Asianet Suvarna News Asianet Suvarna News

ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೆ ಬಣ್ಣ ನಿಷೇಧ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ

ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಮಾರಾಟವನ್ನು ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಗೆ ಕೃತಕ ಬಣ್ಣ ಮಿಶ್ರಣ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Karnataka also Cotton Candy banned and prohibited artificial color adding gobi Manchurian sat
Author
First Published Mar 11, 2024, 12:57 PM IST

ಬೆಂಗಳೂರು (ಮಾ.11): ಕರ್ನಾಟಕದಲ್ಲಿಯೂ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಮಾರಾಟವನ್ನು ರಾಜ್ಯ ಸರ್ಕಾರದಿಂದ ಬ್ಯಾನ್ ಮಾಡಲಾಗಿದೆ. ಆದರೆ, ವೈಟ್ ಕ್ಯಾಂಡಿ ಮಾರಾಟಕ್ಕೆ ಅವಕಾಶವಿದೆ. ಇನ್ನು ಗೋಬಿ ಮಂಚೂರಿ ನಿಷೇಧ ಮಾಡದಿದ್ದರೂ, ಕೃತಕ ಬಣ್ಣ ಮಿಶ್ರಣ ನಿಷೇಧಿಸಲಾಗಿದೆ. ಒಂದು ವೇಳೆ ಸರ್ಕಾರದ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಇತ್ತೀಚೆಗೆ ಬೀದಿ ಬದಿಯಲ್ಲಿ ಆಹಾರ ಸೇವನೆ‌ ಮಾಡ್ತಿರೋದು ಜಾಸ್ತಿಯಾಗ್ತಿದೆ. ಈ ಆಹಾರದಿಂದ ದುಷ್ಪರಿಣಾಮ ಇದೆ ಅನ್ನೋದು ಗೊತ್ತಿದೆ. ಹೆಚ್ಚು ಉಪ್ಪಿನಾಂಶ, ಕೊಬ್ಬಿನಾಂಶ ಇರೋದು ತಿಳಿದುಬಂದಿದೆ. ಜೊತೆಗೆ, ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿರುವುದು ಕೂಡ ಪತ್ತೆಯಾಗಿದೆ.ಇದು ಆರೋಗ್ಯಕ್ಕೆ ಹಾನಿಕಾರಕ. ಹಾನಿಕಾರಕ ಆಹಾರದ ಬಗ್ಗೆ ಪುಡ್ ಇಲಾಖೆ ಜೊತೆ ಸರ್ವೆ ಮಾಡಲಾಗಿದೆ. ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಸ್ಯಾಂಪಲ್ ಕಲೆಕ್ಟ್ ಮಾಡಲಾಯ್ತು. ರಾಜ್ಯದ ವಿವಿಧ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ 71 ಕಡೆಗಳಿಂದ ಕಾಟನ್ ಕ್ಯಾಂಡಿ ಹಾಗೂ 25 ಕಡೆಗಳಿಂದ ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹ ಮಾಡಲಾಯಿತು. ಸಂಗ್ರಹಿಸಲಾದ 25 ಮಾದರಿಗಳಲ್ಲಿ ಬರೋಬ್ಬರಿ 15 ಮಾದರಿಗಳಲ್ಲಿ ಕೃತಕ ಹಾಗೂ ಹಾನಿಕಾರಕ ಬಣ್ಣ ಮಿಶ್ರಣ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

ಹಾಹಾಕಾರದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವರದಿ, ಕರ್ನಾಟಕ ಸರ್ಕಾರದ ಸ್ಪಷ್ಟನೆ!

ಕಾಟನ್ ಕ್ಯಾಂಡಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ ಹಾಗೂ ರೋಡಮೈನ್-ಬಿ ಅಂಶ ಪತ್ತೆಯಾಗಿದೆ. ಇದರಲ್ಲಿ ರೋಡಮೈನ್-ಬಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಲಾಗುತ್ತಿದೆ. ಇನ್ನು ಗೋಬಿ ಮಂಚೂರಿಯಲ್ಲಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೊಸಿನ್ ಅಂಶ ಪತ್ತೆಯಾಗಿದೆ. ಆದರೆ, ಗೋಬಿ ಮಂಚೂರಿ ಮಾರಾಟವನ್ನು‌ ಬ್ಯಾನ್ ಮಾಡುವುದಿಲ್ಲ. ಇದಕ್ಕೆ ಕೃತಕ ಬಣ್ಣ ಮಿಶ್ರಣ ಮಾಡುವಂತಿಲ್ಲ. ಒಂದು ವೇಳೆ ಬಣ್ಣ ಬೆರಕೆ ಮಾಡಿದರೆ 10 ಲಕ್ಷ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ನಮಗೇ ನೀರಿಲ್ಲ, ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋಣ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಇನ್ನುಮುಂದೆ ರೊಡೊಮೈನ್ ಬಿ, ಟಾರ್ ಟ್ರಾಸೈನ್ ಅನ್ನು ಯಾವುದೇ ಆಹಾರ ಪದಾರ್ಥಗಳಲ್ಲಿ ಬಳಸುವಂತಿಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಪಿಂಕ್ ಕಲರ್ ಬರಲು ರೋಡಮೈನ್-ಬಿ ಬಳಸುತ್ತಾರೆ. ಒಂದು ವೇಳೆ ತೀರಾ ಅಗತ್ಯವಿದ್ದಲ್ಲಿ ಲೀಗಲ್ ಸ್ಯಾಂಪಲ್ ಪಡೆಯಬೇಕು. ಇನ್ನುಮುಂದೆ ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ಕೃತಕ ಬಣ್ಣ ಬೆರಕೆ ಮಾಡೋದು ಕಾನೂನು ಬಾಹಿರವಾಗಿದೆ. ಈ ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರಡಿ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios