Asianet Suvarna News Asianet Suvarna News

ಶೈಲಜಾ, ಸತ್ಯನಾರಾಯಣಗೆ ಕಸಾಪ ದತ್ತಿ ಪ್ರಶಸ್ತಿ

20ಕ್ಕೂ ಹೆಚ್ಚು ಲೇಖಕರಿಗೆ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ| 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತು| 

Kannada Sahitya Parishat Datti Award to Shailaja Sathyanarayana
Author
Bengaluru, First Published Sep 12, 2020, 9:45 AM IST

ಬೆಂಗಳೂರು(ಸೆ.12): ಲೇಖಕಿ ಡಾ.ಬಿ.ಎಸ್‌.ಶೈಲಜಾ ಅವರ ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದ​ರ್ಸ್‌ ದತ್ತಿ ಪ್ರಶಸ್ತಿ, ಸಾಹಿತಿ ಕೆ. ಸತ್ಯನಾರಾಯಣ ಅವರ ‘ಲೈಂಗಿಕ ಜಾತಕ’ ಕೃತಿಗೆ ಭಾರತೀಸುತ ಸ್ಮಾರಕ ಪ್ರಶಸ್ತಿ ಸೇರಿದಂತೆ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಪ್ರಶಸ್ತಿಯ ಹೆಸರು, ಲೇಖಕ ಹಾಗೂ ಕೃತಿಯ ಹೆಸರು ಕ್ರಮವಾಗಿ ಈ ರೀತಿ ಇದೆ.

ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ- ಬಿ.ಪಿ.ನ್ಯಾಮಗೌಡರ- ‘ವೀರಾನ್ವಯ’, ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನಲ್ಲಿ ನೀಡುವ ಎಲ್‌.ಬಸವರಾಜು ದತ್ತಿ ಪ್ರಶಸ್ತಿ-ಪೊ›. ಎಚ್‌.ಟಿ.ಪೋತೆ- ‘ಡಾ.ಬಿ.ಆರ್‌.ಅಂಬೇಡ್ಕರ್‌ ಪುಸ್ತಕ ಪ್ರೀತಿ’, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ- ಡಾ.ಬಸು ಬೇವಿನಗಿಡದ- ‘ನೆರಳಿಲ್ಲದ ಮರ’,

ವಿ.ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ- ಪ್ರೊ.ವಸಂತ ಕುಷ್ಠಗಿ- ‘ಕಾಯಕ ಧರ್ಮ’, ಭಾರತಿ ಮೋಹನ ಕೋಟಿ ದತ್ತಿ ಪ್ರಶಸ್ತಿ- ಪೊ›.ಕೆ.ಎಂ. ಸೀತಾರಾಮಯ್ಯ - ‘ಪ್ಯಾರಡೈಸ್‌ ಲಾಸ್ಟ್‌ ಮತ್ತು ಪ್ಯಾರಡೈಸ್‌ ರೀಗೇಯ್‌್ನಡ್‌’, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ, ಡಾ.ಮದನಕೇಸರಿ ಜೈನ ಪ್ರಶಸ್ತಿ- ಡಾ.ನೀರಜಾ ನಾಗೇಂದ್ರಕುಮಾರ್‌- ‘ಝಾಣಜ್ಝಯಣ-ಪಾಹುಡ.’

ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ

ಕಾದಂಬರಿ ಪ್ರಕಾರದಲ್ಲಿ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ-ಬಿ.ಆರ್‌. ಪೋಲೀಸ್‌ ಪಾಟೀಲ್‌- ‘ಮಹಾವೃಕ್ಷ’, ಸಣ್ಣಕತೆ ವಿಭಾಗದಲ್ಲಿ ಕೃಷ್ಣಮೂರ್ತಿ ಚಂದರ್‌- ‘ಅಸ್ಮಿತೆ’, ಮಕ್ಕಳ ಸಾಹಿತ್ಯ ಕೃತಿ ಪ್ರಕಾರದಲ್ಲಿ ವಿಶಾಲಾ ಆರಾಧ್ಯ ಅವರ ‘ಬೊಂಬಾಯಿ ಮಿಠಾಯಿ’, ಅನುವಾದಿತ ಕೃತಿ ಪ್ರಕಾರದಲ್ಲಿ ಕೆ.ಶಾರದಾ ಅವರ ‘ದ್ರೌಪದಿ’ ಕೃತಿಗಳು ಆಯ್ಕೆಯಾಗಿದೆ.

ಡಿ. ಮಾಣಿಕರಾವ್‌ ಸ್ಮರಣಾರ್ಥ ನೀಡುವ ಹಾಸ್ಯ ಸಾಹಿತ್ಯ ದತ್ತಿಗೆ ವಿ.ವಿ. ಗೋಪಾಲ್‌- ‘ಗುಂಡನ ಅವಾಂತರ’, ಡಾ.ಎ.ಎಸ್‌. ಧರಣೇಂದ್ರಯ್ಯ- ಮನೋಜ್ಞಾನ ದತ್ತಿ ಪ್ರಶಸ್ತಿ- ಗಣೇಶ್‌ರಾವ್‌ ನಾಡಿಗೇರ್‌- ‘ಮನದೊಳಗಿನ ಮಾತು’, ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ಪ್ರಶಸ್ತಿ-ದೀಪ್ತಿ ಭದ್ರಾವತಿ- ‘ಗೀರು’ ಕೃತಿ, ಪ್ರಕಾಶಕ ಆರ್‌.ಎನ್‌. ಹಬ್ಬು ದತ್ತಿ ಪ್ರಶಸ್ತಿ- ಸಮನ್ವಿತ ಪ್ರಕಾಶನದ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕೃತಿಗೆ ನೀಡಲಾಗಿದೆ.

ಗುಬ್ಬಿ ಸೋಲೂರು ಮುರುಘಾರಾಧ್ಯ ದತ್ತಿ ಪ್ರಶಸ್ತಿ- ಸಂತೋಷಕುಮಾರ ಮೆಹೆಂದಳೆ ಅವರ ‘ಎಂಟೆಬೆ..!’, ಶ್ರೀಮತಿ ಗೌರುಭಟ್‌ ದತ್ತಿ ಪ್ರಶಸ್ತಿ- ಸುಧಾ ಆಡುಕಳ- ‘ಬಕುಲದ ಬಾಗಿಲಿನಿಂದ’, ಶ್ರೀಮತಿ ಗಂಗಮ್ಮ ಶ್ರೀ ಬಿ.ಶಿವಣ್ಣ ದತ್ತಿ ಪ್ರಶಸ್ತಿ- ಡಾ.ಜಿ.ರಾಮಕೃಷ್ಣ- ‘ವರ್ತಮಾನ’, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್‌ ಪ್ರಶಸ್ತಿ- ಲಕ್ಷ್ಮೀದೇವಿ ಕಮ್ಮಾರರ ‘ಯಶಸ್ಸಿನ ದಾರಿ ದೀಪಗಳು’, ಪಳಕಳ ಸೀತಾರಾಮಭಟ್ಟದತ್ತಿ ಪ್ರಶಸ್ತಿ- ಆಶಾ ರಘು- ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ಕೃತಿ, ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ ಪ್ರಶಸ್ತಿ- ವಿದ್ಯಾಧರ ಮುತಾಲಿಕ ದೇಸಾಯಿ ಅವರ ‘ಹಿಮ್ಮುಖ ಹರಿದ ನದಿ’ ಕೃತಿಗೆ ನೀಡಲಾಗಿದೆ.
 

Follow Us:
Download App:
  • android
  • ios