Asianet Suvarna News Asianet Suvarna News

ನಿಧನ: ನೇರ, ಸರಳ, ನಿಷ್ಠುರವಾದಿ ‘ಕನ್ನಡಪ್ರಭ ಸತ್ಯ’

ನೋಡಲು ಚಿಕ್ಕ ಕಾಯ, ಆದರೆ ಹತ್ತಾರು ಯುವಕರನ್ನು ಬೆಳೆಸಿದ ತ್ರಿವಿಕ್ರಮ. ಕಂಚಿನ ಕಂಠ, ನೇರ ನುಡಿ, ಅನಿಸಿದ್ದನ್ನು ಹೇಳುವ ಹಾಗೂ ಬರೆಯುವುದರಲ್ಲಿ ಯಾವುದೇ ಮುಲಾಜು ಇಲ್ಲ. ಜೀವನದುದ್ದಕ್ಕೂ ಸರಳತೆ, ವೃತ್ತಿಯಲ್ಲಿ ಶುದ್ಧತೆ. ಹೆಸರು ಕೆ. ಸತ್ಯನಾರಾಯಣ ಎಂದಾಗಿದ್ದರೂ ‘ಕನ್ನಡಪ್ರಭ ಸತ್ಯ’ ಎಂದೇ ಪರಿಚಿತರು.

kannada prabha former editor k satyanarayana dies bengaluru jayanagara rav
Author
First Published Jan 9, 2023, 9:30 AM IST

ಬೆಂಗಳೂರು (ಜ.9) : ನೋಡಲು ಚಿಕ್ಕ ಕಾಯ, ಆದರೆ ಹತ್ತಾರು ಯುವಕರನ್ನು ಬೆಳೆಸಿದ ತ್ರಿವಿಕ್ರಮ. ಕಂಚಿನ ಕಂಠ, ನೇರ ನುಡಿ, ಅನಿಸಿದ್ದನ್ನು ಹೇಳುವ ಹಾಗೂ ಬರೆಯುವುದರಲ್ಲಿ ಯಾವುದೇ ಮುಲಾಜು ಇಲ್ಲ. ಜೀವನದುದ್ದಕ್ಕೂ ಸರಳತೆ, ವೃತ್ತಿಯಲ್ಲಿ ಶುದ್ಧತೆ. ಹೆಸರು ಕೆ. ಸತ್ಯನಾರಾಯಣ ಎಂದಾಗಿದ್ದರೂ ‘ಕನ್ನಡಪ್ರಭ ಸತ್ಯ’ ಎಂದೇ ಪರಿಚಿತರು.

ನಾಡಿನ ಹಿರಿಯ ಪರ್ತಕರ್ತ(senior reformer)ರಲ್ಲಿ ಒಬ್ಬರಾಗಿರುವ ಕೆ. ಸತ್ಯನಾರಾಯಣ(K Satyanarayan) ಅವರು ‘ತಾಯ್ನಾಡು(Taynadu)’ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದರು. ಕೆಲವು ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ವರದಿಗಾರರಾಗಿ, ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ 1967ರಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂಸ್ಥೆ ಆರಂಭಿಸಿದ ‘ಕನ್ನಡ ಪ್ರಭ’ಕ್ಕೆ ಬಂದರು.

ಹಿರಿಯ ಪತ್ರಕರ್ತ, ಕನ್ನಡಪ್ರಭ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ನಿಧನ

ಅಲ್ಲಿಂದ ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕಾಲ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿಗಾರರಾಗಿ, ರಾಜಕೀಯ ವರದಿಗಾರರಾಗಿ, ಮುಖ್ಯ ವರದಿಗಾರರಾಗಿ ಕೆಲಸ ಮಾಡಿದ ನಂತರ ಸುಮಾರು ಎರಡೂವರೆ ವರ್ಷಗಳ ಕಾಲ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವೃತ್ತಿಯಿಂದ ನಿವೃತ್ತರಾದರೂ ಬರವಣಿಗೆಯಿಂದ ನಿವೃತ್ತರಾಗಲಿಲ್ಲ. ಅವರು ಬರೆಯುತ್ತಿದ್ದ ವ್ಯಕ್ತಿ ವಿಶೇಷ, ಸಮಕಾಲೀನ, ನಗರ ಪ್ರದಕ್ಷಿಣೆಗಳು ಖ್ಯಾತ ಅಂಕಣಗಳಾಗಿದ್ದವು. ವಾಣಿಜ್ಯ, ಆರ್ಥಿಕ ವಿಷಯಗಳ ಬಗ್ಗೆ ಬರೆಯುತ್ತಿದ್ದರು. ಆಯವ್ಯಯದ ವರದಿ, ಅಧಿವೇಶನದ ವರದಿಯಲ್ಲಿ ಎತ್ತಿದ ಕೈ. ಬರೆಯುತ್ತಿದ್ದ ಸಂಪಾದಕೀಯ ಮೌಲ್ಯಯುತವಾಗಿರುತ್ತಿತ್ತು. ಬರವಣಿಗೆಯಲ್ಲಿ ಆರೋಗ್ಯ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿದ್ದರೆ ಹೊರತು ಪಕ್ಷಪಾತ ಅಥವಾ ಅನಗತ್ಯ ಟೀಕೆ ಇರುತ್ತಿರಲಿಲ್ಲ.

ವಿ.ಎನ್‌. ಸುಬ್ಬರಾವ್‌(VN Subbarao), ಎಂಸಿವಿ ಮೂರ್ತಿ(MCV Murthy), ಜಯಶೀಲರಾವ್‌(Jayasheel rao), ಮೈಸೂರುಮಠ, ಸಿ.ಎಂ. ರಾಮಚಂದ್ರರಾವ್‌(CM Ramachandra rao) ಅವರ ಸಮಕಾಲೀನರಾಗಿದ್ದ ಸತ್ಯನಾರಾಯಣ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯುತ್ತಿದ್ದರು,

ನಾಡಿನ ಅನೇಕ ಆಗು-ಹೋಗುಗಳಿಗೆ ಸಾಕ್ಷಿಯಾಗಿದ್ದ ‘ಸತ್ಯ’ ಅವರು ಉನ್ನತ ಸ್ಥಾನದಲ್ಲಿದ್ದರೂ ಸರಳತೆ ಮೈಗೂಡಿಸಿಕೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಎಲ್ಲರಿಗಿಂತ ಹಿಂದೆ ಕುಳಿತು ಪ್ರಶ್ನೆ ಕೇಳುತ್ತಿದ್ದರು. ರಾಜಕಾರಣಿಗಳಿಗಂತೂ ಸತ್ಯ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಯಾವತ್ತೂ ಸಹ ಅಧಿಕಾರಸ್ಥರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬದಲಾಗಿ ಅವರೇ ತಮ್ಮ ಮನೆಗೆ ಬರುವಂತಹ ವ್ಯಕ್ತಿತ್ವ ರೂಢಿಸಿಕೊಂಡಿದ್ದರು.

ಸರಳತೆ:

ಸತ್ಯ ಅವರ ಮತ್ತೊಂದು ವಿಶೇಷವೆಂದರೆ ಸರಳತೆ. ಎಲ್ಲಿಯೇ ಹೋಗಲಿ ಪೈಜಾಮ, ಉದ್ದನೆಯ ಜುಬ್ಬಾ, ಹೆಗಲ ಮೇಲೊಂದು ಉದ್ದನೆಯ ಚೀಲ ಧರಿಸುತ್ತಿದ್ದರು. ಹಳೆಯ ಸ್ನೇಹಿತರು, ಹಿರಿ-ಕಿರಿಯ ಸಹೋದ್ಯೋಗಿಗಳು ಸಿಕ್ಕರೆ ಆತ್ಮೀಯತೆಯಿಂದ ಮಾತನಾಡುವ ಗುಣ, ವಾದಕ್ಕೆ ನಿಂತರೆ ಮಾತ್ರ ಸೋಲಪ್ಪದ ಗುಣ. ಅನೇಕ ಪತ್ರಕರ್ತರನ್ನು ಬೆಳಸಿದರು. ಕಾರ್ಮಿಕರ ಪರ ಕಾಳಜಿ ಉಳ್ಳ ವ್ಯಕ್ತಿಯಾಗಿದ್ದರು. ಇಂದಿನ ಪತ್ರಿಕೋದ್ಯಮ ಹಾಗೂ ಪತ್ರಕರ್ತರಿಗೆ ನಿಜವಾದ ಮಾದರಿಯಾದವರು ಕೆ. ಸತ್ಯನಾರಾಯಣ.

‘ಕನ್ನಡಪ್ರಭ’ ಹೆಸರು ಸೂಚಿಸಿದ್ದೇ ಸತ್ಯ

‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಸಂಸ್ಥೆ 1967 ಕನ್ನಡ ಪತ್ರಿಕೆ ಆರಂಭಿಸಲು ನಿರ್ಧರಿಸಿ, ಟೈಟಲ್‌ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ನಾನೇ ‘ಕನ್ನಡಪ್ರಭ’ ಎಂಬ ಹೆಸರಿಡುವಂತೆ ಸೂಚಿಸಿದ್ದೆ. ವಿಶೇಷವೆಂದರೆ ದೆಹಲಿಯಿಂದ ‘ಕನ್ನಡಪ್ರಭ’ ಎಂಬ ಹೆಸರು ಒಪ್ಪಿಗೆಯಾಗಿ ಬಂದಿತು ಎಂದು ಕೆ. ಸತ್ಯನಾರಾಯಣ ಅವರು ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದರು.

ಹಲವು ಜನರಿಗೆ ಸತ್ಯ ಪ್ರೇರಣೆ

ಹಿರಿಯ ಪತ್ರಕರ್ತರು, ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿದ್ದ ಕೆ.ಸತ್ಯನಾರಾಯಣ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ದುಃಖವಾಯಿತು. ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟಛಾಪು ಮೂಡಿಸಿ, ಹಲವಾರು ಜನರಿಗೆ ಪ್ರೇರಣೆಯಾಗಿದ್ದ ಶ್ರೀಯುತರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಅತ್ಯಂದ ದುಃಖದ ವಿಚಾರ

ಹಿರಿಯ ಪತ್ರಕರ್ತರು, ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿ ನಿವೃತ್ತರಾಗಿದ್ದ ಕೆ.ಸತ್ಯನಾರಾಯಣ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಕುಟುಂಬ ವರ್ಗ ಹಾಗೂ ಸ್ನೇಹಬಳಗಕ್ಕೆ ಅವರನ್ನು ಕಳೆದುಕೊಂಡ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

- ರಾಜೀವ್‌ ಚಂದ್ರಶೇಖರ್‌, ಕೇಂದ್ರ ಸಚಿವ

 

6 ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ಸೇವೆ:

6 ದಶಕಗಳಿಗೂ ಹೆಚ್ಚು ಕಾಲ ಸುದ್ದಿಮನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಮೊನಚಾದ ಬರಹದಿಂದ ಹೆಸರು ಮಾಡಿದ್ದ ಕೆ. ಸತ್ಯನಾರಾಯಣ ಅವರು ‘ಕನ್ನಡಪ್ರಭ’ ಸಂಪಾದಕ ಹುದ್ದೆಯಿಂದ ನಿವೃತ್ತರಾದ ಬಳಿಕ ಇಳಿ ವಯಸ್ಸಿನಲ್ಲೂ ಅಂಕಣ ಬರವಣಿಗೆಯ ಮೂಲಕ ಜನಪ್ರಿಯರಾಗಿದ್ದರು. ಅವರು ಪತ್ರಿಕೋದ್ಯಮ ಮಾತ್ರವಲ್ಲದೆ, ನಾಡು ನುಡಿಯ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದವರು.

50ರ ದಶಕದ ಅಂತ್ಯ ಭಾಗದಲ್ಲಿ ಪತ್ರಿಕಾ ವೃತ್ತಿಜೀವನ ಪ್ರಾರಂಭಿಸಿದ ಸತ್ಯನಾರಾಯಣ ಅವರು 60ರ ದಶಕದಲ್ಲಿ ಇಂಡಿಯನ್‌ ಎP್ಸ…ಪ್ರೆಸ್‌ ಬಳಗ ಸೇರಿ ಬಳಿಕ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಸಂಪಾದಕರಾಗಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸಿದರು. ಜೊತೆಜೊತೆಗೇ ಕೆಲಕಾಲ ಇಂಡಿಯನ್‌ ಎP್ಸ…ಪ್ರೆಸ್‌ ಪತ್ರಿಕೆಯಲ್ಲೂ ಸಂಪಾದಕರಾಗಿಯೂ ಜವಾಬ್ದಾರಿ ನಿಭಾಯಿಸಿದರು. ಮಾಹಿತಿ ಪೂರ್ಣ ಬರಹ, ಸತ್ವಪೂರ್ಣ ವಿಚಾರಗಳ ಮೂಲಕ ಗುರುತಿಸಿಕೊಂಡಿದ್ದ ಅವರು ತಮ್ಮ ಬಹುಪಾಲು ಜೀವನವನ್ನು ಸುದ್ದಿಮನೆಯ ನಂಟಿನೊಂದಿಗೆ ಕಳೆದವರು.

ಏಷ್ಯಾನೆಟ್‌ ಸುವರ್ಣ ನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್ ಶೆಟ್ಟಿ ರಾಯಭಾರಿ

ಇಂದಿನ ಕನ್ನಡ ಪತ್ರಿಕೋದ್ಯಮದಲ್ಲಿ ಅವರಿಗೆ ದೊಡ್ಡ ಶಿಷ್ಯಬಳಗವೇ ಇದೆ. ನಿವೃತ್ತಿಯ ಬಳಿಕವೂ ನಿರಂತರ ಬರವಣಿಗೆ ಮುಂದುವರಿಸಿದ ಅವರು ಸದಾ ಸುದ್ದಿಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಿರಿಯರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು.

Follow Us:
Download App:
  • android
  • ios