Asianet Suvarna News Asianet Suvarna News

Shiva Rajkumar: ಚಿತ್ರಮಂದಿರ 100% ಭರ್ತಿಗಾಗಿ ಸಿಎಂ ಭೇಟಿ ಮಾಡುವೆ

ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡುವ ಭರವಸೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರದಲ್ಲಿ ಅನುಕೂಲ ಮಾಡಿಕೊಡುವ ವಿಶ್ವಾಸ ಇದೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

Kannada Actor Shivarajkumar Appeals for 100 occupancy in cineme halls gvd
Author
Bangalore, First Published Jan 31, 2022, 6:28 AM IST

ಮೈಸೂರು (ಜ.31): ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡುವ ಭರವಸೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ವಿಚಾರದಲ್ಲಿ ಅನುಕೂಲ ಮಾಡಿಕೊಡುವ ವಿಶ್ವಾಸ ಇದೆ ಎಂದು ನಟ ಶಿವರಾಜ್‌ ಕುಮಾರ್‌ (Shivarajkumar) ಹೇಳಿದರು. ಸಿನಿಮಾ ಮಂದಿರಗಳಿಗೆ ಕೋವಿಡ್‌ 50:50 ನಿಯಮ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರವಷ್ಟೇ ನಾನು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. 

ನಾವು ಕೊರೋನಾದ (Coronavirus) ಜೊತೆ ಜೊತೆಗೆ ಬದುಕಬೇಕಿದೆ. ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಕ್ಷೇತ್ರಗಳಿಗೂ 50:50 ನಿಯಮದಿಂದ ವಿನಾಯ್ತಿ ಕೊಡಲಾಗಿದೆ. ಆದರೆ, ಸಿನಿಮಾ ಮಂದಿರಗಳಿಗೆ ಯಾಕೆ ಆ ರಿಯಾಯ್ತಿ ಕೊಟ್ಟಿಲ್ಲ ಎಂಬುದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ಅವರು ತಿಳಿಸಿದರು.

Shiva Rajkumar: ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡ ಕರುನಾಡ ಚಕ್ರವರ್ತಿ

ಅಪ್ಪು ಅಗಲಿಕೆ ನೋವಲ್ಲೇ ಬದುಕುತ್ತಿದ್ದೇವೆ: ನಟ ಪುನೀತ್‌ ರಾಜಕುಮಾರ್‌ (Puneeth Rajkumar) ಅವರದ್ದು ಅದ್ಭುತವಾದ ಆತ್ಮ. ಹೀಗಾಗಿಯೇ ಅಪ್ಪುವನ್ನು ಜನ ಈಗಲು ನೆನಪಿಸಿಕೊಂಡು ಇಷ್ಟಪಡುತ್ತಾರೆ. ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆ ಆಗುತ್ತಿದೆ ಎಂದು ನಾಯಕ ನಟ ಶಿವರಾಜಕುಮಾರ್‌ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ನಿಧನ ನೆನಪಿಸಿಕೊಂಡಾಗೆಲ್ಲ, ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಆ ನೋವಿನ ಜೊತೆಗೇ ಬದುಕುತ್ತಿದ್ದೇವೆ. ಮುಂದೆಯೂ ನೋವಿನ ಜೊತೆಗೆ ಬದುಕುತ್ತೇವೆ ಎಂದರು.

ಶಕ್ತಿಧಾಮಕ್ಕೆ ಇತ್ತೀಚೆಗೆ ನಾನು ಹೆಚ್ಚಾಗಿ ಬರುತ್ತಿದ್ದೇನೆ. ನಮ್ಮ ಮನಸ್ಸುಗಳಿಗೂ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಹೊಸ ಅನುಭವ ಆಗುತ್ತದೆ. ಪತ್ನಿ ಗೀತಾ ಶಿವರಾಜಕುಮಾರ್‌ ಈಗ ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಅದರ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು. ಮೊನ್ನೆ ಶಕ್ತಿಧಾಮದ ಮಕ್ಕಳು ಇಷ್ಟಪಟ್ಟರು ಎಂದು ನಾನೇ ಡ್ರೈವ್‌ ಮಾಡಿಕೊಂಡು ಶೂಟಿಂಗ್‌ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಸ್ಕೂಲ್‌ ತೆರೆಯಲು ನಮಗೆ ಅನುಮತಿ ಸಿಗುತ್ತಿದೆ. ಆ ಕೆಲಸವೂ ಬೇಗ ಆಗುತ್ತದೆ ಎಂದು ಅವರು ಹೇಳಿದರು.

ಆಸ್ಪತ್ರೆ ಉದ್ಘಾಟನೆ ಮಾಡಿದ ಶಿವಣ್ಣ: ಬಡ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಮೈಸೂರಿನಲ್ಲಿ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಿದೆ. 150 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ಕೈಗೆಟಕುವ ಬೆಲೆಯಲ್ಲಿ ಜನರಿಗೆ ಉತ್ತಮ ದರ್ಜೆಯ ವೈದ್ಯಕೀಯ ಸೌಲಭ್ಯ ನೀಡುವುದು ಇದರ ಗುರಿಯಾಗಿದೆ. ನಟ ಡಾ. ಶಿವರಾಜ್‌ಕುಮಾರ್ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು. ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶಾಸಕ ಜಿ ಟಿ ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ಧಾರೆ.  'ಇಂತಹ ಸುಸಜ್ಜಿತ ಆಸ್ಪತ್ರೆಗಳು ಹೆಚ್ಚಾಗಬೇಕು. ಈ ಆಸ್ಪತ್ರೆಯನ್ನ ಬಹಳ ಅಚ್ಚುಕಟ್ಟಾಗಿ ಕಟ್ಟಿದ್ದಾರೆ. ಎಲ್ಲದ್ದಕ್ಕು ಚಿಕಿತ್ಸೆ ಸೌಲಭ್ಯದ ವ್ಯವಸ್ಥೆ ಮಾಡಿದ್ದಾರೆ. ಕೋವಿಡ್‌ನ ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಗಳ ಮಹತ್ವ ಹೆಚ್ಚಿದೆ' ಎಂದು ಶಿವರಾಜ್‌ಕುಮಾರ್ ಹೇಳಿದರು. 

ಕೆಲವರು ನನ್ನನ್ನ Unlucky ಅಂದ್ರೂ ಶಿವಣ್ಣ ಮಾತ್ರ ಲಕ್ಕಿ ಅಂತಾರೆ: ಡಾಲಿ ಧನಂಜಯ್

ಶಕ್ತಿಧಾಮದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ: ಶಕ್ತಿಧಾಮ ಮಕ್ಕಳೊಂದಿಗೆ ಡಾ. ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಡೆಸುತ್ತಿದ್ದ ಶಕ್ತಿಧಾಮದ ಹೊಣೆಯನ್ನು ಇದೀಗ ಶಿವಣ್ಣ ಹೊತ್ತಿದ್ದಾರೆ. ಗಣ ರಾಜ್ಯೋತ್ಸವ ಆಚರಿಸಿದ ಬಳಿಕ ಮಕ್ಕಳ ಜೊತೆ ಬಸ್‌ನಲ್ಲಿಯೇ ಶಕ್ತಿಧಾಮ ಸುತ್ತಿದ ಶಿವಣ್ಣ ಮಕ್ಕಳನ್ನ ಕೂರಿಸಿಕೊಂಡು ಸ್ವತಃ ತಾವೇ ಬಸ್ ಚಲಾಯಿಸಿದ್ದಾರೆ. ಮಕ್ಕಳು ಇದನ್ನು ಸಂಭ್ರಮಿಸಿದ್ದಾರೆ.

Follow Us:
Download App:
  • android
  • ios