10:51 PM (IST) Jul 31

Karnataka News Live: ಇಂಗ್ಲೆಂಡ್‌ನಲ್ಲಿ ಭಾರತ ದಿವ್ಯಾಂಗ ಕ್ರಿಕೆಟ್‌ ತಂಡದ ಪರ ಆಡಲಿದ್ದಾನೆ ವಿಜಯಪುರದ ಚಿಂದಿ ಆಯುವವನ ಪುತ್ರ

ವಿಜಯಪುರದ ಕೊಳೆಗೇರಿಯ ಗುಡಿಸಲಿನಲ್ಲಿ ವಾಸಿಸುವ, ಚಿಂದಿ ಆಯುವ ದಂಪತಿಯ ಮಗನಾದ ವಿಕಲಚೇತನ ಕ್ರಿಕೆಟಿಗ ರಾಜೇಶ್ ಕಣ್ಣೂರ್, ಬಡತನದ ನಡುವೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

Read Full Story
10:28 PM (IST) Jul 31

Karnataka News Live: ಕರ್ನಾಟಕದಲ್ಲಿ ಟೋಲ್ ಸಂಗ್ರಹ ಭಾರಿ ಜಿಗಿತ - 5 ವರ್ಷಗಳಲ್ಲಿ ದ್ವಿಗುಣಗೊಂಡ ಆದಾಯ, ₹4,779 ಕೋಟಿಗೆ ಏರಿಕೆ!

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಟೋಲ್ ಸಂಗ್ರಹಣೆ ಶೇ.100ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, 46 ರಿಂದ 68ಕ್ಕೆ ಏರಿದ ಟೋಲ್ ಪ್ಲಾಜಾಗಳ ಸಂಖ್ಯೆ ಮತ್ತು ನಿಯತಕಾಲಿಕ ದರ ಏರಿಕೆಯು ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.

Read Full Story
10:09 PM (IST) Jul 31

Karnataka News Live: ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಮಾಜಿ ಸಚಿವ ವಿನಯ್ ಕುಲಕರ್ಣಿ; ಅಭಿಮಾನಿಗಳಿಂದ ಜೈಕಾರ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅವರನ್ನು ಸ್ವಾಗತಿಸಿದರು.
Read Full Story
10:03 PM (IST) Jul 31

Karnataka News Live: Bengaluru - ಯುಪಿಐ ಪಾವತಿ ಫೇಲ್, ಚಿಲ್ಲರೆ ಗಲಾಟೆ - ಹಣವಿದ್ದರೂ ಹೆದ್ದಾರಿಯಲ್ಲಿ ಪ್ರಯಾಣಿಕನನ್ನು ಕೆಳಗಿಳಿಸಿದ BMTC ಕಂಡಕ್ಟರ್!

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಯುಪಿಐ ಪಾವತಿ ವಿಫಲವಾದ ಕಾರಣ, ಕಂಡಕ್ಟರ್ ಪ್ರಯಾಣಿಕರೊಬ್ಬರನ್ನು ನಡುರಸ್ತೆಯಲ್ಲಿ ಇಳಿಸಿದ್ದಾರೆ. ಚಿಲ್ಲರೆ ಹಣ ಇಲ್ಲದಿರುವುದು ಮತ್ತು ಯಂತ್ರದ ದೋಷದಿಂದ ಉಂಟಾದ ಈ ಘಟನೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಬಿಎಂಟಿಸಿ ಸಿಬ್ಬಂದಿಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

Read Full Story
09:53 PM (IST) Jul 31

Karnataka News Live: 'ನೀನು ರಾಯರಂತೆ ನಟಿಸುತ್ತೀಯಾ' ಎಂದ ಅಜ್ಜಿ - ರಾಘವೇಂದ್ರ ಮಹಾತ್ಮೆ ನಟ ಪರೀಕ್ಷಿತ್ ಭಾವುಕ

ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸುತ್ತಿರುವ ಪರೀಕ್ಷಿತ್ ಅವರ ಅಭಿನಯ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಇದೀಗ ಆ ಮೆಚ್ಚುಗೆಗೆ ಜೀವಂತ ಸಾಕ್ಷಿಯಾಗುವಂತಹ ಒಂದು ವಿಶೇಷ ಘಟನೆ ನಡೆದಿದೆ.

Read Full Story
09:04 PM (IST) Jul 31

Karnataka News Live: 35ರ ನಂತರ ತೂಕ ಹೆಚ್ಚಳಕ್ಕೆ ವಯಸ್ಸೇ ಕಾರಣವಲ್ಲ - ಥೈರಾಯ್ಡ್ ಸಮಸ್ಯೆಯ ಈ ಸೂಚನೆಗಳನ್ನು ಗಮನಿಸಿ

ದೇಹದ ಚಯಾಪಚಯ ಕ್ರಿಯೆ, ಶಕ್ತಿ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕಾರ್ಯದಲ್ಲಿನ ವ್ಯತ್ಯಾಸವು ಅನಿರೀಕ್ಷಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

Read Full Story
08:39 PM (IST) Jul 31

Karnataka News Live: ಕೊಡಗಿನ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ - ಶಾಸಕ ಮಂತರ್ ಗೌಡ ಹೇಳಿದ್ದೇನು?

ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..

Read Full Story
08:21 PM (IST) Jul 31

Karnataka News Live: ತೋಟದ ಕೆಲಸ, ಪ್ಲಂಬಿಂಗ್‌ ಕೆಲಸಕ್ಕೆ ಜನ ಸಿಕ್ತಿಲ್ವಾ? ಅದಕ್ಕೂ ಬಂದಿದೆ ಹೊಸ ಅಪ್ಲಿಕೇಶನ್‌ The Mestri

ಬನವಾಸಿ ಸಮೀಪದ ಕೃಷಿಕ ಹಾಗೂ ಐಟಿ ಎಂಜಿನಿಯರ್ ಗೌತಮ್ ಬೆಂಗಳೆ ಅವರು 'ದ ಮೇಸ್ತ್ರಿ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್, ಕೌಶಲ್ಯಪೂರಿತ ಕೆಲಸಗಾರರನ್ನು ಮತ್ತು ಸೇವೆ ಬಯಸುವ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
Read Full Story
08:12 PM (IST) Jul 31

Karnataka News Live: ಪದೇಪದೇ ಚಾಕೊಲೇಟ್ ತಿನ್ನೋ ಅಭ್ಯಾಸ ಇದೆಯಾ? ದಿನವೊಂದಕ್ಕೆ ಇಷ್ಟು ಮಾತ್ರ ತಿಂದ್ರೆ ನೀವು ಬಚಾವ್ ಆಗ್ತಿರಾ! ಇಲ್ಲ ಅಂದ್ರೆ..

ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ಡಾರ್ಕ್ ಚಾಕೊಲೇಟ್ ಅನ್ನು ಸವಿಯುವ ಅಭ್ಯಾಸ ಮಾಡಿಕೊಳ್ಳಿ. ನೆನಪಿಡಿ, ‘ಕಹಿ’ಯಾದ ಕೋಕೋ ಹೆಚ್ಚಿದ್ದಷ್ಟೂ ನಿಮ್ಮ ಆರೋಗ್ಯಕ್ಕೆ ‘ಸಿಹಿ’ ಹೆಚ್ಚು!.. ಚಾಕೊಲೇಟ್ ಸೀಕ್ರೆಟ್ ತಿಳಿಯಲು ಈ ಸ್ಟೋರಿ ನೋಡಿ..

Read Full Story
08:00 PM (IST) Jul 31

Karnataka News Live: ‘ಅಯ್ಯೋ ಅಣ್ಣಾ, ನನ್ನ ಹೊರಗೆ ತೆಗೆಯಿರಿ’; ಮೋಕ್ಷ ಸಿಗುತ್ತೆ ಅಂತ ಹೋಗಿ ಸಾವಿನ ದವಡೆಗೆ ಜಾರಿದ ಮಹಿಳೆ; ಮುಂದೆ ಆಗಿದ್ದೇನು?

ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ತಿರುವಣ್ಣಾಮಲೈನ 'ಮೋಕ್ಷ ಮಾರ್ಗಂ' ಎಂಬ ಕಿರಿದಾದ ಗುಹೆಯಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Read Full Story
07:48 PM (IST) Jul 31

Karnataka News Live: ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾ ಕನಸಿನ ಹಿಂದೆ ಓಡಿದ ತಾರುಷ್ - 'ಜಾಲಿ' ಮೂಲಕ ಹೊಸ ಹೆಜ್ಜೆ

Jolly Kannada Movie: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು.

Read Full Story
07:16 PM (IST) Jul 31

Karnataka News Live: ರಾವಣನಾಗಿ ಅಬ್ಬರಿಸಿರುವ ಯಶ್‌ಗೆ ರಿಯಲ್‌ ಲೈಫ್‌ನಲ್ಲಿ 'ಹಾರರ್' ಸಿನಿಮಾಗಳಂದ್ರೆ ಭಯವಂತೆ!

Yash On Horror Movies: ಹಾರರ್ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಯಶ್‌, "ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಹಾರರ್ ಸಿನಿಮಾಗಳನ್ನು ಮಾತ್ರ ಹೆಚ್ಚಾಗಿ ನೋಡುವುದಿಲ್ಲ.

Read Full Story
06:56 PM (IST) Jul 31

Karnataka News Live: Toxic - ಕಂಪ್ಲೀಟ್ ಗುಟ್ಟು ಬಿಚ್ಚಿಟ್ಟ ಯಶ್.. 'ಟಾಕ್ಸಿಕ್'ನಲ್ಲಿ ರೊಮಾನ್ಸ್ ಮಾತ್ರವಲ್ಲ ಬೇರೇನೋ ಇದೆಯಂತೆ!

ಕಾಯ್ತಾ ಕಾಯ್ತಾ ಕಣ್ಣು ದಣಿದು ಹೋಗಿದ್ದ ಯಶ್​ಅಭಿಮಾನಿಗಳಿಗೆ, ಇಡೀ ಇಂಡಿಯನ್ ಸಿನಿಪ್ರೇಮಿಗಳಿಗೆ ಅಸಲಿ ಹಬ್ಬ ಆಗಿದ್ದು, ಟಾಕ್ಸಿಕ್​​ ಸಿನಿಮಾದ ರೊಮ್ಯಾಂಟಿಕ್ ಹಾಡು. ‘ತಬಾಹಿ’ಯಲ್ಲಿ ಕಿಯಾರಾನಾ ತಬ್ಬಿ ಮುದ್ದಾಡಿದ್ರು ಯಶ್.. ಆದ್ರೆ , ಸಿನಿಮಾದಲ್ಲಿ ಇನ್ನೂ ಏನೋ ಇದೆ ಅಂತ ಹೇಳಿದ್ದಾರೆ ಯಶ್!

Read Full Story
06:10 PM (IST) Jul 31

Karnataka News Live: ಯಕ್ಷರಂಗದ ನಗುವಿನ ಚಕ್ರವರ್ತಿ ಶ್ರೀಧರ ಭಟ್ ಕಾಸರಕೋಡ್ ನಿಧನ; ಅಭಿಮಾನಿಗಳು ಕಣ್ಣೀರು

ಯಕ್ಷಗಾನದ ಹಾಸ್ಯ ಚಕ್ರವರ್ತಿ ಎಂದು ಖ್ಯಾತರಾಗಿದ್ದ ಶ್ರೀಧರ ಭಟ್ ಕಾಸರಕೋಡ್ (52) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೂರುವರೆ ದಶಕಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದ ಇವರು, ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳಗಳಲ್ಲಿ ಹಾಸ್ಯಕಲಾವಿದರಾಗಿ ಜನಪ್ರಿಯರಾಗಿದ್ದರು.
Read Full Story
06:07 PM (IST) Jul 31

Karnataka News Live: ಯಶ್ 'ರಾಮಾಯಣ' ಹೈಪ್ ನಡುವೆ ರಾವಣನ ಮೂರ್ತಿ ಮುಂದೆ ರಾಧಿಕಾ - ಅಭಿಮಾನಿಗಳಲ್ಲಿ ಹೊಸ ಚರ್ಚೆ

Radhika Pandit Viral Photo: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರ ಸಖತ್ ಚರ್ಚೆಗೆ ಗ್ರಾಸವಾಗಿದೆ.

Read Full Story
05:29 PM (IST) Jul 31

Karnataka News Live: 35 ಟಿಎಂಸಿ ನೀರಿದ್ದರೂ ವಿಜಯನಗರ 11ಎ ಕಾಲುವೆಗೆ ನೀರಿಲ್ಲ - ಸರ್ಕಾರದ ವಿರುದ್ಧ ರೆಡ್ಡಿ, ಶ್ರೀರಾಮುಲು ಆಕ್ರೋಶ

Vijayanagar 11A Canal: ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು.

Read Full Story
05:20 PM (IST) Jul 31

Karnataka News Live: ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!

ಶಾಸಕ ಕೆ.ಹರೀಶ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಮುಂಡಿಬೆಟ್ಟದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದು, ವೈಯಕ್ತಿಕ ಟೀಕೆ ಮತ್ತು ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story
05:03 PM (IST) Jul 31

Karnataka News Live: Vinay Kulkarni - ಸಂಪುಟ ವಿಸ್ತರಣೆ ಸಮಯದಲ್ಲೇ ವಿನಯ್‌ಗೆ ಜಾಮೀನು; ಸೇರ್ತಾರಾ ಡಿಕೆ ಕ್ಯಾಬಿನೆಟ್‌? ಈಗ ಸುಪ್ರೀಂ ನಡೆ ಮೇಲೆ ಎಲ್ಲರ ಚಿತ್ತ!

ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ನಿಂದ ಜಾಮೀನು ಮತ್ತು ಶಿಕ್ಷೆಗೆ ತಡೆ ಸಿಕ್ಕಿದೆ. ಇದರಿಂದಾಗಿ, ಅವರ ಸಚಿವ ಸಂಪುಟ ಸೇರ್ಪಡೆಯ ಚರ್ಚೆಗಳು ಗರಿಗೆದರಿದ್ದು, ಕಾಂಗ್ರೆಸ್ ವಲಯದಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಆದರೆ, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇರುವುದರಿಂದ, ಅವರ ರಾಜಕೀಯ ಭವಿಷ್ಯವು ಸರ್ವೋಚ್ಚ ನ್ಯಾಯಾಲಯದ ಮುಂದಿನ ನಡೆಯನ್ನು ಅವಲಂಬಿಸಿದೆ.
Read Full Story
04:41 PM (IST) Jul 31

Karnataka News Live: 164 ಎಕರೆ ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಗೃಹ ಮಂಡಳಿ, ರೈತರು ನಿರಾಳ

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಗೃಹ ಯೋಜನೆಗಾಗಿ ಉದ್ದೇಶಿಸಿದ್ದ 164 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಹಿಂಪಡೆದಿದೆ.

Read Full Story
04:20 PM (IST) Jul 31

Karnataka News Live: 'ಯಶಸ್ಸನ್ನು ಜೀರ್ಣಿಸಿಕೊಳ್ಳೋದು ಕಷ್ಟ..' RCB ಸ್ಟಾರ್‍‌ಗೆ ಏನಾಯ್ತು? ಕೃನಾಲ್ ಹೀಗ್ಯಾಕೆ ಹೇಳಿದ್ರು? VIDEO

ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಕ್ರಿಕೆಟಿಗ ಕೃನಾಲ್ ಪಾಂಡ್ಯ ತಮ್ಮ ವೃತ್ತಿಜೀವನದ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಯಶಸ್ಸನ್ನು ಜೀರ್ಣಿಸಿಕೊಳ್ಳುವುದು, ತಂಡದ ಗೆಲುವಿಗೆ ಆದ್ಯತೆ ನೀಡುವುದು ಮತ್ತು ಒತ್ತಡವನ್ನು ನಿಭಾಯಿಸುವ ಬಗ್ಗೆ ಅವರು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ. ಅವರ ತಂದೆಯ ಶ್ರಮವೇ ತಮ್ಮ ಸ್ಪರ್ಧಾತ್ಮಕ ಗುಣಕ್ಕೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.
Read Full Story