ದಾಖಲೆ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಹೆಜ್ಜೆ : ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ

ನೂತನ ತಂತ್ರಜ್ಞಾನದಡಿ ಸಾಗುವಳಿ ಚೀಟಿ, ಪಹಣಿ ಪತ್ರ, ಪೋಡಿ ದಾಖಲೆ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.   

Karnataak Minister Krishna Byre Gowda at gundlupete chamarajanagar district rav

ವರದಿ - ಪುಟ್ಟರಾಜು. ಆರ್. ಸಿ.

ಚಾಮರಾಜನಗರ (ಡಿ.8)- ನೂತನ ತಂತ್ರಜ್ಞಾನದಡಿ ಸಾಗುವಳಿ ಚೀಟಿ, ಪಹಣಿ ಪತ್ರ, ಪೋಡಿ ದಾಖಲೆ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.   

ಗುಂಡ್ಲುಪೇಟೆಯ ಶಿಕ್ಷಕರ ಭವನದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಗರ್ ಹುಕುಂ ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈಗಾಗಲೇ ಡಿಜಿಟಲೀಕರಣಗೊಳಿಸಿರುವ ಸಾಗುವಳಿ ಚೀಟಿ, ಹಾಗೂ ಇತರೆ ದಾಖಲೆಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.

ಉಳುವವನೇ ಭೂಮಿ ಒಡೆಯ, ಭೂ ಸುಧಾರಣೆ ಯೋಜನೆ ಸೇರಿದಂತೆ ಹಲವು ವಿಷಯಗಳಡಿ 30-40 ವರ್ಷಗಳ ಹಿಂದೆ ಹಲವರಿಗೆ ಭೂಮಿ ಮಂಜೂರಾಗಿದೆ. ಇಂತಹ ಜಮೀನುಗಳು ಇದುವರೆಗೂ ದುರಸ್ತಿಯಾಗಿಲ್ಲ. ರೈತರು ಸಾಗುವಳಿ ಮಾಡುತ್ತಿದ್ದರೂ ಜಮೀನು ಸರ್ಕಾರಿ ಹೆಸರಿನಲ್ಲಿರುತ್ತದೆ. ಜಮೀನಿನ ಮೇಲೆ ಸಂಪೂರ್ಣ ಹಕ್ಕು, ಮಾಲೀಕತ್ವ ರೈತರಿಗೆ ಇಲ್ಲವಾಗಿದೆ. ಜಮೀನು ದುರಸ್ತಿಯಾಗದಿದ್ದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.  

ಗಂಡಸರಿಗೂ ಫ್ರೀ ಟಿಕೆಟ್ ಕೊಟ್ರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ

ದುರಸ್ತಿ ಸಂಬಂಧ ರೈತರು ಅವಶ್ಯ ದಾಖಲೆಗಳನ್ನು ಒದಗಿಸುವುದು ಸಾಧ್ಯವಾಗದಿರಬಹುದು. ಇದನ್ನು ಮನಗಂಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳನ್ನು ನೂತನ ತಂತ್ರಜ್ಞಾನದಡಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಮಹತ್ತರ ಕಾರ್ಯವನ್ನು ರಾಜ್ಯಾದ್ಯಂತ ಆರಂಭಿಸಿದೆ. ಎಲ್ಲಾ ಕಾನೂನುಗಳನ್ನು ಸುಲಭೀಕರಣಗೊಳಿಸಿ ಒಂದೇ ಸುತ್ತೋಲೆಯಲ್ಲಿ ಅಳವಡಿಸಲಾಗಿದೆ. ಇಂತಹ ಜನಪರ ಕೆಲಸಗಳಿಂದ ಜನರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ ಎಂದರು.
 
ಹಿಂದೆ ಸಾಗುವಳಿ ಮಾಡದಿರುವವರು, ಇತರರು ಬಗರ್‍ಹುಕುಂ ಅಡಿಯಲ್ಲಿ ಜಮೀನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಇದಕ್ಕಾಗಿ ಸರ್ಕಾರ ನೂತನ ತಂತ್ರಜ್ಞಾನವನ್ನು ಸಿದ್ದಪಡಿಸಿದ್ದು, ಈಗ ಇದಕ್ಕೆಲ್ಲಾ ಅವಕಾಶವಿಲ್ಲದಂತಾಗಿದೆ. ಎಲ್ಲವೂ ಅನ್‍ಲೈನ್‍ನಲ್ಲಿ ನಮೂದಾಗುವುದರಿಂದ ದಾಖಲೆಗಳು ಕಳೆದುಹೋಗುವ ಸಂಭವವಿರದೇ ಶಾಶ್ವತವಾಗಿ ಸಾಕಷ್ಟು ವರ್ಷಗಳವರೆಗೆ ಇರÀಲಿದೆ. ಅಲ್ಲದೆ ಯಾವುದೇ ನಕಲಿ ದಾಖಲೆಗೆ, ಪೋರ್ಜರಿಗೆ, ತಿದ್ದುಪಡಿಗೆ ಅವಕಾಶವಿಲ್ಲದಂತಾಗಿದೆ. ಇದರಿಂದ ರೈತರು ನೆಮ್ಮದಿ ಜೀವನ ನಡೆಸುವಂತಾಗಲಿದೆ ಎಂದು ಸಚಿವರು ಹೇಳಿದರು.

ಪ್ರಸ್ತುತ ಬಗರ್‍ಹುಕುಂ ಅಡಿ ಜಮೀನು ಸಕ್ರಮಗೊಳಿಸಲು ರಾಜ್ಯಾದ್ಯಂತ 1 ಲಕ್ಷದ 58 ಸಾವಿರ ಅರ್ಜಿಗಳು ಬಂದಿವೆ. ಸಕ್ರಮಿಕರಣಗೊಳಿಸಲು ಯಾರು ಅರ್ಜಿ ಹಾಕಿದ್ದಾರೋ ಅವರಿಗೆ ಅವಶ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅರ್ಹರಿಗೆ ನಿಯಾಮಾನುಸಾರ ಮಂಜೂರು ಮಾಡಲಾಗುತ್ತದೆ. ಕೆಲವೆಡೆ ಗ್ರಾಮ, ತಾಂಡಾ, ಕ್ಯಾಂಪ್‍ಗಳಿದ್ದು, 50-100 ವರ್ಷಗಳಿಂದ ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿರುವುದಿಲ್ಲ. ಇದರಿಂದ ಜನವಸತಿ ಸೌಲಭ್ಯಗಳನ್ನು ಒದಗಿಸಲು ತೊಂದರೆಯಾಗುತ್ತಿದೆ. ಇದನ್ನು ಪರಿಹರಿಸಲು ಸರ್ಕಾರ ಮುಂದಾಗಿದ್ದು, ಜಮೀನಿನ ನಕ್ಷೆ, ಆಕಾರ್ ಬಂದ್, ಹೊಸ ಸರ್ವೇ ನಂಬರ್ ಹಾಗೂ ಪ್ರತ್ಯೇಕ ಆರ್.ಟಿ.ಸಿ ಯೊಂದಿಗೆ ಸಾಗುವಳಿ ಚೀಟಿಯನ್ನು ಸರ್ಕಾರದ ವತಿಯಿಂದಲೇ ನೊಂದಣಿ ಮಾಡಿಸಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ 68 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಗುರುತಿಸಲಾಗಿದ್ದು, ಡಿಜಿಟಲೀಕರಣಗೊಂಡಿರುವ ಕಂದಾಯ ಗ್ರಾಮಗಳ 10 ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ಇಂದು ವಿತರಿಸಲಾಗುತ್ತಿದೆ. ಮುಂದಿನ 4 ತಿಂಗಳೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ರೈತರೆಲ್ಲರಿಗೂ ಸಾಗುವಳಿ ಚೀಟಿ ವಿತರಿಸುವ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಡಿಜಿಟಲೀಕರಣ ಪ್ರಕ್ರಿಯೆಯ ಯಶಸ್ವಿಗೆ ಗುಂಡ್ಲುಪೇಟೆ ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ತಹಶೀಲ್ದಾರ್ ರಮೇಶ್ ಬಾಬು ಅವರ ಸತತ ಪರಿಶ್ರಮದಿಂದ ಇಂದು ಸಾಗುವಳಿ, ಪಹಣಿ, ಪೋಡಿ ದಾಖಲೆಗಳ ವಿತರಣೆ ಗುಂಡ್ಲುಪೇಟೆಯಲ್ಲಿ ಸಾಧ್ಯವಾಗಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

 

Chamarajanagar: ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ, ಸಿಎಂ ಶಾಕಿಂಗ್‌ ಹೇಳಿಕೆ!

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ 5 ತಾಲೂಕುಗಳು, 16 ಹೋಬಳಿಗಳಿವೆ. 6,60,696 ಭೂ ಮಾಲೀಕರಿದ್ದಾರೆ. 4,11,580 ಆರ್.ಟಿ.ಸಿ ಗಳಿವೆ. 5,75,745 ಆರ್.ಟಿ.ಸಿ ಗಳು ಆಶಧಾರ್ ಸೀಡಿಂಗ್ ಆಗಿದ್ದು, ಶೇ. 82.81ರಷ್ಟು ಪ್ರಗತಿ ಸಾಧಿಸಲಾಗಿದೆ. 4 ಬಗರ್‍ಹುಕುಂ ಸಮಿತಿ ರಚನೆಯಾಗಿವೆ. 3239 ದರಖಾಸ್ತು ಭೂಮಿ ಪೋಡಿಯಾಗಿದ್ದು, ಮೂರು ತಿಂಗಳೊಳಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಭೂ ಸುರಕ್ಷಾ ಯೋಜನೆಯಡಿ ಎಲ್ಲಾ ದಾಖಲಾತಿಗಳು ಡಿಜಿಟಲೀಕರಣಗೊಂಡಿದ್ದು, ಯಳಂದೂರು ತಾಲೂಕನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಂಡಿದ್ದು 18,71,799 ಪುಟಗಳನ್ನು ಡಿಜಿಟಲೀಕರಣ ಆಗಿದೆ. ಎ.ಸಿ. ಹಾಗೂ ಡಿಸಿ ಕೋರ್ಟ್‍ನಲ್ಲಿ 90 ದಿನದೊಳಗೆ ಇತ್ಯರ್ಥಪಡಿಸುವ ಬಾಕಿ ಪ್ರಕರಣಗಳು ಕಡಿಮೆ ಇವೆ. ಕಂದಾಯ ಇಲಾಖೆಯ ಎಲ್ಲಾ ಅಧೀನ ಕಚೇರಿಗಳು ಇ-ಆಫೀಸ್ ಆಗಿದ್ದು, ಇ-ಆಫೀಸ್ ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios