ನೇರಳೆ ಮಾರ್ಗ ಮೆಟ್ರೋ ರೈಲು ಬಿಡದಿವರೆಗೂ ವಿಸ್ತರಣೆ, ಡಿಕೆಶಿ ಮಹತ್ವದ ಘೋಷಣೆ
ಬಿಡದಿ ಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ಮೆಟ್ರೋ ಘೋಷಣೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಬೆಂಗಳೂರು (ನ.10): ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಸಂತಸದ ಸುದ್ದಿ, ನೇರಳೆ ಮಾರ್ಗ ಮೆಟ್ರೋ ರೈಲು ಬಿಡದಿವರೆಗೆ ವಿಸ್ತರಣೆಯಾಗುತ್ತಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿ, ಬಿಡದಿ ಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ಮೆಟ್ರೋ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಎಂಎಲ್ಎ, ಎಂಪಿ ಮನವಿ ಮಾಡಿದ್ರು. ಹೀಗಾಗಿ ಡಿಪಿಆರ್ ಮಾಡೋದಕ್ಕೆ ಸೂಚಿಸಿದ್ದೇನೆ. ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ ಹತ್ತು ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಅದು ಹಾಗೇಯೆ ಉಳಿದುಕೊಂಡಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ ಗೆ ಬಿಡದಿಯನ್ನು ಘೋಷಿಸಲಾಗಿದೆ. ಮುಂದೆ ಲೀಗಲ್ ಪ್ರೊಸಿಜರ್ ಆಗಲಿದೆ. ಎಲ್ಲರಿಗೂ ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಸಭೆ ನಡೆಸಿ, ಎಲ್ಲ ಕಾರ್ಖಾನೆಗಳ ಬಳಿ ಮನವಿ ಮಾಡಲಾಗುವುದು ಎಂದು ಬಿಡದಿಯಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಬೆಂಗಳೂರು ಸುರಂಗ ರಸ್ತೆ ನಿರ್ಮಿಸದಂತೆ ಸಂಸದ ತೇಜಸ್ವಿ ಸೂರ್ಯ ಮನವಿ: ಡಿಕೆಶಿ ಕನಸಿನ ಯೋಜನೆಗೆ ಕೊಳ್ಳಿ!
ರಾಮನಗರಕ್ಕೆ ಮರುನಾಮಕರಣ ವಿಚಾರವಾಗಿ ಮಾತನಾಡಿದ ಅವರು ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕೆಳದುಕೊಳ್ಳುವುದಿಲ್ಲ. ಹೀಗಾಗಿ ಬೆಂಗಳೂರು ದಕ್ಷಿಣವನ್ನಾಗಿ ಜಿಲ್ಲೆಯ ಹೆಸರು ಬದಲಿಸಲು ಜನರಿಂದ ಅಭಿಪ್ರಾಯ ಕೇಳಲಾಗುತ್ತಿದೆ. ಬಳಿಕ ಸರಕಾರದ ಮುಂದಿಟ್ಟು ಬದಲಾವಣೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಸಿಬಿಐ ಅರ್ಜಿ ವಜಾ ವಿಚಾರವಾಗಿ ಮಾತನಾಡಿ, ವಜಾ ಆಗಿದ್ಯಾ? ನನಗೆ ಗೊತ್ತಿಲ್ಲ. ವಜಾ ಏಕಾಯ್ತು.? ಈಗ ಕಾರ್ಯಕ್ರಮದಲ್ಲಿದ್ದೇನೆ. ವಿಚಾರಿಸಿ ಮಾತನಾಡುತ್ತೆನೆ ಎಂದು ಹೇಳಿದರು.
ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಆರಂಭ, ಚೀನಾದಿಂದ ಬೋಗಿ ಬರುವುದನ್ನೇ ಕಾಯುತ್ತಿದೆ ಬಿಎಂಆರ್‌ಸಿಎಲ್
ಮುಖ ಕಾಮಗಾರಿಗಳಿಗೆ ಅನುಕೂಲ ಮಾಡಿಕೊಡುವಂತೆ ಡಿಸಿಎಂಗೆ ತೇಜಸ್ವಿ ಸೂರ್ಯ ಮನವಿ
ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಬನಶಂಕರಿ ಬಿಎಂಟಿಸಿ ಟರ್ಮಿನಲ್ ನಡುವೆ ಸ್ಕೈವಾಕ್ ನಿರ್ಮಾಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿ ಚರ್ಚೆ ನಡೆಸಿದರು.
ಜೆ.ಪಿ.ನಗರದಿಂದ ನಾಯಂಡಹಳ್ಳಿವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಬಿಎಂಆರ್‌ಸಿಎಲ್ ಮತ್ತು ಕೆ-ರೈಡ್‌ಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕ ನೇಮಕ, ಹೊಸಕೆರೆಹಳ್ಳಿಯ 66 ಕೆವಿ ಇಎಚ್‌ಟಿ ಲೈನ್ ಕೇಬಲ್ ಅಳವಡಿಕೆ ಮುಂತಾದ ಪ್ರಮುಖ ಕಾಮಗಾರಿಗಳಿಗೆ ಅನುಕೂಲ ಮಾಡಿಕೊಡುವಂತೆ ಉಪಮುಖ್ಯಮಂತ್ರಿಗೆ ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಬೆಂಗಳೂರು ನಗರದ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಕೆ-ರೈಡ್ ಮತ್ತು ಬಿಎಂಆರ್‌ಸಿಎಲ್ ಎರಡರ ವ್ಯವಸ್ಥಾಪಕ ನಿರ್ದೇಶಕರ ಪ್ರಮುಖ ಹುದ್ದೆಗಳು ಕಳೆದ 5-6 ತಿಂಗಳುಗಳಿಂದ ಖಾಲಿ ಉಳಿದಿವೆ. ಇದರಿಂದ ಬೆಂಗಳೂರು ದಕ್ಷಿಣದ ಪ್ರಯಾಣಿಕರು ಮತ್ತು ನಾಗರಿಕರಿಗೆ ಅನುಕೂಲವಾಗಿದೆ. ಇದನ್ನು ತಕ್ಷಣವೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.
2019 ರಲ್ಲಿ, ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಬನಶಂಕರಿ ಬಿಎಂಟಿಸಿ ಬಸ್ ಟರ್ಮಿನಲ್ ನಡುವೆ ಮಾದರಿ ಸಾರಿಗೆ ಕೇಂದ್ರವನ್ನು ಸಕ್ರಿಯಗೊಳಿಸಲು ಸ್ಕೈವಾಕ್ ಅನ್ನು ಪ್ರಸ್ತಾಪಿಸಲಾಗಿತ್ತು. ಸ್ಕೈವಾಕ್ ವಿನ್ಯಾಸವನ್ನು ಸಹ 2019 ರಲ್ಲಿ ನಿರ್ಧರಿಸಲಾಯಿತು. ಈ ಯೋಜನೆಯನ್ನು ತ್ವರಿತಗೊಳಿಸಬೇಕು ಮತ್ತು ನಿರ್ಮಾಣವನ್ನು ಪ್ರಾರಂಭಿಸಲು ತಕ್ಷಣವೇ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸುವ ರಾಜ್ಯ ಸರ್ಕಾರದ ಚಿಂತನೆ ಕುರಿತು ಚರ್ಚಿಸಲಾಯಿತು. ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋದಂತಹ ಸಾರಿಗೆ ವ್ಯವಸ್ಥೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯ. ಮನವಿಯನ್ನು ಉಪಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.