ರಸ್ತೆಯಲ್ಲಿ ಆದ ಗಲಾಟೆಯೊಂದನ್ನು ಭಾಷಾ ಗಲಾಟೆಯೆಂದು ಬಿಂಬಿಸಿದ ವಿಂಗ್ ಕಮಾಂಡರ್ ಸುಳ್ಳಿನ ಕಂತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ರಾಷ್ಟ್ರೀಯ ಮಾಧ್ಯಮಗಳು ಬೆಂಬಲಿಸಿ ಕನ್ನಡಿಗರನ್ನು, ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಅವಮಾನಿಸಿರುವುದನ್ನು ಕನ್ನಡಪರ ಸಂಘಟನೆಗಳು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಬೆಂಗಳೂರು (ಏ.23): ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿದಲ್ಲದೆ ಭಾಷಾ ವಿಚಾರ ಎಳೆದು ತಂದು ಕನ್ನಡಿಗರ ಮೇಲೆಯೇ ಗೂಬೆ ಕೂರಿಸಲು ಯತ್ನಿಸಿದ ಘಟನೆಯಿಂದಕೆರಳಿರುವ ಕನ್ನಡ ಪರ ಸಂಘಟನೆಗಳು ಹಿಂದಿ ಭಾಷಿಕರು ತಮ್ಮ ಪುಂಡಾಟ ನಿಲ್ಲಿಸದಿದ್ದರೆ ಉತ್ತರ ಭಾರತೀಯರೇ ಬೆಂಗಳೂರು ಬಿಟ್ಟು ತೊಲಗಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ. ಇತ್ತೀಚೆಗಷ್ಟೇ ಕನ್ನಡಿಗನಿಗೆ ಹಿಂದಿಯಲ್ಲೇ ಮಾತನಾಡುವಂತೆ ಹಿಂದಿವಾಲಾ ಧಮಕಿ ಹಾಕಿದ್ದ ಘಟ ನೆಯ ಬೆನ್ನಲ್ಲೇ ವಿಂಗ್ ಕಮಾಂಡರ್ ಪ್ರಕರಣ ನಡೆದಿ ರುವುದು ಕನ್ನಡಿಗರ ಆಕ್ರೋಶ ಹೆಚ್ಚಲು ಕಾರಣವಾಗಿದೆ.
ರಸ್ತೆಯಲ್ಲಿ ಆದ ಗಲಾಟೆಯೊಂದನ್ನು ಭಾಷಾ ಗಲಾಟೆಯೆಂದು ಬಿಂಬಿಸಿದ ವಿಂಗ್ ಕಮಾಂಡರ್ ಸುಳ್ಳಿನ ಕಂತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ರಾಷ್ಟ್ರೀಯ ಮಾಧ್ಯಮಗಳು ಬೆಂಬಲಿಸಿ ಕನ್ನಡಿಗರನ್ನು, ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಅವಮಾನಿಸಿರುವುದನ್ನು ಕನ್ನಡಪರ ಸಂಘಟನೆಗಳು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿಂಗ್ ಕಮಾಂಡರ್ ಶಿಲಾದಿತ್ಯ ನಮಗೆ ಸಹಾಯ ಮಾಡಿ ಎಂದು ವಿಡಿಯೋ ಚಿತ್ರೀಕರಣ ಮಾಡಿ ಸಂಪೂರ್ಣ ಘಟನೆಯನ್ನು ಹಿಂದಿ ವರ್ಸಸ್ ಕನ್ನಡಿಗ ಎಂದು ಪರಿವರ್ತಿಸಲು ಯತ್ನಿಸಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಿದ್ದಾನೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.
ಬೆಂಗಳೂರು ಬಿಟ್ಟು ತೊಲಗಿ ಚಳವಳಿ!: ಉತ್ತರ ಭಾರತೀಯರು ಕನ್ನಡಿಗರು, ಕನ್ನಡ ಭಾಷೆ ಮೇಲೆ ದಾಳಿ ನಡೆಸಿ ಅವಮಾನಿಸುವ, ರಾಷ್ಟ್ರಮಟ್ಟದಲ್ಲಿ ಕನ್ನಡಿಗರು ಗೂಂಡಾಗಳು ಎಂದು ಬಿಂಬಿಸಲು ಹೊರಟರೆ ನೋಡಿಕೊಂಡು ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ದಬ್ಬಾಳಿಕೆ ಮಾಡುವ ಯಾವೊಬ್ಬ ಉತ್ತರ ಭಾರತೀಯನೂ ಇಲ್ಲಿ ಉಳಿಯಲು ಬಿಡುವುದಿಲ್ಲ. ಬೆಂಗಳೂರು ಬಿಟ್ಟು ತೊಲಗಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಬಿಗಿಪಟ್ಟು: ವಿಂಗ್ ಕಮಾಂಡರ್ ಮತ್ತು ಬೈಕರ್ ನಡುವೆ ಗಲಾಟೆಯಾಗಿ 15 ನಿಮಿಷದಲ್ಲಿ ಬೈಕರ್‌ನ್ನು ವಶಪಡಿಸಿಕೊಂಡ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು. ಆದರೆ, ವಿಂಗ್ ಕಮಾಂಡರ್‌ವಿರುದ್ಧ ದೂರನ್ನು ಕೂಡ ಪಡೆದಿರಲಿಲ್ಲ. ಇಂತಹ ಪ್ರಕರಣ ಗಳಲ್ಲಿ ಸಂತ್ರಸ್ತರಾದ ಕನ್ನಡಿಗರನ್ನೇ ಪೊಲೀಸರು ಆರೋಪಿಗಳನ್ನಾಗಿ ನೋಡುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
Bengaluru Road Rage Case: ಹಾರಾಡಿದ ವಿಂಗ್ ಕಮಾಂಡರ್ ವಿರುದ್ಧ ಕನ್ನಡಿಗರು ಕೆಂಡ
ಕೆಲಸ ಹೋಗುವ ಭೀತಿ ಇದೆ: ನನ್ನ ಮೇಲೆ ವಿಂಗ್ ಕಮಾಂಡರ್ ಸುಳ್ಳು ಆರೋಪ ಹೊರಿಸಿದ್ದಾರೆ. ಇದರಿಂದ ನಾನು ಕೆಲಸ ಕಳೆದುಕೊಳ್ಳುವ ಸಂಕಷ್ಟ ಎದುರಾಗಿದೆ ಎಂದು ಸಂತ್ರಸ್ತ ವಿಕಾಸ್ ಕುಮಾರ್‌ನೊಂದು ನುಡಿದ್ದಾರೆ. ಪ್ರಕರಣದಲ್ಲಿ ಠಾಣಾ ಜಾಮೀನು ಪಡೆದು ಬಿಡುಗಡೆಗೊಂಡ ನಂತರ 3 ನಿಮಿಷಗಳ ವಿಡಿಯೋ ಕನ್ನಡಿಗ ವಿಕಾಸ್ ಹೇಳಿಕೆಯನ್ನು ವಿಕಾಸ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಈ ಘಟನೆ ಸಂಬಂಧ ನನ್ನ ದೂರನ್ನು ಸಹ ಪೊಲೀಸರು ಸ್ವೀಕರಿಸಿದ್ದಾರೆ. ನನ್ನ ನೋವಿಗೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸ್ಪಂದಿಸಿ ದ್ದಾರೆ. ಈ ಘಟನೆ ಕೆಲ ಸದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಘಟನೆಯಿಂದ ಮಾನಸಿಕ ಹಿಂಸೆಯಾಗಿದೆ. ನನ್ನ ಕೆಲಸಕ್ಕೆ ತೊಂದರೆಯಾಗದಂತೆ ನೋಡಿ ಕೊಳ್ಳುವುದಾಗಿ ಪೊಲೀಸ್ ಆಯುಕ್ತರು ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ.
