಕಳನ್ನು ಒಳಗೊಂಡಂತೆ ಸುಮಾರು 52 ಲಕ್ಷ ಫಲಾನುಭವಿಗಳಿಗೆ ಪೂರಕ.
ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ. ತೀವು ಅಪೌಷ್ಟಿಕ ಮಕ್ಕಳಿಗೆ ನೀಡಲಾಗುತ್ತಿದ್ದ ಕ್ಷೀರಭಾಗ್ಯ ಮತ್ತು ಸೃಷ್ಟಿ ಯೋಜನೆಯನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ವಿಸ್ತರಿಸಲಾಗಿದೆ. ಅಮೃತ ಅಂಗನವಾಡಿ ಯೋಜನೆಯಡಿ ಆಯ್ಕೆ 750 ಅಂಗನವಾಡಿ ಕೇಂದ್ರಗಳನ್ನು ಮೂಲಸೌಕರ್ಯಗಳೊಂದಿಗೆ 1 ರೂಪಾಯಿಯಂತೆ ಒದಗಿಸಲಾಗಿದೆ. 7.5 ರಾಜ ಕೋಟಿ ರೂಪಾಯಿ ಸರ್ಕಾರದ ಅನುದಾನದಲ್ಲಿಯೇ ಬೇಡಿಕೆಗಳಿಗೆ ಅನುಸಾರವಾಗಿ ಒಟ್ಟು 4244 ಹೊಸ ಅಂಗನವಾಡಿ ಕೇಂದ್ರಗಳನ್ನು 268.98 ಕೋಟಿ ರೂಪಾಯಿಗಳಲ್ಲಿ ಪ್ರಾರಂಭಿಸಲು ಮಂಜೂರಾತಿ ನೀಡಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ನೀಡಲಾಗುತ್ತಿರುವ ಗೌರವಧನವನ್ನು ಅವರುಗಳು ಸಲ್ಲಿಸಿರುವ ಸೇವಾ ಅವಧಿಯ ಆಧಾರದ ಮೇರೆಗೆ ಕನಿಷ್ಠ ರೂ.1000 ರಿಂದ ರೂ.1500 ರವರೆಗೆ ಹೆಚ್ಚಿಸಲಾಗಿದೆ. ಬಾಲ್ಯ ವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ “ಸ್ಪೂರ್ತಿ" ಯೋಜನೆಯನ್ನು ಬಾಗಲಕೋಟೆ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯಲ್ಲಿನ 11 ತಾಲ್ಲೂಕುಗಳಲ್ಲಿ 12.5 ಕೋಟಿ ರೂಪಾಯಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಲಿಂಗತ್ಯ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ 3403 ಲಿಂಗತ್ವ ಅಲ್ಪ ಸಂಖ್ಯಾತರ ವಸತಿ ರಹಿತರಿಗೆ ಡಾ: ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಮತ್ತು ದೇವರಾಜು ಅರಸು ವಸತಿ ಯೋಜನೆಯಡಿ 3403 ಮನೆಗಳನ್ನು ಮಂಜೂರು ಮಾಡಲಾಗಿದೆ.
ಆರೋಗ್ಯ ಕ್ಷೇತ್ರ:
ನನ್ನ ಸರ್ಕಾರವು 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಚಾಮರಾಜನಗರದಲ್ಲಿ ಕಾರ್ಯಾರಂಭ ಮಾಡಿದ್ದು, ಕೊಡಗು. ಮತ್ತು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಪುಸಕ್ತ ವರ್ಷದಲ್ಲಿ ಕೇಂದ್ರ ಸಹಭಾಗಿತ್ವದೊಂದಿಗೆ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ 150 ಸೀಟುಗಳ ಸಾಮರ್ಥ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ Fetal Medicine & Neonatology ವಿಭಾಗಗಳನ್ನು ಮತ್ತು ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾಕೇರ್ ಕೇಂದ್ರವನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ.
ಬೆಳಕು ಯೋಜನೆ :
ದೇಶಾದ್ಯಂತ ಇತರೆ ರಾಜ್ಯಗಳು ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ತೀವು ವ್ಯತ್ಯಯದಿಂದ ಬಳಲುತ್ತಿದ್ದಾಗ ರಾಜ್ಯವು ಜಲ, ಪವನ ಹಾಗೂ ಸೌರ ವಿದ್ಯುತ್ ಮೂಲಗಳಿಂದ ಸಮರ್ಥವಾಗಿ ವಿದ್ಯುತ್ ಪೂರೈಕೆಯನ್ನು ಅಡಚಣೆಯಿಲ್ಲದೇ MUS ನನ್ನ ಸರ್ಕಾರವು ನಿಭಾಯಿಸಿದ. 2022-23ನೇ ಸಾಲಿನ ವಿವಿಧ ವಿದ್ಯುತ್ ಉತ್ಪಾದನಾ ಮೂಲಗಳಿಂದ 58,588 ಉತ್ಪಾದಿಸಲಾಗಿದೆ ಹಾಗೂ 2022-233 ಸಾಲಿನಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದ 4326.45 MUS ವಿದ್ಯುತ್ ಮಾರಾಟದಿಂದ 2500 ಕೋಟಿ ರೂಪಾಯಿಗಳ ಹಣವನ್ನು ಗಳಿಸಲಾಗಿದೆ. ರಾಜ್ಯಕ್ಕೆ RPO ಗುರಿ - 21% ಇದ್ದು, ಸಾಧನ- 30.49% ರಷ್ಟಾಗಿದೆ. RE Certificate ಮಾರಾಟದಿಂದ 370 ಕೋಟಿ ರೂಪಾಯಿಗಳ ಮೊತ್ತವನ್ನು ಗಳಿಸಲಾಗಿದೆ.
'ಬೆಳಕು ಯೋಜನೆ(Belaku scheme)ಯಡಿ 2.35 ಲಕ್ಷ ವಿದ್ಯುತ್ ರಹಿತ ಮನೆಗಳಿಗೆ 124 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ, 2030 ರೊಳಗೆ 500 ಗಿಗಾ ವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿಯೊಂದಿಗೆ ನನ್ನ ಸರ್ಕಾರವು “ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27” ನು ಪ್ರಕಟಿಸಿದೆ. ರಾಜ್ಯವು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ (NECA)- 2022 ಸನ್ಮಾನ್ಯ ರಾಷ್ಟ್ರಪತಿಗಳಿಂದ ಪಡದಿರುವುದನ್ನು ತಿಳಿಸಲು ಹರ್ಷಿಸುತ್ತೇನ.
ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನ:
ಸುಲಲಿತ ವ್ಯವಹಾರ ವಿಷಯದಲ್ಲಿ (Ease of Doing Business ನಲ್ಲಿ) ಕರ್ನಾಟಕವು ಅಗ್ರ ಸಾಧಕ ರಾಜ್ಯವಾಗಿ ಸ್ಥಾನ ಪಡೆದಿದೆ. 2021-22ನೇ ಸಾಲಿನಲ್ಲಿ 1,63,795 ಕೋಟಿ ರೂಪಾಯಿಗಳ ವಿದೇಶಿ ನೇರ ಹೂಡಿಕೆಯನ್ನು ರಾಜ್ಯವು ಆಕರ್ಷಿಸಿದ್ದು, ಇದು ದೇಶ ಸ್ವೀಕರಿಸಿದ ಒಟ್ಟು ಹೂಡಿಕೆಯ ಶೇಕಡ 38 ರಷ್ಟಿದ್ದು, ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಪುಸಕ್ತ ಸಾಲಿನಲ್ಲಿ ಭಾರತದ ಠಪ್ಪಿಗೆ ರಾಜ್ಯವು 25.87 ಬಿಲಿಯನ್ ಅಮೇರಿಕ ಡಾಲರ್ ನಷ್ಟು ಕೊಡುಗೆ ನೀಡಿದ್ದು, ಇದು ಈವರೆಗಿನ ಅತ್ಯಧಿಕ ಮೊತ್ತವಾಗಿದ್ದು, ರಫ್ತು, ಮಾಡುವ ಮೊದಲ 4 ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ.
ನವೆಂಬರ್ 2022ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಇನ್ನಷ್ಟ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶ ಕಾರ್ಯಕ್ರಮದಲ್ಲಿ ಒಟ್ಟು 9,81,784 ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದ. ರಾಜ್ಯದಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡಲು ಕರ್ನಾಟಕದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ರಾಜ್ಯ ಸರ್ಕಾರವು ಕರ್ನಾಟಕ ಉದ್ಯೋಗ ನೀತಿ ಘೋಷಿಸಿದ. 2022-25 ಇದಲ್ಲದೇ ಹೆಚ್ಚಿನ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ನೀತಿ ವಿಶೇಷ ಹೂಡಿಕ ಪ್ರದೇಶ ಕಾಯಿದೆ 2022 ಮೊದಲಾದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ನನ್ನ ಸರ್ಕಾರವು ಜವಳಿ ಮತ್ತು ಸಿದ್ಧ ಉಡುವು ಉದ್ಯಮಗಳನ್ನು ಉತ್ತೇಜಿಸಲು ರಾಜ್ಯದ ನವಲಗುಂದ, ರಾಣಿಬೆನ್ನೂರು ಹಾಗೂ ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. ಇದಲ್ಲದೆ ನೇಕಾರರ ಸಂಕಷ್ಟಕ್ಕೆ ನೆರವಾಗಲು ರೂಪಿಸಿದ ನೇಕಾರ ಸಮ್ಮಾನ್ ಯೋಜನೆಯಡಿ, ಕೈಮಗ್ರಕ್ಕೆ ನೀಡಲಾಗುತ್ತಿದ್ದ. ನೆರವಿನ ಮೊತ್ತವನ್ನು ರೂ.2000 ಗಳಿಂದ ರೂ.5000 ಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೇ ಈ ನರವನ್ನು 1.03 ಲಕ್ಷ ವಿದ್ಯುತ್ ಕೈಮಗ್ಗ ನೇಕಾರರಿಗೂ/ಕಾರ್ಮಿಕರಿಗೂ ವಿಸ್ತರಿಸಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ:
ಯಾವುದೇ ರಾಜ್ಯದ ಏಳಿಗೆಗೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸುವುದು ಅನಿವಾರ್ಯವಾಗಿದೆ. ನನ್ನ ಸರ್ಕಾರವು ರಾಜ್ಯದಲ್ಲಿ ಪರಿಣಾಮಕಾರಿ ವಾಯುಯಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತಿದ್ದು, ಶಿವಮೊಗ್ಗ ವಿಮಾನ ನಿಲ್ದಾಣವು ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು, ವಿಜಯಪುರ 1. ಮತ್ತು ಹಾಸನ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ. ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ದಾವಣಗೆರೆ ಮತ್ತು ಕೊಪ್ಪಳ ವಿಮಾನ ನಿಲ್ದಾಣ ಯೋಜನೆಗಳನ್ನು ಮುಂದಿನ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ 50:50 ವೆಚ್ಚದ ಹಂಚಿಕೆಯ ಆಧಾರದ ಮೇಲೆ 9 ಹೊಸ ರೈಲು ಮಾರ್ಗಗಳ ಯೋಜನೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೈಸೂರು ಬೆಂಗಳೂರು ಚನ್ನ ಸೆಮಿ-ಹೈಸ್ಪೀಡ್ ರೈಲು ಸೇವೆ ನಂದೇ ಭಾರತ್ ಏಕ್ಸ್ಪ್ರೆಸ್ ಪ್ರಾರಂಭಿಸಲಾಗಿದೆ.
ಸಾಗರಮಾಲಾ ಯೋಜನೆ
ರಾಜ್ಯದ ಸಣ್ಯ ಬಂದರುಗಳು 6 ಲಕ್ಷ ಟನ್‌ಗಳಿಗಿಂತ ಹೆಚ್ಚು ಸರಕುಗಳನ್ನು ನಿರ್ವಹಿಸಿದ ಭಾರತ ಸರ್ಕಾರದ ಸಾಗರಮಾಲಾ ಯೋಜನೆಯಿಂದ ಅನುಮೋದನೆ ಮತ್ತು ಆರ್ಥಿಕ ನೆರವು ಪಡೆದ ನಂತರ 12 ಕಾಮಗಾರಿಗಳ ಅನುಷ್ಠಾನವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಎರಡು ಪುಮುಖ ಬಂದರುಗಳನ್ನು ತೆಗೆದುಕೊಳ್ಳಲು ರಾಜ್ಯವು ಕ್ರಮಗಳನ್ನು ಪ್ರಾರಂಭಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕೇಣಿ ಬಂದರಿನಲ್ಲಿ 30 MTPA ಸಾಮರ್ಥ್ಯದ ಹಾಗೂ ಪಾವಿನಕುರ್ವೆ ಬಂದರಿನಲ್ಲಿ 14 MTPA ಸಾಮರ್ಥ್ಯದ Deep Water All Weather Green Field ಬಂದರಿನ ಅಭಿವೃದ್ಧಿಗೆ ಬಿಡ್‌ಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು ವಿಶ್ವಮಟ್ಟದಲ್ಲಿ ಅಭಿವೃದ್ಧಿ:
.ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವನ್ನು ವಿಶ್ವಮಟ್ಟದಲ್ಲಿ ಗುರುತಿಸಲಾಗಿದೆ. ಅದಕ್ಕಾಗಿ, ಬೆಂಗಳೂರು ನಗರದ ಮೂಲಸೌಲಭ್ಯ ಮತ್ತು ಅಭಿವೃದ್ಧಿಗೆ ಒತ್ತುಕೊಟ್ಟು ಹಲವು ಕ್ರಮಗಳನ್ನು ನನ್ನ ಸರ್ಕಾರವು ನಿರಂತರವಾಗಿ ಕೈಗೊಳ್ಳುತ್ತಿದೆ. ಸರ್ಕಾರವು 8000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರು ನಗರದಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಳಾದ ರಸ್ತೆಗಳು, ಮಳೆ ನೀರು ಚರಂಡಿಗಳು, ಮೇಲ್ಸ್ತುವೆಗಳು, ಕೆಳ ಸೇತುವೆಗಳು ಮತ್ತು ಇತರ `ಸಾರ್ವಜನಿಕ ಉಪಯುಕ್ತ ಯೋಜನೆಗಳನ್ನು ಈ ಅನುದಾನದಲ್ಲಿ ಉಪಯೋಗಿಸಲಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. * ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪುತ್ಯೇಕ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿ, ಕಂಪನಿಯನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯು ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿ.ಮೀ.ಗಳ ಮತ್ತು ಯಲಚೇನಹಳ್ಳಿಯಿಂದ ಸಿಲ್ಕ್, ಇನ್ಸ್ಸ್ಟಿಟ್ಯೂಟ್‌ವರೆಗೆ 6.12 ಕಿ.ಮೀ. ಸೇರಿ ಒಟ್ಟು 13.65 ಕಿ.ಮೀ. ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗಿನ 15.81 ಕಿ.ಮೀ ಉದ್ದದ ಕಾಮಗಾರಿಗಳು ಮಾರ್ಚ್ 2023 ರ ವೇಳಗೆ ಕಾರ್ಯಾರಂಭ ಮಾಡಲಾಗುವುದು, ಹೊರ ವರ್ತುಲ ರಸ್ತೆ - ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಕಾಮಗಾರಿಗಳು ಪುಗತಿಯಲ್ಲಿವೆ.
ಕೊಳಚೆ ಪುದೇಶಗಳಲ್ಲಿ ವಾಸಿಸುವ 1.03 ಲಕ್ಷ ಕುಟುಂಬಗಳಿಗೆ ಹಾಗೂ ಎಸ್.ಸಿ/ಎಸ್.ಟಿ ಕಾಲೋನಿಗಳಿಗೆ 10,000 ಲೀಟರ್ ಉಚಿತ ನೀರು ಒದಗಿಸಲಾಗುತ್ತಿದೆ. ಅರ್ಕಾವತಿ ಲೇ-ಔಟ್, ಡಾ: ಶಿವರಾಮ ಕಾರಂತ ಬಡಾವಣೆ, ನಾಡವುಭು ಕೆಂಪೇಗೌಡ ಲೇಔಟ್ ಮತ್ತು ಇತರ ವಸತಿ ಯೋಜನೆಗಳನ್ನು, ಬಿ.ಡಿ.ಎ. ಕೈಗೆತ್ತಿಕೊಂಡಿದೆ. ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್ ರಸ್ತೆಯನ್ನು ಹಾದುಹೋಗಿ ಹೊಸೂರು ರಸ್ತೆವರೆಗೆ 100 ಮೀಟರ್ ಅಗಲದ 8 ಪಥದ ಪರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯು ಪುಗತಿಯಲ್ಲಿದೆ. ಇದು ಸಂಚಾರ ದಟ್ಟಣೆಯನ್ನು ಕಡಿಮ ಮಾಡುತ್ತದೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳನ್ನು ಒಗ್ಗೂಡಿಸಿ ಕ್ರಮಕೈಗೊಳ್ಳಲು ಬೆಂಗಳೂರು ಮಹಾನಗರ ಭೂ-ಸಾರಿಗೆ ಪ್ರಾಧಿಕಾರ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ.
3885 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮುಖ್ಯಮಂತ್ರಿಗಳ ನಗರೋತ್ಮಾನ-4 ಅನ್ನು 302 ಪಟ್ಟಣಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಅಮೃತ್-2 ಮತ್ತು ಎಸ್.ಬಿ.ಎಂ-2 ಅನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. 15ನೇ ಹಣಕಾಸು ಆಯೋಗದ ಅನುದಾನವನ್ನು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಲಿ ಇರುವ ಉನ್ನತೀಕರಿಸಲು ಬಳಸಿಕೊಳ್ಳಲಾಗುತ್ತಿದೆ. ಮೂಲಸೌಕರ್ಯಗಳನ್ನು
ನನ್ನ ಸರ್ಕಾರವು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11333 ಪೌರಕಾರ್ಮಿಕರ ಸೇವೆಯನ್ನು ನೇರ ಪಾವತಿ ವ್ಯವಸ್ಥೆಯಡಿ ಖಾಯಂಗೊಳಿಸಲು ಆದೇಶ ಈ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದು, ಪುಕ್ರಿಯ ಜಾರಿಯಲ್ಲಿದೆ.
ಕಾರ್ಮಿಕರ ಆರೋಗ್ಯ :
ನನ್ನ ಸರ್ಕಾರವು ಕಾರ್ಮಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಪುಸಕ್ತ ಸಾಲಿನಲ್ಲಿ 5,11,687 ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳಾಗಿ ಹೊಸದಾಗಿ ನೋಂದಾಯಿಸಲಾಗಿರುತ್ತದೆ. ಈ ಮಂಡಳಿಯ ವತಿಯಿಂದ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ 100 ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು 129 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪುಸಕ್ತ ಸಾಲಿನಲ್ಲಿ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ 26,25,335 ಫಲಾನುಭವಿಗಳಿಗೆ 1718.62 ಕೋಟಿ ರೂಪಾಯಿಗಳ ಮೊತ್ತದ ಸಹಾಯಧನ ವಿತರಿಸಲಾಗಿದೆ.
ವನಿತಾ ಸಂಗಾತಿ ಯೋಜನೆಯಡಿ ಒಟ್ಟು 903 ಫಲಾನುಭವಿಗಳಿಗೆ ಬಿ.ಎಂ.ಟಿ.ಸಿ ವತಿಯಿಂದ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸಿದ್ದು, 3.79 ಲಕ್ಷ ರೂಪಾಯಿಗಳನ್ನು ಬಿ.ಎಂ.ಟಿ.ಸಿ ಸಂಸ್ಥೆಗೆ ಪಾವತಿಸಿದೆ. ನನ್ನ ಸರ್ಕಾರವು ಹುಬ್ಬಳ್ಳಿ ಹಾಗೂ ದಾವಣಗೆರೆಗಳ ಕಾರ್ಮಿಕರ ರಾಜ್ಯ ವಿಮಾ ಯೋಜನ ಆಸ್ಪತ್ರೆಗಳ, ಸಾಮರ್ಥ್ಯವನ್ನು 50 ಹಾಸಿಗೆಯಿಂದ 100 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಿಸಲು ಹಾಗೂ ರಾಜ್ಯದ 19 ಹೊಸ ಪ್ರದೇಶಗಳಲ್ಲಿ ಹೊಸ ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದೆ.
ನನ್ನ ಸರ್ಕಾರವು ಜನರು ಕೌಶಲ್ಯಯುತರಾಗಿ, ಸ್ಕ್ಯಾವಲಂಬಿಯಾಗಲು ಹಲವು ತರಬೇತಿಗಳನ್ನು ನೀಡಲಾಗುತ್ತಿದೆ. ಮುಖ್ಯಮಂತ್ರಿ ಕೌಶಲ್ಯ, ಕರ್ನಾಟಕ ಯೋಜನೆಯಡಿ ಪುಸಕ್ತ ಸಾಲಿನಲ್ಲಿ 56131 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, ಈ ಪೈಕಿ 24597 ಅಭ್ಯರ್ಥಿಗಳು ಉದ್ಯೋಗವಕಾಶವನ್ನು ಪಡೆದಿರುತ್ತಾರೆ. ಅಮೃತ ಕೌಶಲ್ಯ ತರಬೇತಿ ಕಾರ್ಯಕ್ರಮದಡಿ 75000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಗುರಿಯಿದ್ದು, ಇಲ್ಲಿಯವರೆಗೆ 67508 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣ ಸ್ವಉದ್ಯೋಗ ತರಬೇತಿ ಕೇಂದ್ರಗಳಲ್ಲಿ ಬಿಪಿಎಲ್ ಕುಟುಂಬದ ಒಟ್ಟು 12,110 ಯುವಕ-ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗಿದ್ದು, 2221 ತರಬೇತಿ ಪಡೆದ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಕಲ್ಪಿಸಲಾಗಿದೆ.
ಸ್ತ್ರೀ ಸಾಮರ್ಥ್ಯ ಯೋಜನೆ
ಕರ್ನಾಟಕ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಡಿ ತರಲು Skill Connect ಪೋರ್ಟಲ್ ಅನ್ನು ರಚಿಸಿದ್ದು, ಇಲ್ಲಿ 9000ಕ್ಕೂ ಅಧಿಕ ಉದ್ಯೋಗ ಮತ್ತು ಶಿಶಿಕು ತರಬೇತಿ ಅವಕಾಶಗಳು ಲಭ್ಯವಿದ್ದು, 50ಕ್ಕೂ ಅಧಿಕ ಕೈಗಾರಿಕೆಗಳು ಒಳಗೊಂಡಿರುತ್ತದೆ. ಒಟ್ಟು 14557 ಅಭ್ಯರ್ಥಿಗಳು ಪೋರ್ಟಲ್ ನಲ್ಲಿ ನೊಂದಣಿಯಾಗಿರುತ್ತಾರೆ. ಪುಸಕ್ತ ಸಾಲಿನಲ್ಲಿ ಪಿಎಂ-ಸ್ಮ- ನಿಧಿ ಯೋಜನೆಯಡಿ ನವೆಂಬರ್ 2022ರ ಅಂತ್ಯದವರೆಗೆ 68,756 ಬೀದಿ-ಬದಿ ವ್ಯಾಪಾರಿಗಳಿಗೆ 68.75 ಕೋಟಿ ರೂಪಾಯಿಗಳಷ್ಟು ಸಾಲ ಮಂಜೂರಾತಿ ನೀಡಲಾಗಿದ್ದು, 38,623 ಬೀದಿ ಬದಿ ವ್ಯಾಪಾರಿಗಳಿಗೆ ಸದರಿ ಯೋಜನೆಯಡಿ ರೂಪಾಯಿಗಳಷ್ಟು ವಿತರಿಸಲಾಗಿರುತ್ತದೆ. 38.62 ಸ್ತ್ರೀ-ಸಾಮರ್ಥ್ಯ ಯೋಜನೆಯಡಿ ರಾಜ್ಯದ 50000 ಮಹಿಳಾ ಸ್ವ-ಸಹಾಯ ಸಂಘಗಳಿಗೆ ಉದ್ದಿಮಗಳನ್ನು ಪ್ರಾರಂಭಿಸಲು ತಲಾ ಒಂದು ಲಕ್ಷ ರೂಪಾಯಿಗಳ ಬೀಜಧನ ಒದಗಿಸುವುದರೊಂದಿಗೆ ಮಾರುಕಟ್ಟೆ, ಕಂಡುಕೊಳ್ಳಲು ನೆರವು ಹಾಗೂ ತರಬೇತಿಯನ್ನು ಸಹ ನೀಡಲಿದೆ. ಇದರಿಂದ 3.90 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನ ಮಹತ್ತ್ವದ ಕ್ರಮವಾಗಿದೆ.
ಕ್ರೀಡೆಗೆ ಒತ್ತು:
ನನ್ನ ಸರ್ಕಾರವು ಯುವ ಜನತೆಗೆ ಮತ್ತು ಕ್ರೀಡೆಗೂ ಒತ್ತು ನೀಡಿದ. ಪ್ರತಿಷ್ಠಿತ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾ ಕೂಟ- 2021ನ್ನು ಜೈನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಗ್ರಾಮೀಣ ಮತ್ತು ಸ್ಥಳೀಯ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಪುಪುಥಮ ಬಾರಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
2020-21ರ .ಎಸ್.ಡಿ.ಜಿ. ಇಂಡಿಯಾ ಇಂಡೆಕ್ಸ್ ವರದಿ ಪ್ರಕಾರ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ರಾಜ್ಯದ ಶ್ರೇಯಾಂಕ 4ನೇ ಸ್ನಾನಕ್ಕೆ ಏರಿಕೆಯಾಗಿರುತ್ತದೆ. 2022-23ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನವನ್ನು ದ್ವಿಗುಣಗೊಳಿಸಿ, 3000 ಕೋಟಿ ರೂಪಾಯಿಗಳು ಮತ್ತು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 600 ಕೋಟಿ ರೂಪಾಯಿಗಳನ್ನು ಆಯವ್ಯಯದಲ್ಲಿ ನಿಗದಿಪಡಿಸಲಾಗಿದೆ.
6ನೇ ಆರ್ಥಿಕ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 28.81 ಲಕ್ಷ ಉದ್ದಿಮಗಳಿದ್ದು, 7ನೇ ಆರ್ಥಿಕ ಗಣತಿಯಲ್ಲಿ ಇವುಗಳ ಪ್ರಮಾಣವು 45.02 ಲಕ್ಷಗಳಷ್ಟು ಹೆಚ್ಚಾಗಿರುತ್ತದೆ. 6ನೇ ಆರ್ಥಿಕ ಗಣತಿಗೆ ಹೋಲಿಸಿದಾಗ ಶೇಕಡ 56.88 ರಷ್ಟು ಉದ್ದಿಮಗಳನ್ನು - ಅಧಿಕವಾಗಿ ಗುರುತಿಸಲಾಗಿದೆ. ರಾಜ್ಯಾದ್ಯಂತ ಇರುವ ಸಣ್ಣ, ಅತೀ ಸಣ್ಣ, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರನ್ನು ಗುರುತಿಸಲು ದಿನಾಂಕ:01-10-2022 ರಿಂದ 11ನೇ ಕೃಷಿ ಗಣತಿಯ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ಗರೀಬಿ ಕಲ್ಯಾಣ ಯೋಜನೆ:
ನನ್ನ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಫಲಾನುಭವಿಗಳಿಗೆ ಪ್ರತಿ ತಿಂಗಳು ವಿತರಿಸಲಾಗುವ ಆಹಾರ ಧಾನ್ಯದೊಂದಿಗೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಹೆಚ್ಚುವರಿಯಾಗಿ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿಯನ್ನು 2022ರ ಏಪ್ರಿಲ್ ನಿಂದ ಡಿಸೆಂಬರ್‌ವರೆಗೆ ಉಚಿತವಾಗಿ ವಿತರಿಸಿದೆ. ಈ ಉದ್ದೇಶಕ್ಕಾಗಿ 866 ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ.
2022-23ನೇ ಸಾಲಿನಲ್ಲಿ ಸಾರ್ವಜನಿಕ ವಿತರಣಾ ಪದ್ಮತಿಯಡಿ - - 14 ಜಿಲ್ಲೆಗಳಲ್ಲಿನ 1.53 ಕೋಟಿ ಫಲಾನುಭವಿಗಳಿಗೆ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗಿದೆ. 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 7.28 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು 3.64 ಲಕ್ಷ ರೈತರಿಂದ ಸಂಗ್ರಹಿಸಲಾಗಿದೆ. ಈ ಉದ್ದೇಶಕ್ಕಾಗಿ ಅಂದಾಜು 2077 ಕೋಟಿ ರೂಪಾಯಿಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಸಂಗ್ರಹಿಸಲಾದ ಭತ್ತದ ಪರಿವರ್ತಿತ ಅಕ್ಕಿ, ರಾಗಿ ಮತ್ತು ಬಿಳಿ ಜೋಳವನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗಿದೆ.
ಪ್ರಜೆಗಳ ರಕ್ಷಣೆ:
ರಾಜ್ಯದ ಪುಜೆಗಳಿಗೆ ರಕ್ಷಣೆ ನೀಡುವುದು ಯಾವುದೇ ಸರ್ಕಾರದ ಪರಮ ಗುರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ನನ್ನ ಸರ್ಕಾರವು ಪೊಲೀಸ್ ಇಲಾಖೆಯನ್ನು ಬಲಪಡಿಸಲು ಕಳೆದ 3 ವರ್ಷಗಳಲ್ಲಿ 16,811 ಹುದ್ದೆಗಳನ್ನು ಭರ್ತಿ ಮಾಡಿದ. ಪೊಲೀಸ್ ಗ್ರಹ ಯೋಜನೆಯಡಿ 10 ಸಾವಿರ ವಸತಿ ಗೃಹಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಅನುದಾನ ಒದಗಿಸಲಾಗಿದೆ. ಅಪರಾಧ ಪುಕರಣಗಳಲ್ಲಿ ತನಿಖೆಯನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತಗೊಳಿಸಲು ಅನುಕೂಲವಾಗುವಂತೆ 8 ವಿಧಿ ವಿಜ್ಞಾನ ಪುಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಕಾರಾಗೃಹಗಳಲ್ಲಿ ಬಂಧಿಗಳ ದಟ್ಟಣೆಯನ್ನು ಕಡಿಮೆ ಮಾಡಲು 410 ಕೋಟಿ ರೂಪಾಯಿಗಳ ಅನುದಾನದಲ್ಲಿ 4 ಹೊಸ ಬಂಧೀಖಾನೆಗಳನ್ನು ನಿರ್ಮಿಸಲಾಗುತ್ತಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ವಿವಿಧ ತರಬೇತಿಗಳನ್ನು ಬಂಧಿಗಳಿಗೆ ನೀಡಲಾಗುತ್ತಿದೆ. ಕಾರಾಗೃಹ ಬಂದಿಗಳ ಕೌಶಲ್ಯವನ್ನು ಬಳಸಿ ತಯಾರಿಸಿದ ವಸ್ತುಗಳ ಉದ್ಯಮವನ್ನು ಬಲಪಡಿಸಲು ಕಾರಾಗ್ರಹ ಮಂಡಳಿಯನ್ನು ಪ್ರಾರಂಭಿಸಲಾಗಿದೆ. ಅಭಿವೃದ್ಧಿ ಕರ್ನಾಟಕ ರಾಜ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ವಿಮಾ ಮೊತ್ತವನ್ನು ರೂ. 1 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಗ್ನಿ ಶಮನ ಮತ್ತು ರಕ್ಷಣಾ ಕಾರ್ಯಚರಣೆಗಳಿಗೆ ದೇಶದಲ್ಲೇ ಅತೀ ಎತ್ತರದ 90 ಮೀಟರ್ ಏರಿಯಲ್ ಪ್ಲಾಟ್ ಫಾರ್ಮ್ ಲ್ಯಾಡರ್ ವಾಹನವನ್ನು 31 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲಾಗಿದೆ. ದಾವರಣಗೆರೆಯಲ್ಲಿ ಹೊಸ ಎಸ್.ಡಿ.ಆರ್.ಎಫ್. ಘಟಕ ಸ್ಮಾಪಿಸಲು ಅನುಮೋದನ ನೀಡಲಾಗಿದೆ.
ರಾಜ್ಯದ ಜನತೆಗೆ ಆಶ್ರಯ ಒದಗಿಸುವುದು ಸರ್ಕಾರದ ಮೂಲಭೂತ ಕರ್ತವ್ಯಗಳಲ್ಲಿ ಒಂದು, ಈ ಹಿನ್ನೆಲೆಯಲ್ಲಿ, ನನ್ನ ಸರ್ಕಾರವು ಆಗಸ್ಟ್ 2019 ರಿಂದ ಇಲ್ಲಿಯವರೆಗೆ ವಿವಿಧ ವಸತಿ ಯೋಜನೆಗಳಡಿ ಒಟ್ಟು 7,500 ಕೋಟಿ ರೂಪಾಯಿಗಳ ವೆಚ್ಚದಲ್ಲಿ 4.93 ಲಕ್ಷ ಮನೆಗಳನ್ನು ಪೂರ್ಣಗೊಳಿಸಿದ.
ಹಕ್ಕುಪತ್ರ ವಿತರಣೆ
11 ಸಾವಿರ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಒಂದು ಲಕ್ಷ ಬಹುಮಹಡಿ ಯೋಜನೆಯಡಿ ಒಟ್ಟು 59.5 ಸಾವಿರ ಬಹುಮಹಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ ನೆರೆಯಿಂದ 69 ಸಾವಿರ ಮನಗಳು ಹಾನಿಗೊಳಗಾಗಿದ್ದು ಹಿಂದಿನ ಸಾಲಿನ ಮನೆಗಳೂ ಒಳಗೊಂಡಂತೆ ಪಗತಿಗನುಗುಣವಾಗಿ ಒಟ್ಟು, 734 ಕೋಟಿ ರೂಪಾಯಿಗಳ ಅನುದಾನವನ್ನು ಫಲಾನುಭವಿಗಳಿಗೆ ಬಿಡುಗಡೆಮಾಡಿದೆ.ಡಿಬಿಟಿ ಮುಖೇನ ಸರ್ಕಾರಿ ಮಾಲೀಕತ್ವದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ 3.36 ಲಕ್ಷ ಕುಟುಂಬಗಳಿಗೆ ಬಹುಮಾಲೀಕತ್ವದ ಹಕ್ಕುಪತ್ರ ನೀಡಲು ತೀರ್ಮಾನಿಸಿದ್ದು, ಇಲ್ಲಿಯವರೆಗೆ 1.15 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಕರ್ನಾಟಕ ಗೃಹಮಂಡಳಿಯ ವಿವಿಧ ಯೋಜನೆಗಳಿಂದ ಸುಮಾರು 725 ಕೋಟಿ ರೂಪಾಯಿ ಮೊತ್ತದ 5324 ಸ್ವತ್ತುಗಳನ್ನು ಹಂಚಿಕೆ | ವಿಲೇವಾರಿ ಮಾಡಲಾಗಿದೆ.
2022-23ನೇ ಸಾಲಿನಲ್ಲಿ ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ 8 ಸಾವಿರ ಕೋಟಿ ರೂಪಾಯಿಗಳಾಗಿದ್ದು, ಜನವರಿ ಅಂತ್ಯಕ್ಕೆ 7749.96 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಮಂಗಳೂರು ಮತ್ತು ಕಲಬುರಗಿಯಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಯನ್ನು ಹಾಗೂ 38 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದೆ. 121.35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಇನ್ನೂ 14 ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಪ್ರಗತಿಯಲ್ಲಿದೆ.
ರಾಜ್ಯ ಸಾರಿಗೆ ಇಲಾಖೆಯ ವಾಹನ ಮತ್ತು ಸಾರಥಿ ಸೇವೆಗೆ ಸಂಬಂಧಿಸಿದ 31 ಸೇವೆಗಳನ್ನು ಸಂಪರ್ಕ ರಹಿತವಾಗಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಒದಗಿಸಲಾಗುತ್ತಿದೆ. ರಾಜ್ಯದಲ್ಲಿನ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಆಟೋ ರಿಕ್ಷಾ ಚಾಲಕರ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪುಪ್ರಥಮಬಾರಿಗೆ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳಿಗೆ 1 ಕೋಟಿ ರೂಪಾಯಿಗಳ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೆ ತರಲಾಗಿದೆ. ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಎಲೆಕ್ನಿಕ್ ಬಸ್‌ಗಳನ್ನು ಹಂತ ಹಂತವಾಗಿ ಸೇರ್ಪಡ ಮಾಡಲು ಆರಂಭಿಸಿರುತ್ತದೆ. ಬಿಡದಿಯಲ್ಲಿ ನೂತನ ಎಲೆಕ್ನಿಕ್ ಬಸ್ ಘಟಕವನ್ನು ಪ್ರಾಯೋಗಿಕವಾಗಿ ಮಾಡಲಾಗಿರುತ್ತದೆ.
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು 'ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ನೂತನ ಯೋಜನೆಯಾದ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ"ಯನ್ನು ರೂಪಿಸಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ನನ್ನ ಸರ್ಕಾರವು ಅಧಿಕಾರಿ / ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಾವು CEGIS (ಸೆಂಟರ್ ಫಾರ್ ಎಫೆಕ್ಟಿವ್ ಗವರ್ನನ್ಸ್ ಆಫ್ ಇಂಡಿಯನ್ ಸ್ಟೇಟ್ಸ್ ನೊಂದಿಗೆ Mol ಗೆ ಸಹಿ ಹಾಕಿದ್ದೇವೆ.
ಆಧುನಿಕ ತಂತ್ರಜ್ಞಾನ ಬಳಕೆ:
ನನ್ನ ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪುಜೆಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಕರ್ನಾಟಕದ ಜನಸಂಖ್ಯೆಯ 90.02% ಕುಟುಂಬ ಯೋಜನೆಗೆ ಒಳಪಟ್ಟಿದ, ಕುಟುಂಬ ಯೋಜನೆಯನ್ನು ಭಾರತ ಸರ್ಕಾರ - 2022ರ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಈ ಫ್ರುಟ್ಸ್ ತಂತ್ರಾಂಶದ ಮಾದರಿಯನ್ನು Agri Stack ಕಾರ್ಯಕ್ರಮವಾಗಿ ಒಕ್ಕೂಟದ ರೀತಿಯಲ್ಲಿ ದೇಶದಾದ್ಯಂತ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಮುಕ್ತ ದತ್ತಾಂಶ ಉಪಕ್ರಮವು ಡಿಜಿಟಲ್ ಇಂಡಿಯಾ ಪ್ರಶಸ್ತಿ 2022ರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯಲ್ಲಿ ದತ್ತಾಂಶ ಹಂಚಿಕ ಮತ್ತು ಬಳಕೆಯಲ್ಲಿ ಪುಶಸ್ತಿಯನ್ನು ಪಡೆದುಕೊಂಡಿದೆ. ಒಟ್ಟು 323 ಯೋಜನೆಗಳನ್ನು ಡಿ.ಬಿ.ಟಿ. ವೇದಿಕಗೆ ಆನ್ ಬೋರ್ಡ್ ಮಾಡಲಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಸುಮಾರು 6,226,75 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ಸುಮಾರು 139.44 ಲಕ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ದತ್ತಾಂಶ ಸಂರಕ್ಷಣೆ ಮತ್ತು ವ್ಯವಹಾರ ನಿರಂತರತೆಗಾಗಿ ವಿಪತ್ತು ಚೇತರಿಕಾ ಕೇಂದ್ರವನ್ನು ಆಗಸ್ಟ್ ನಲ್ಲಿ ಮತ್ತು ಭದ್ರತಾ ಕಾರ್ಯಾಚರಣಾ ಕೇಂದ್ರವನ್ನು ಜುಲೈ 2022 ರಲ್ಲಿ ಸ್ಥಾಪಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಂಗದಲ್ಲಿ ಕರ್ನಾಟಕವು ಭಾರತದ ಮುಂಚೂಣಿ ರಾಜ್ಯವಾಗಿದ್ದು, ಇದರ ಪ್ರೋತ್ಸಾಹಕ್ಕೆ ಹಲವಾರು ಕ್ರಮಗಳನ್ನು ನನ್ನ ಸರ್ಕಾರವು ಕೈಗೊಂಡಿದೆ. ಆರ್&ಡಿ ಮತ್ತು ಇನ್ನೊವೇಶನ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ನೀತಿ ಆಯೋಗದ ಭಾರತ ಇನ್ನೊವೇಶನ್ ಇಂಡೆಕ್ಸ್‌ನಲ್ಲಿ ಸತತ 3 ವರ್ಷಗಳಿಂದ ಕರ್ನಾಟಕ ಪುಥಮ ಸ್ಥಾನದಲ್ಲಿದೆ. ಜಾಗತಿಕ ಮಟ್ಟದ ಬೆಂಗಳೂರು ಟೆಕ್ ಮಹೋತ್ಸವ ಸಮಾವೇಶವನ್ನು ಆಯೋಜಿಸಲಾಗಿತ್ತು. 3-20220 ರಜತ ಬೆಂಗಳೂರಿನಲ್ಲಿ ಅತ್ಯಾಚಾರ ಪುಕರಣಗಳು ಮತ್ತು POCSO ಕಾಯ್ದೆ ಪ್ರಕರಣಗಳ ವಿಚಾರಣೆಗಾಗಿ 31 ಶೀಘ್ರಗತಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮಂಜೂರಾತಿ ನೀಡಿದೆ.
ಕನ್ನಡ ನಾಡು-ನುಡಿ ರಕ್ಷಣೆಗೆ ಬದ್ಧ:
ನನ್ನ ಸರ್ಕಾರವು ಕನ್ನಡ ನಾಡು-ನುಡಿ, ಸಂಸ್ಕೃತಿ ರಕ್ಷಣೆ ಮತ್ತು ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. 67ನೇ ಕನ್ನಡ ರಾಜ್ಯೋತ್ಸವ ಪುಯುಕ್ತ 'ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಜಗತ್ತಿನ 51 ರಾಷ್ಟ್ರಗಳು, ದೇಶದ 28 ರಾಜ್ಯಗಳು, 21 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ 1.37 ಕೋಟಿ ಕಂಠಗಳಲ್ಲಿ 6 ಗೀತೆಗಳನ್ನು ಹಾಡಲಾಯಿತು, ರಾಜ್ಯದ ಅತ್ಯುನ್ನತ ನಾಗರಿಕ ಪುಶಸ್ತಿಯಾದ ಕರ್ನಾಟಕ ರತ್ನ ಪುಶಸ್ತಿಯನ್ನು ದಿವಂಗತ ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ಪುದಾನ ಮಾಡಲಾಯಿತು. ನಶಿಸಿ ಹೋಗುತ್ತಿರುವ ತಳ ಸಮುದಾಯಗಳಲ್ಲಿರುವ ಕಲೆಗಳನ್ನು ಉಳಿಸಿ ಮುನ್ನೆಲೆಗೆ ತರಲು “ಮೂಲ ಸಂಸ್ಕೃತಿ - ಕನ್ನಡ ಸಂಸ್ಕೃತಿ' ಹೆಸರಿನಲ್ಲಿ ರಾಜ್ಯ ಮಟ್ಟದ ಬೃಹತ್ ಉತ್ಸವವನ್ನು ಆಯೋಜಿಸಲಾಗಿದೆ. ಕರ್ನಾಟಕ ಲಂಬಾಣಿ ಸಾಹಿತ್ಯ ಅಕಾಡೆಮಿ ಆರಂಭಿಸಲಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಯಕ್ಷ ರಂಗಾಯಣವನ್ನು ಸ್ಥಾಪಿಸಲಾಗಿದೆ.
ನನ್ನ ಸರ್ಕಾರವು ಕನ್ನಡ ಮತ್ತು ಕರ್ನಾಟಕದ ಇತರ ಪ್ರಾದೇಶಿಕ ಭಾಷೆಯ ಚಲನ ಚಿತ್ರಗಳಿಗೆ ನೀಡುತ್ತಿರುವ ಸಹಾಯಧನವನ್ನು 125 ರಿಂದ 200 ಚಲನಚಿತ್ರಗಳಿಗೆ ಹೆಚ್ಚಿಸಲಾಗಿದೆ. ನಾದದ ನವನೀತ ಡಾ: ಪಂಡಿತ್ ವೆಂಕಟೇಶ್ ಕುಮಾರರವರ ಕುರಿತು ಇಲಾಖೆಯು ನಿರ್ಮಿಸಿರುವ ಸಾಕ್ಷ್ಯ ಚಿತ್ರವು "ರಜತ ಕಮಲ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದೆ. ರಾಜ್ಯ ಪುರಾತತ್ತ್ವ: ಇಲಾಖೆಯ Adopt ಯೋಜನೆಯಡಿ ರಾಜ್ಯದ ಪುಮುಖ 28 ಸ್ಮಾರಕಗಳ ನಿರ್ವಹಣೆ a Monument ಹಾಗೂ ಅಭಿವೃದ್ಧಿಗಾಗಿ ದತ್ತು ನೀಡಲು ಮಾರ್ಗ ಸೂಚಿಗಳು ಹಾಗೂ ವೆಬ್ ಸೈಟ್ ಲೋಕಾರ್ಪಣೆ ಗೊಳಿಸಲಾಗಿದೆ.