ಇಸ್ರೇಲ್‌ನಲ್ಲಿ ಯುದ್ಧದ ಭೀಕರ ಪರಿಸ್ಥಿತಿಯ ನಡುವೆ, ಬಾಂಬ್ ಶೆಲ್ಟರ್‌ನಲ್ಲಿ ಸಿಲುಕಿರುವ ಬೆಂಗಳೂರಿನ ಬಿ. ಪ್ಯಾಕ್ ತಂಡದ ಸದಸ್ಯರು ಕನ್ನಡ
ಕಳೆದ ನಾಲ್ಕು ದಿನಗಳಿಂದ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇರಾನ್‌ನ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್‌ನ ಟೆಲ್ ಅವಿವ್‌ನನ್ನು ಗುರಿಯಾಗಿಸಿವೆ. ಈ ದಾಳಿಯಿಂದಾಗಿ ಹಲವು ನಾಗರಿಕರು ಗಾಯಗೊಂಡಿದ್ದು, ಆಸ್ತಿಪಾಸ್ತಿಗಳು ಧ್ವಂಸವಾಗಿವೆ. ಇಸ್ರೇಲಿಗರು ಕ್ಷಿಪಣಿ ದಾಳಿಯ ಭೀತಿಂದ ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಮಧ್ಯೆ, ವಿಮಾನಯಾನ ಸಂಪರ್ಕ ಕಡಿತಗೊಂಡಿರುವ ಕಾರಣ ಭಾರತೀಯರು ಇಸ್ರೇಲ್‌ನಲ್ಲಿ ಸಿಲುಕಿಕೊಂಗಿದ್ದಾರೆ.
ಆದರೆ, ಈ ಯುದ್ಧದ ಭೀಕರ ವಾತಾವರಣದ ನಡುವೆಯೂ ಕನ್ನಡದ ಕಂಪು ಪಸರಿಸಿದೆ!
ಬೆಂಗಳೂರಿನ ಬಿ. ಪ್ಯಾಕ್ ತಂಡದ ಸದಸ್ಯರು, ಬಾಂಬ್ ಶೆಲ್ಟರ್‌ನಲ್ಲಿ ಸಿಲುಕಿರುವಾಗ ಕನ್ನಡ ಹಾಡುಗಳನ್ನು ಹಾಡಿ, ಒಗ್ಗಟ್ಟಿನಿಂದ ಸಂಕಷ್ಟದ ಸಮಯದಲ್ಲೂ ಸಂಭ್ರಮಿಸುತ್ತಿದ್ದಾರೆ. 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ದಂತಹ ಕನ್ನಡ ಗೀತೆಗಳು ಶೆಲ್ಟರ್‌ನಲ್ಲಿ ಮೊಳಗಿದ್ದು, ಇತರರಿಗೂ ಧೈರ್ಯ ಮತ್ತು ಮನರಂಜನೆಯನ್ನು ತಂದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಯುದ್ಧದ ಭಯದ ನಡುವೆಯೂ ಕನ್ನಡಿಗರ ಸ್ಫೂರ್ತಿ ಮತ್ತು ಸಂತೋಷದ ಕಂಪು ಅದ್ಭುತ! ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಬಿ. ಪ್ಯಾಕ್ ತಂಡದ ಈ ಕನ್ನಡ ಪ್ರೀತಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
