Asianet Suvarna News Asianet Suvarna News

BMRCL 68ನೇ ಕನ್ನಡ ರಾಜ್ಯೋತ್ಸವ; ಕಾರ್ಯಕ್ರಮಕ್ಕೆ ಮೆಟ್ರೋ ರೈಲಿನಲ್ಲಿ ಬಂದ ಉಪೇಂದ್ರ!

ನಮ್ಮ ಮೆಟ್ರೋ ನಿಗಮದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.  ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಾಗೂ ಬಿಎಂಆರ್ಸಿಎಲ್ ಕನ್ನಡ ಸಂಘದ ಸಹಯೋಗದಲ್ಲಿ ಬೈಯಪ್ಪನಹಳ್ಳಿ ಡಿಪೋದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಬಿಎಂಆರ್‌ಸಿಎಲ್ ಎಂಡಿ ಅಂಜುಂ ಪರ್ವೇಜ್, ನಟ ಉಪೇಂದ್ರ, ನಟ ಧ್ರುವ ಸರ್ಜಾ,ಜಯದೇವ ಹೃದ್ರೋಗ  ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ ಭಾಗಿಯಾದದರು.

Kannada Rajyotsava in Namma metro; Upendra came to the program by metro  at bengaluru rav
Author
First Published Nov 18, 2023, 5:11 PM IST

ಬೆಂಗಳೂರು (ನ.18): ನಮ್ಮ ಮೆಟ್ರೋ ನಿಗಮದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.  ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಾಗೂ ಬಿಎಂಆರ್ಸಿಎಲ್ ಕನ್ನಡ ಸಂಘದ ಸಹಯೋಗದಲ್ಲಿ ಬೈಯಪ್ಪನಹಳ್ಳಿ ಡಿಪೋದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಬಿಎಂಆರ್‌ಸಿಎಲ್ ಎಂಡಿ ಅಂಜುಂ ಪರ್ವೇಜ್, ನಟ ಉಪೇಂದ್ರ, ನಟ ಧ್ರುವ ಸರ್ಜಾ,ಜಯದೇವ ಹೃದ್ರೋಗ  ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ ಭಾಗಿಯಾದದರು.

ಕನ್ನಡ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬಂದ ಉಪೇಂದ್ರ:

ಬಿಎಂಆರ್‌ಸಿಎಲ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೆಟ್ರೋ ರೈಲಿನ ಮೂಲಕವೇ ಬಂದ ನಟ ಉಪೇಂದ್ರ ಎಲ್ಲರ ಗಮನ ಸೆಳೆದರು. ಮೈಸೂರು ರೋಡ್‌ನಿಂದ ಬೈಯಪ್ಪನಹಳ್ಳಿ ಡಿಪೋವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರತಿಷ್ಠಿತ ಮಂತ್ರಿಯೊಬ್ಬರು ಮೆಟ್ರೋದಲ್ಲಿ ಸಂಚರಿಸಿದರೂ ಗುರುತೇ ಹಿಡಿಯದ ಪ್ರಯಾಣಿಕರು!

 ನಾವು ಕನ್ನಡಿಗರೋ ವಿಶಾಲ ಹೃದಯದವರು:

ಕಾರ್ಯಕ್ರಮದ ವೇದಿಕೆ ಮೇಲೆ ನಿಂತು ಮಾತನಾಡಿದ ನಟ ಉಪೇಂದ್ರ, ಕನ್ನಡ ಭಾಷೆ ಬೆಳೆಸುವಲ್ಲಿ ಕನ್ನಡ ಬಳಕೆ, ಭಾಷಾಭಿಮಾನ ಮುಖ್ಯ. ದುರಾದೃಷ್ಟವೆಂದರೆ ನಾವು ಬೇರೆ ಭಾಷೆಗಳ ಸಿನಿಮಾಗಳನ್ನು ನೋಡಿದಷ್ಟು ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ. ನಾವು ಕನ್ನಡಿಗರೋ ವಿಶಾಲ ಹೃದಯದವರು ಎಂದು ನಟ ಡೈಲಾಗ್ ಹೊಡೆದರು. ಕನ್ನಡ ಉಳಿಸಿ ಬೆಳಸಿ, ಕನ್ನಡ ಚಿತ್ರಗಳನ್ನ ಹೆಚ್ಚು ನೋಡುವಂತೆ ಮನವಿ ಮಾಡಿದರು.

ನೇರಳೆ ಮಾರ್ಗ ಮೆಟ್ರೋ ರೈಲು ಬಿಡದಿವರೆಗೂ ವಿಸ್ತರಣೆ, ಡಿಕೆಶಿ ಮಹತ್ವದ ಘೋಷಣೆ

 ಶಂಕರ್‌ನಾಗರನ್ನ ಸ್ಮರಿಸಿದ ಆಕ್ಷನ್ ಪ್ರಿನ್ಸ್ ಧ್ರುವ:

ಬೆಂಗಳೂರು ಮೆಟ್ರೋ ಶಂಕರ್‌ನಾಗ್ ಅವರ ಕನಸಾಗಿತ್ತು. ಅವರ ಕನಸು ನನಸಾಗಿದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿ ಖರೀದಿಗೆ ಹೋದಾಗ ಅಕ್ಕ ಪಕ್ಕದಲ್ಲಿ ಮೆಟ್ರೋ ಇದ್ರೆ ಆ ಸೈಟ್ ಗೆ ರೇಟ್ ಜಾಸ್ತಿ. ಅಷ್ಟು ಡಿಮ್ಯಾಂಡ್ ಆಗಿದೆ ನಮ್ಮ ಮೆಟ್ರೋದಿಂದ. ಪ್ರತಿಯೊಬ್ಬರು ಕನ್ನಡ ಭಾಷೆ ಬಳಸಿ ಉಳಿಸಬೇಕು, ಕನ್ನಡ ಸಿನಿಮಾಗಳನ್ನು ನೋಡಿ ಕಲಾವಿದರನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.

Follow Us:
Download App:
  • android
  • ios