ಸಿಎಂ ಸಿದ್ದರಾಮಯ್ಯಗೆ 'ಸಿದ್ರಾಮುಲ್ಲಾ ಖಾನ್' ಎಂದ ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಸುಮೋಟೊ ಪ್ರಕರಣ ದಾಖಲು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಆರೋಪ ಪ್ರಕರಣದಲ್ಲಿ ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಸು ಮೋಟೊ ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಪೊಲೀಸರು.
ಕಾರವಾರ, ಉತ್ತರ ಕನ್ನಡ (ಫೆ.25): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಆರೋಪ ಪ್ರಕರಣದಲ್ಲಿ ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಸು ಮೋಟೊ ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಪೊಲೀಸರು.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಭಾಷಣ ಮಾಡಿದ್ದ ಸಂಸದ ಅನಂತಕುಮಾರ ಹೆಗಡೆ, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟಕ್ಕೆ ತಿರುಗೇಟು ನೀಡುವ ಭರದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಮ್ಮ ತೆರಿಗೆ ಹಣ, ನಮ್ಮ ಹಕ್ಕು’ ಎನ್ನುತ್ತಾರೆ. ಕೇಂದ್ರ ಸರ್ಕಾರ ನೀಡಿದ ಸಾವಿರಾರು ಕೋಟಿ ರು. ಬಗ್ಗೆ ಲೆಕ್ಕ ಕೊಡಿ ಎಂದರೆ ನಾವು ಲೆಕ್ಕ ಕೊಡುವುದಿಲ್ಲ ಎನ್ನುತ್ತಾರೆ. ಕೇಂದ್ರದ ಹಣವೇನು ನಿಮ್ಮಪ್ಪನ ಮನೆ ಆಸ್ತೀನಾ?’ ಎಂದು ವಾಗ್ದಾಳಿ ನಡೆಸಿದ್ದರು.
ವಿನಾಶ ಕಾಲೇ ವಿಪರೀತ ಬುದ್ಧಿ: ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ
ಹಿಂದುಗಳು ಕಟ್ಟಿದ ತೆರಿಗೆಯಿಂದ ಹಣದಿಂದ ಮುಸ್ಲಿಮರ ಮಸೀದಿಗೆ, ಚರ್ಚಿಗೆ ಯಾಕೆ ಅನುದಾನ ಕೊಟ್ರಿ ? ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತೀರಿ ಅದೇ ರೀತಿ ನಮ್ಮ ದೇಗುಲ ನಮ್ಮ ಹಕ್ಕು. ನಮ್ಮ ಹಿಂದೂ ದೇವಾಲಯದ ಹಣವನ್ನು ಚರ್ಚ್ ಮತ್ತು ಮಸೀದಿಗೆ ಏಕೆ ಕೊಡುತ್ತೀರಿ ಎಂದು ನಾವು ಕೇಳಬೇಕೊ, ಬೇಡವೊ? ‘ಹಿಂದೂಗಳು ನೀಡಿದ ತೆರಿಗೆ, ಹಿಂದೂಗಳ ಹಕ್ಕು’ ಎಂದು ಕುಳಿತುಕೊಂಡರೆ ಪರಿಸ್ಥಿತಿ ಏನಾಗುತ್ತದೆ? ಹಿಂದೂ ಸಮಾಜವೆಂದರೆ ಬೇವರ್ಸಿ ಸಮಾಜವೆಂದು ತಿಳಿದುಕೊಂಡಿದ್ದೀರಾ? ಈ ಸಮಾಜಕ್ಕೆ ಹೇಳುವವರು, ಕೇಳುವರಾರು ಇಲ್ಲವೇನು?
ಸಂಸದ ಅನಂತಕುಮಾರ್ ಹೆಗ್ಡೆನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಎಂಬಿ ಪಾಟೀಲ್ ವಾಗ್ದಾಳಿ
ನಮ್ಮ ಹಳ್ಳಿಗಳಲ್ಲಿ ಸಾಕಷ್ಟು ದೇವಾಲಯಗಳು ಹಾಳು ಬಿದ್ದಿವೆ. ನಮ್ಮ ಹಿಂದೂಗಳ ಹಣವನ್ನು ಅದಕ್ಕೆ ಕೊಡಲಿ ಶೇ.99ರಷ್ಟು ಹಿಂದೂಗಳು ಕಟ್ಟಿದ ತೆರಿಗೆಯಿಂದ ಸಿದ್ರಾಮುಲ್ಲಾಖಾನ್ ಸರ್ಕಾರ ನಡೆಯುತ್ತಿದೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ಮುಖ್ಯಮಂತ್ರಿ ವಿರುದ್ಧ ಸಿದ್ರಾಮುಲ್ಲಾಖಾನ್ ಪದ ಬಳಕೆ ಮಾಡಿದ್ದರಿಂದ ಸು ಮೋಟೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.