ಲಾಕ್‌ಡೌನ್ ಮಧ್ಯೆ ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್, ಆದ್ರೂ ಮದ್ಯದಂಗಡಿ ಮುಂದೆ ಫುಲ್ ಕ್ಯೂ.!

ಕರ್ನಾಟದಕದಲ್ಲಿ 14ದಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 27 ರಿಂದ 14 ದಿನ ರಾಜ್ಯಕ್ಕೆ ಬೀಗ ಬೀಳಲಿದೆ. ಇದರ ಮಧ್ಯೆ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

Karnataka 14 Days Lockdown Effects Peoples in Que for liquor rbj

ಬೆಂಗಳೂರು, (ಏ.27):ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ 14ದಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
 
ಏಪ್ರಿಲ್ 27 ರಿಂದ 14 ದಿನ ಕರ್ನಾಟಕವನ್ನು ವೀಕೆಂಡ್ ಕರ್ಫ್ಯೂನಂತೆ ಲಾಕ್​ಡೌನ್ ಮಾಡಲು ಇಂದು (ಸೋಮವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ನಾಳೆ (ಮಂಗಳವಾರ) ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಆ ನಂತರ ಕಟ್ಟುನಿಟ್ಟಿನ ಲಾಕ್​ಡೌನ್ ಮಾಡಲು ತೀರ್ಮಾನಿಸಲಾಗಿದೆ. 

ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಮದ್ಯ ಸಿಗುತ್ತೋ ಇಲ್ಲವೋ ಅಂತ ಈಗಲೇ ಎಣ್ಣೆ ಪ್ರಿಯರು ಮದ್ಯದಂಗಡಿ ಮುಂದೆ ಮುಗಿ ಬಿದ್ದಿದ್ದಾರೆ. ಮದ್ಯ ಖರೀದಿಗಾಗಿ ಬಾರ್‌ ಮುಂದೆ ಜನರು ಸಾಲುಗಟ್ಟಿ ನಿಂತಿರೋದು ರಾಜ್ಯಾಧ್ಯಂತ ಕಂಡು ಬರುತ್ತಿದೆ.

ಕಳೆದ ಬಾರಿ ಲಾಕ್‌ಡೌನ್ ವೇಳೆ ಯಾವುದೇ ಮದ್ಯದ ಅಂಗಡಿ ಓಪನ್‌ಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಅದೆಷ್ಟೋ ಕುಡುಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮದ್ಯ ಪಾರ್ಸೆಲ್ ಅವಕಾಶ ನೀಡಲಾಗಿದೆ. ಆದರೂ ಜನ ಲಾಕ್‌ಡೌನ್ ಸುದ್ದಿ ಕೇಳಿದ್ದೇ ತಡ ಎದ್ನೋ ಬಿದ್ನೋ ಅಂತ ಎಣ್ಣೆ ಅಂಗಡಿಗೆ ಮುಗಿಬಿದ್ದಿದ್ದಾರೆ.

ದಿನಸಿ ಖರೀದಿಗೆ ಮುಗಿಬಿದ್ದ ಜನ 
ಬಾರ್ ಕಥೆಯಾಗಿದ್ರೆ ಮತ್ತೊಂದೆಡೆ ಬೆಂಗಳೂರಿನಲ್ಲಿ ದಿನಸಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.  ಮಲ್ಲೇಶ್ವರದ ಬೈ ಅಂಡ್ ಸೇವ್ ಹೋಲ್ ಸೇಲ್ ಅಂಗಡಿ ಮುಂದೆ ಸರತಿ ಸಾಲು  ನಿಂತಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ  ಬೆಳಗ್ಗೆ 6 ರಿಂದ  ಬೆಳಗ್ಗೆ 10 ರ ತನಕ ಅವಕಾಶ ಕಲ್ಪಿಸಿಕೊಡಲಾಗಿದೆ. ಆದ್ರೂ, ಜನ ದಿನಸಿ ಖರೀದಿಗೆ ಮುಗಿಬಿದ್ದಿದ್ದಾರೆ

Latest Videos
Follow Us:
Download App:
  • android
  • ios