Karnataka assembly election 2023: ಮತದಾನದ ದಿನ ರಾಜ್ಯದಲ್ಲಿ ಐವರು ಸಾವು!
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರಲ್ಲಿ ನಾಲ್ವರು ಹೃದಯಾಘಾತ ಮತ್ತಿತರ ಕಾರಣಗಳಿಂದ ಮೃತಪಟ್ಟರೆ, ಮತ್ತೊಬ್ಬರು ಆನೆ ದಾಳಿಗೆ ಬುಧವಾರ ಬಲಿಯಾಗಿದ್ದಾರೆ.
ಬೆಂಗಳೂರು (ಮೇ.11) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರಲ್ಲಿ ನಾಲ್ವರು ಹೃದಯಾಘಾತ ಮತ್ತಿತರ ಕಾರಣಗಳಿಂದ ಮೃತಪಟ್ಟರೆ, ಮತ್ತೊಬ್ಬರು ಆನೆ ದಾಳಿಗೆ ಬುಧವಾರ ಬಲಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಘರ್ವಿ ಗ್ರಾಮದ ಪಾರವ್ವ ಈಶ್ವರ ಸಿದ್ನಾಳ (68) ಮತಗಟ್ಟೆಕೇಂದ್ರದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಸ್ಥಳದಲ್ಲೇ ಮೃತಪಟ್ಟರೆ, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಜಯಣ್ಣ (49) ತಮ್ಮ ಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬಂದ ಕೂಡಲೇ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಮತಗಟ್ಟೆಗೆ ಬಂದಿದ್ದ ಅಮೀರ್‌ಸಾಬ್ (56) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೇ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾದರಹಳ್ಳಿಯ ರಾಮಣ್ಣ (70) ಮತದಾನ ಮಾಡಿದ ನಂತರ ಮನೆಯಲ್ಲಿ ಪಾಶ್ರ್ವವಾಯುವಿನಿಂದಾಗಿ ನಿಧನರಾಗಿದ್ದಾರೆ.
ಕೊಡಗು: ಮತದಾರರು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆ-ಲಾಠಿ ಚಾರ್ಚ್
ಇನ್ನು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (50) ಮತಚಲಾಯಿಸಿ ಮನೆಗೆ ವಾಪಸಾಗುತ್ತಿದ್ದಾಗ ಮಾರ್ಗ ಮಧ್ಯೆ ಆನೆ ದಾಳಿಗೆ ಬಲಿಯಾಗಿದ್ದಾರೆ.
ನೀರಲ್ಲಿ ಮುಳುಗಿ ಯುವಕ ಸಾವು
ಕಲಬುರಗಿ: ಈಜಲು ಹೋದ ಯುವಕ ನೀರಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ನಗರದ ರಾಮತೀರ್ಥ ಬಳಿಯ ಕಣಿಯಲ್ಲಿ ಸಂಭವಿಸಿದೆ. ಆಶಿಶ್ ಸಾವನ್ನಪ್ಪಿದ ಯುವಕ. ಮಂಗಳವಾರ ಮಧ್ಯಾಹ್ನ ಸ್ನೇಹಿತರ ಜೊತೆಗೆ ಈಜಲು ಹೋದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಇಂದು ಅಗ್ನಿಶಾಮಕ ಸಿಬ್ಬಂದಿಯವರು ಮೃತ ದೇಹ ಹೊರತೆಗೆದಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲ್ಲು ತೂರಾಟ: ದೂರು ದಾಖಲು
ಕಮಲಾಪುರ: ಪಟ್ಟಣದಲ್ಲಿ ಇತ್ತೀಚೆಗೆ ಸೇವಾಲಾಲ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡಿಗೆ ಯುವಕರು ಕುಣಿದು ಕೊಪ್ಪಳಿಸುವ ಸಮಯದಲ್ಲಿ ವಾಗ್ವಾದ ನಡೆದು ಕಲ್ಲು ತೂರಾಟದ ವೇಳೆ ಗಾಯಗೊಂಡವರು ಕಮಲಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಿಸಿದ್ದಾರೆ. ಪಟ್ಟಣದ ಬಸವೇಶ್ವರ ಚೌಕಿನಿಂದ ತಾಲೂಕು ಪಂಚಾಯ್ತಿವರೆಗೆ ಮೆರವಣಿಗೆ ಸಾಗುವ ಮಾರ್ಗ ಮಧ್ಯೆ ಬಸ್ ನಿಲ್ದಾಣದ ಹತ್ತಿರ 10ರಿಂದ 15 ಅಪರಿಚಿತರು ನಾವು ಪ್ರಿಯಾಂಕ ಖರ್ಗೆ ಹುಡುಗರು ಎಂದು ಕಿರಿಚುತ ಮಣಿಕಂಠ ರಾಠೋಡ್ ಮೇಲೆ ಕಲ್ಲು ತೋರಿದರು. ಅವರಿಗೆ ರಕ್ಷಣೆ ಮಾಡಲು ನಾನು ಹಾಗೂ ಮಣಿಕಂಠ ರಾಠೋಡ್ ಅವರ ಕಾರು ಚಾಲಕ ಅನಿಲ್‌ಗೆ ಕಲ್ಲು ನನಗೆ ತಗಲಿ ನನ್ನ ತಲೆಗೆ ಪೆಟ್ಟಾಗಿದೆ ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಂತಕುಮಾರ್ ಚಂದ್ರಕಾಂತ್ ಕೆರೂರ್ ಎಂಬುವರು ದೂರು ನೀಡಿದ್ದಾರೆ. ಅಪರಾಧ ಸಂಖ್ಯೆ 19/2023 ಕಲ್ಲು 143,147,148,324,149, ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಮೆರವಣಿಗೆಯಲ್ಲಿ ಬಳಸಿದ ಡಿಜೆ ವಶಪಡಿಸಿದ್ದು. ಡಿಜೆ ಮಾಲೀಕ ಕಲ್ಕುಟುಗದ ಮಹೇಶ್ ಜಮಾದಾರ್ ವಿರುದ್ಧ ಪ್ರಕಟಣ ದಾಖಲಿಸಲಾಗಿದೆ. ಪರವಾನಿಗೆ ಪಡೆಯದ ಡಿಜೆ ಹಚ್ಚಿದ್ದು ಶಾಂತಿ ಕಾದಾಡಲು ಕಾರಣವಾಗಿದೆ. ಐಪಿಸಿ 290,ಕೆಪಿಸಿ 109, ಅಡಿಯಲ್ಲಿ ಪ್ರಕಟಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
Karnataka elections 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್ ಹಾಕಿದ ವಿಡಿಯೋ, ಫೋಟೋ ವೈರಲ್!
ಬಸ್ ಅಪಘಾತ: ಮದೀನಾಕ್ಕೆ ತೆರಳುತ್ತಿದ್ದ ಐವರು ಸಾವು
ಕಲಬುರಗಿ: ಸೌದಿ ಅರೇಬಿಯಾದ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಐವರು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಲಬುರಗಿಯ ನೂರ್ ಬಾಗ್ ನಿವಾಸಿ ಶಫೀದ್ ಹುಸೈನ್ ಸುಲ್ಲದ್, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಝೈನುದ್ದೀನ್ ಸಾಹೇಬ…, ರೆಹನಾ ಬೇಗಮ…, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಮೃತಪಟ್ಟವರು ಎಂದು ತಿಳಿದುಬಂದಿದೆ. ಇವರು ಸಾಲಿಹೀನ್ ಎಂಬ ಹಜ್ ಮತ್ತು ಉಮ್ರಾ ಟೂರ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಮೂಲಕ ಪವಿತ್ರ ಮಕ್ಕಾ ಮತ್ತು ಮದೀನಾ ಪ್ರವಾಸ ಕೈಗೊಂಡಿದ್ದರು. ಉಮ್ರಾ ನಿರ್ವಹಿಸಿ ಬಸ್ ಮೂಲಕ ಮದೀನಾಕ್ಕೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಬಸ್ ಮಕ್ಕಾದಿಂದ 250 ಕಿ.ಮೀ.ದೂರದಲ್ಲಿ ಮುಂದೆ ಹೋಗುತ್ತಿದ್ದ ಟ್ರಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.