Instagram ನಲ್ಲಿ ಕರ್ನಾಟಕ ಮಾತೆ, ಕನ್ನಡಿಗರಿಗೆ ಅವಾಚ್ಯ ನಿಂದನೆ; ಜಯ ಕರ್ನಾಟಕ ಸಂಘಟನೆ ದೂರು
ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕರ್ನಾಟಕ ಮಾತೆ, ಕನ್ನಡ, ಕನ್ನಡಿಗರ ಬಗ್ಗೆ Instagram ನಲ್ಲಿ ಅವಾಚ್ಯವಾಗಿ ನಿಂದಿಸಿರುವ ಆರೋಪ ಜಯ ಕರ್ನಾಟಕ ಸಂಘಟನೆಯಿಂದ ಕೊಡಗೇಹಳ್ಳಿ ಪೊಲೀಸರಿಗೆ ದೂರು. ಆರೋಪಿಯನ್ನು ಬಂಧಿಸುವಂತೆ ಆಗ್ರಹ.

ಬೆಂಗಳೂರು (ಸೆ.30): ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕರ್ನಾಟಕ ಮಾತೆ, ಕನ್ನಡ, ಕನ್ನಡಿಗರ ಬಗ್ಗೆ Instagram ನಲ್ಲಿ ಅವಾಚ್ಯವಾಗಿ ನಿಂದಿಸಿರುವ ಆರೋಪ ಜಯ ಕರ್ನಾಟಕ ಸಂಘಟನೆಯಿಂದ ಕೊಡಗೇಹಳ್ಳಿ ಪೊಲೀಸರಿಗೆ ದೂರು. ಆರೋಪಿಯನ್ನು ಬಂಧಿಸುವಂತೆ ಆಗ್ರಹ.
ನಿಲೋಯ್ ಮಂಡಲ ಎಂಬ ವ್ಯಕ್ತಿ ತನ್ನ Instagram ಖಾತೆಯಲ್ಲಿ ಬೆಂಗಳೂರು, ಕರ್ನಾಟಕ, ಕರ್ನಾಟಕ ಮಾತೆ ಬಗ್ಗೆ ಅವಾಚ್ಯವಾಗಿ ನಿಂದನೆ. ಉತ್ತರ ಭಾರತದವರ ಸ್ನಾನದಗೃಹ ಸ್ವಚ್ಛ ಮಾಡುವವರು ಎಂದು ನಿಂದನೆ ಮಾಡಿರುವ ಆರೋಪಿ..
ರಾಷ್ಟ್ರಧ್ವಜದ ಮೇಲೆ ಗುಂಬಜ್, ಮುಸ್ಲಿಂ ಧರ್ಮದ ಘೋಷಣೆ ಬರೆದು ಅವಮಾನ: ಆರೋಪಿ ಬಂಧನ
ದೂರಿನಲ್ಲಿ ಏನಿದೆ?
ಬೆಂಗಳೂರು ಇಲ್ಲದೆ ಕರ್ನಾಟಕ ಏನೂ ಇಲ್ಲ.ಕರ್ನಾಟಕದ ಜನ ತುಂಬಾ ಅವಿದ್ಯಾವಂತರು, ಕರ್ನಾಟಕ, ಕನ್ನಡ, ಬೆಂಗಳೂರು ಜನ ಕೇವಲ ಸ್ನಾನದ ಗೃಹ ಸ್ವಚ್ಛಗೊಳಿಸಲಷ್ಟೇ ಯೋಗ್ಯರು. ಹೀಗಾಗಿ ಜನರು ಬಂದು ನಿಮ್ಮ ಕರ್ನಾಟಕ ಮಾತೆಯನ್ನು ಬೈಯುತ್ತಾರೆ. ನಾವು ಉತ್ತರ ಭಾರತೀಯರು, ವಿಶೇಷವಾಗಿ ಬಂಗಾಳಿಗಳು ನಿಮ್ಮನ್ನು ಅಭಿವೃದ್ಧಿಪಡಿಸಲು ಇಲ್ಲಿಗೆ ಬಂದಿದ್ದೇವೆ.ನಾವು ಜೊಮೊಟೊ ಮತ್ತು ಓಲಾ ಆಟೋಗಳನ್ನು ಬಿಟ್ಟ ನಂತರ ನೀವು ಸಗಣಿ ಅನ್ನು ತಿನ್ನುತ್ತೀರಿ. ಬೆಂಗಳೂರಿನಲ್ಲಿ ನಿಮ್ಮನ್ನು ಬಿಟ್ಟರೆ ಯಾರೂ ಕನ್ನಡ ಕಲಿಯುವುದಿಲ್ಲ. ಕನ್ನಡಿಗರು ಅರಣ್ಯವಾಸಿಗಳಾಗತ್ತಾರೆ. ಕನ್ನಡ ಅಶಿಟ್ಟಿಯೆಸ್ಟ್ ಭಾಷೆಯಾಗಿದೆ. ಭಾರತದ ಅತ್ಯಂತ ಅನುಪಯುಕ್ತ ರಾಜ್ಯ ಎಂದರೆ ಅದು ಕರ್ನಾಟಕ ಎಂದು ನಿಂದಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಜಯ ಕರ್ನಾಟಕ ಸಂಘಟನೆ. ಆರೋಪಿಯ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.