141 ಸ್ಥಾನ​ಗ​ಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ ಡಿಕೆಶಿ, 115 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಿಎಸ್‌ವೈ, ಗೆಲುವು ಯಾರಿಗೆ?

ರಾಜ್ಯದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 141 ಸ್ಥಾನ​ಗ​ಳಲ್ಲಿ ಅಭೂತ ಪೂರ್ವ ಗೆಲುವು ಸಾಧಿಸ​ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇನ್ನೊಂದೆಡೆ ಸಮೀಕ್ಷೆ ಯಾವ ಪಕ್ಷದ ಪರವಾಗಿಯೇ ಬಂದಿರಲಿ. ಆದರೆ ಈ ಬಾರಿ ರಾಜ್ಯದಲ್ಲಿ 115ಕ್ಕೂ ಹೆಚ್ಚಿನ ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಹಾಗಾದರೆ ಗೆಲುವು ಯಾರಿಗೆ?

Karnataka assembly election 2023 Competition between Congress-BJP to form the government rav

ಕನಕಪುರ (ಮೇ.12) : ರಾಜ್ಯದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 141 ಸ್ಥಾನ​ಗ​ಳಲ್ಲಿ ಅಭೂತ ಪೂರ್ವ ಗೆಲುವು ಸಾಧಿಸ​ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನಗರದ ವಾಸು ಹೋಟೆಲ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ವಿರೋಧಿ ಸರ್ಕಾರ ಇತ್ತು. ಬಿಜೆಪಿ(Karnataka BJP)ಯವರ ಗಿಮಿಕ್‌ ಇಲ್ಲಿ ನಡೆಯುವುದಿಲ್ಲ. ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಮೇ 13 ರಿಂದ ಕಾಂಗ್ರೆಸ್‌(Congress) ಆಡಳಿತ ಖಚಿತ ಎಂದರು.

ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ ಆಪರೇಷನ್‌ ಹಸ್ತ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ದೊಡ್ಡದು. ನಮಗೆ ಜನ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ ಎಂಬ ವಿಶ್ವಾಸವಿದೆ ಎಂದಷ್ಟೇ ಉತ್ತರಿಸಿದರು.

Karnataka election 2023: ಕಾಂಗ್ರೆಸ್‌ ಹೈಅಲರ್ಟ್; ಸರ್ಕಾರ ರಚನೆಗಾಗಿ ಈಗಿನಿಂದಲೇ ಸಿದ್ಧತೆ!

ಮತದಾರರಿಗೆ ಕೃತಜ್ಞತೆ: ಕನ​ಕ​ಪುರ ಕ್ಷೇತ್ರದ ಜನತೆ ನೀಡಿರುವ ಶಕ್ತಿ ನನಗಲ್ಲ, ರಾಜ್ಯಕ್ಕೆ ನೀಡಿದಂಥ ಶಕ್ತಿ. ಇಲ್ಲಿ ಶಿವಕುಮಾರ್‌ ಅಭ್ಯರ್ಥಿ ನೆಪಕ್ಕಷ್ಟೆ. ಪ್ರತಿಯೊಂದು ಮನೆ ಮತದಾರನೂ ತಾನೇ ಅಭ್ಯರ್ಥಿ ಎಂಬಂತೆ ಕೆಲಸ ನಿರ್ವಹಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವಲ್ಲದೆ ಬಿಜೆಪಿ, ಜೆಡಿಎಸ್‌ ಕಾರ್ಯ​ಕ​ರ್ತರು ಜಾತ್ಯತೀತವಾಗಿ ನನಗೆ ಆಶೀರ್ವಾದ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕನಕಪುರ ರಾಜ್ಯಕ್ಕೆ ಮಾದರಿಯಲ್ಲದೆ ರಾಷ್ಟ್ರಕ್ಕೂ ಮಾದರಿ. ಮುಂದೆ ಇಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಸಗುಮವಾಗಿ ಆಗಲಿದೆ ಎಂದು ಹೇಳಿ​ದ​ರು.

ಕನಿಷ್ಠ 115 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ: ಬಿಎಸ್‌ವೈ

ಶಿವಮೊಗ್ಗ: ಸಮೀಕ್ಷೆ ಯಾವ ಪಕ್ಷದ ಪರವಾಗಿಯೇ ಬಂದಿರಲಿ. ಆದರೆ ಈ ಬಾರಿ ರಾಜ್ಯದಲ್ಲಿ 115ಕ್ಕೂ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 115ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಸ್ವಂತ ಶಕ್ತಿ ಮೇಲೆ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ ಎಂದು ಹೇಳಿದರು.

ಸಮೀಕ್ಷೆ ಕುರಿತಾಗಿ ಕಾಂಗ್ರೆಸ್‌ನವರು ಏನು ಹೇಳುತ್ತಾರೋ ಅದನ್ನು ಟೀಕಿಸಲು ಹೋಗಲ್ಲ. ಹಲವು ಸಮೀಕ್ಷೆಗಳು ಕಾಂಗ್ರೆಸ್‌ ಪರ ಬಂದಿರುವುದು ನಿಜ. ಒಂದೆರಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಬಂದಿವೆ. ಮೇ 13ರಂದು ಫಲಿತಾಂಶ ಪ್ರಕಟವಾದಾಗ ಸತ್ಯ ಹೊರಬರುತ್ತದೆ. ನನಗೆ ಸಂಪೂರ್ಣ ವಿಶ್ವಾಸವಿದೆ, ನೂರಕ್ಕೆ ನೂರರಷ್ಟುಬಿಜೆಪಿ ಸರ್ಕಾರ ರಚನೆ ಮಾಡುತ್ತದೆ ಎಂದರು.

ಫಲಿತಾಂಶ ಬಂದ ನಂತರ ಪಕ್ಷದ ಪ್ರಮುಖರು ಒಟ್ಟಿಗೆ ಸೇರಿ ಚರ್ಚಿಸುತ್ತೇವೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಈಗಾಗಲೇ ರಾಜ್ಯದ ಹಲವು ಮುಖಂಡರ ಜೊತೆ ಮಾತನಾಡಿದ್ದೇನೆ. ಮತದಾನದ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದೇನೆ. ನಮಗೆ ಸಿಕ್ಕಂಥ ಜನಬೆಂಬಲ ಹಾಗೂ ಎಸ್ಸಿ-ಎಸ್ಟಿಸಮುದಾಯಕ್ಕೆ ನಾವು ಕೊಟ್ಟಂಥ ಮೀಸಲಾತಿ ಇವೆರಡನ್ನೂ ಗಮನಿಸಿದಾಗ ಈಗ ಬಿತ್ತರಗೊಂಡಿರುವ ಸಮೀಕ್ಷೆಗೆ ಯಾವುದೇ ಆಧಾರ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಹೊರಗಿಟ್ಟು ಸರ್ಕಾರ ರಚನೆ ಸಾಧ್ಯವಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅವರು ಹೇಳಿಕೆ ನೀಡುವುದರಲ್ಲಿ ತಪ್ಪೇನಿಲ್ಲ. ಫಲಿತಾಂಶ ಬರುವವರೆಗೂ ಕಾಯೋಣ. ಮುಂದೆ ಏನಾಗುತ್ತದೆ ನೋಡೋಣ ಎಂದು ಉತ್ತರಿಸಿದರು.

Karnataka Election 2023 : ಫಲಿತಾಂಶಕ್ಕೂ ಮುನ್ನವೇ ಪ್ಲ್ಯಾನ್‌ 'ಬಿ' ರೆಡಿ: ಬಿಜೆಪಿ ನಾಯಕನ ಹೊಸ ಬಾಂಬ್‌

40 ಸಾವಿರ ಅಂತರದ ಗೆಲುವು: ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆಂದು ಈ ಹಿಂದೆಯೇ ಹೇಳಿದ್ದೆ. ಈಗ ಕೂಡ ತಮ್ಮ ಹೇಳಿಕೆಗೆ ಬದ್ಧನಾಗಿದ್ದೇನೆ. ವಿಜಯೇಂದ್ರ ಕನಿಷ್ಠ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios