ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯಾತ್ರೆಗೆ ರಾಜ್ಯ ಸರ್ಕಾರವು ಪ್ರತಿ ಯಾತ್ರಿಗೆ 5 ಸಾವಿರ ರು. ರಿಯಾಯಿತಿ ನೀಡಲಿದೆ. ಮುಂದಿನ ಯಾತ್ರೆ ಜು.29ಕ್ಕೆ ಆರಂಭವಾಗಲಿದೆ.

ಬೆಂಗಳೂರು (ಜು.20) :  ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯಾತ್ರೆಗೆ ರಾಜ್ಯ ಸರ್ಕಾರವು ಪ್ರತಿ ಯಾತ್ರಿಗೆ 5 ಸಾವಿರ ರು. ರಿಯಾಯಿತಿ ನೀಡಲಿದೆ. ಮುಂದಿನ ಯಾತ್ರೆ ಜು.29ಕ್ಕೆ ಆರಂಭವಾಗಲಿದೆ.

ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ ಪುಣ್ಯ ಕ್ಷೇತ್ರಗಳಿಗೆ ರಿಯಾಯಿತಿ ದರದಲ್ಲಿ ಪ್ಯಾಕೇಜ್‌ ರೂಪಿಸಲಾಗಿದೆ. ವಿಶೇಷ ರೈಲಿನ ಪ್ರವಾಸ ಇದಾಗಿದ್ದು, ಪ್ರತಿ ಯಾತ್ರಾರ್ಥಿಗೆ 20 ಸಾವಿರ ರು. ಪ್ಯಾಕೇಜ್‌ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ತಲಾ 5 ಸಾವಿರ ರು. ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುತ್ತದೆ. ಉಳಿದ 15 ಸಾವಿರ ರು. ಮೊತ್ತವನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಾಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆಯ ವ್ಯವಸ್ಥೆ ಮಾಡಲಾಗುತ್ತದೆ. ಇದು ಒಟ್ಟು 7 ದಿನಗಳ ಪ್ರವಾಸವಾಗಿರುತ್ತದೆ.

ರಾಜ್ಯದಿಂದ ಕಾಶಿಯಾತ್ರೆ ಪ್ರವಾಸಕ್ಕೆ ಹೊರಡಲಿದೆ ವಿಶೇಷ ರೈಲು

ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್‌ ಪೂರೈಸಿದ್ದು, 1,644 ಯಾತ್ರಾರ್ಥಿಗಳು ಯಾತ್ರೆಗೆ ಹೋಗಿ ಬಂದಿದ್ದಾರೆ. ರಾಜ್ಯ ಸರ್ಕಾರ ತಲಾ 5 ಸಾವಿರ ರು. ನಂತೆ 82.20 ಲಕ್ಷ ರು. ಸಹಾಯಧನ ನೀಡಿದೆ.

ಜುಲೈ 29ಕ್ಕೆ ಮತ್ತೊಂದು ಯಾತ್ರೆ

ಇದೇ ಜುಲೈ 29ರಂದು ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಯಾತ್ರೆಗೆ ತೆರಳುವ ಆಸಕ್ತಿ ಇರುವ ಯಾತ್ರಾರ್ಥಿಗಳು ಐಆರ್‌ಸಿಟಿಸಿ ಪೋರ್ಟಲ್‌ ಮೂಲಕ ತಮ್ಮ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಈಗ ಹೊಸದಾಗಿ ಸುಸಜ್ಜಿತ ಎಲ್‌ಎಚ್‌ಬಿ ಕೋಚ್‌ಗಳು, ಅಡುಗೆ ಮನೆ ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರನ್ನು ಸಹ ನಿಯೋಜಿಸಲಾಗಿದೆ. ರಾಜ್ಯದ ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಶಿಯಾತ್ರೆ ಮಾಡಿ ಬಂದವರಿಂದ ಸೋಂಕು , ಒಂದೇ ಗ್ರಾಮದ 120 ಜನರಿಗೆ ಕೋವಿಡ್ ಪಾಸಿಟಿವ್.!