Asianet Suvarna News Asianet Suvarna News

'ನಾವೆಲ್ಲರೂ ಅವನನ್ನು ತುಂಬಾ ಇಷ್ಟಪಟ್ಟಿದ್ದೆವು ಆದರೆ.,' ದರ್ಶನ್ ಬಗ್ಗೆ ನಟ ಅನಿರುದ್ಧ್ ಮಾತು!

ಕನ್ನಡ ಚಿತ್ರರಂಗದ ಮೇರು ನಟರೆನಿಸಿದ್ದ ದರ್ಶನರನ್ನ ನಾವೆಲ್ಲರೂ ಅವನನ್ನ ತುಂಬಾ ಇಷ್ಟಪಟ್ಟಿದ್ದೆವು. ಆದರೆ ದರ್ಶನ್ ಜೀವನದಲ್ಲಿ ಈ ರೀತಿ ನಡೆಯುತ್ತಿರೋದು ಸಂಕಟ ತಂದಿದೆ ಎಂದು ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದರು.

Kannada actor Aniruddha reacts about darshan arrested in renuka swamy murder case at mysuru rav
Author
First Published Jun 18, 2024, 10:55 PM IST

ಬೆಂಗಳೂರು (ಜೂ.18): ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದನೆಂಬ ಕಾರಣಕ್ಕೆ  ದರ್ಶನ್‌ ಅಂಡ್ ಗ್ಯಾಂಗ್‌ನಿಂದ ಬರ್ಬರವಾಗಿ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಡೀ ಸ್ಯಾಂಡಲ್‌ವುಡ್‌ನ ಕಳೆಯನ್ನೇ ನುಂಗಿಬಿಟ್ಟಿದೆ. ರಾಜಕಾರಣಿಗಳು, ಟಿವಿ ಮಾಧ್ಯಮ ಎಲ್ಲಿ ನೋಡಿದರೂ ದರ್ಶನ್‌ ಅಂಡ್‌ ಗ್ಯಾಂಗ್‌ ಮಾಡಿದ ವಿಕೃತಿಯದ್ದೇ ಸುದ್ದಿ. ದರ್ಶನ್ ಬಂಧನವಾದಾಗ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಸ್ಟಾರ್ ನಟರು, ಕಲಾವಿದರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದರು. ಆದರೆ ಇದೀಗ ಮುಂದೆ ಬಂದು ಪ್ರತಿಯೊಬ್ಬರು ಕೃತ್ಯವನ್ನು ಖಂಡಿಸುತ್ತಿದ್ದಾರೆ, ನ್ಯಾಯಕ್ಕೆ ಆಗ್ರಹಿಸುತ್ತಿದ್ದಾರೆ.

'ನಾನು ದರ್ಶನ್ ಗೆಳೆಯರು ಆದರೆ..,' ಪೊಲೀಸರ ಮುಂದೆ ಹಾಸ್ಯ ನಟ ಚಿಕ್ಕಣ್ಣ ಹೇಳಿದ್ದೇನು?

ದರ್ಶನ್ ಅಂಡ್‌ ಗ್ಯಾಂಗ್ ನಡೆಸಿದ ಕೃತ್ಯದಿಂದ ಇಡೀ ಕನ್ನಡ ಚಿತ್ರರಂಗ ತಲೆತಗ್ಗಿಸುವಂತಾಗಿದೆ ಎಂದು ಜನ ಮಾತಾಡಿಕೊಳ್ಳುವಂತಾಗಿರುವುದು ಸುಳ್ಳಲ್ಲ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ನಟ ಅನಿರುದ್ಧ, 'ಈ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅಲ್ಲ, ಇದೊಂದು ದುರ್ಘಟನೆ, ದುರಂತ' ಎಂದಿದ್ದಾರೆ.

ದರ್ಶನ್ ಬಂಧನ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಚಿಕ್ಕಣ್ಣನಿಗೆ ನೋಟಿಸ್: ಹಾಸ್ಯ ನಟನಿಗೆ ಢವ ಢವ ಶುರು!

ರೇಣುಕಾ ಸ್ವಾಮಿ ಹತ್ಯೆ ಬಳಿಕ ಅವರ ಕುಟುಂಬ ಸಂಕಟ ಅನುಭವಿಸುತ್ತಿದೆ. ಇನ್ನು ಕನ್ನಡ ಚಿತ್ರರಂಗದ ಮೇರು ನಟರೆನಿಸಿದ್ದ ದರ್ಶನರನ್ನ ನಾವೆಲ್ಲರೂ ಅವನನ್ನ ತುಂಬಾ ಇಷ್ಟಪಟ್ಟಿದ್ದೆವು. ಆದರೆ ದರ್ಶನ್ ಜೀವನದಲ್ಲಿ ಈ ರೀತಿ ನಡೆಯುತ್ತಿರೋದು ಸಂಕಟ ತಂದಿದೆ. ಪ್ರಕರಣದ ಬಗ್ಗೆ ಈಗಾಗಲೇ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈಗಲೇ ತೀರ್ಮಾನಕ್ಕೆ ಬರಲು ಆಗೋದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆಯಾಗಲಿ ಎಂದಿದ್ದಾರೆ.
 

Latest Videos
Follow Us:
Download App:
  • android
  • ios