ಮುಸ್ಲಿಂ ಮಹಿಳೆಯರ ಬಗ್ಗೆಕಲ್ಲಡ್ಕ ಪ್ರಭಾಕರ ಭಟ್ ಬಹಳ ಅಶ್ಲೀಲ ಮತ್ತು ತುಚ್ಛವಾಗಿ ಮಾತನಾಡಿದ್ದಾರೆ. ಇದನ್ನ ನಾಗರಿಕ ಸಮಾಜ ಒಪ್ಪಲು ಸಾದ್ಯವೇ ಇಲ್ಲ. ಮುಸ್ಲಿಂ ಮಾತ್ರ ಅಲ್ಲ, ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿಕಾರಿದರು.

ದಕ್ಷಿಣ ಕನ್ನಡ (ಡಿ.28): ಮುಸ್ಲಿಂ ಮಹಿಳೆಯರ ಬಗ್ಗೆಕಲ್ಲಡ್ಕ ಪ್ರಭಾಕರ ಭಟ್ ಬಹಳ ಅಶ್ಲೀಲ ಮತ್ತು ತುಚ್ಛವಾಗಿ ಮಾತನಾಡಿದ್ದಾರೆ. ಇದನ್ನ ನಾಗರಿಕ ಸಮಾಜ ಒಪ್ಪಲು ಸಾದ್ಯವೇ ಇಲ್ಲ. ಮುಸ್ಲಿಂ ಮಾತ್ರ ಅಲ್ಲ, ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿಕಾರಿದರು.

ಮಂಡ್ಯದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ಅವಹೇಳನಕಾರಿ ಹೇಳಿಕೆ ವಿಚಾರ ಸಂಬಂಧ ಇಂದು ದಕ್ಷಿಣ ಕನ್ನಡದ ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ಟರ ವಿವಾದಾತ್ಮಕ ಹೇಳಿಕೆ ಇದೇ ಮೊದಲಲ್ಲ, ಜಿಲ್ಲೆಯಲ್ಲಿ ಅನೇಕ ಬಾರಿ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಇರೋ ಕಾರಣ ಅವರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಹೀಗಾಗಿ ಕೋಮು ಪ್ರಚೋದನೆ ಮಾಡಿ ಗಲಾಟೆ ಸೃಷ್ಟಿಸೋ ಯತ್ನ ಮಾಡ್ತಿದ್ದಾರೆ. ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕಲ್ಲಡ್ಕ ಪ್ರಭಾಕರ ಭಟ್ ರನ್ನ ವಿಳಂಬ ಮಾಡದೇ ಬಂಧಿಸಬೇಕು ಎಂದು ಆಗ್ರಹಿಸಿದರು.

'ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ' ಹೇಳಿಕೆಗೆ ಕಲ್ಲಡ್ಕ ಪ್ರಭಾಕರ್ ವಿರುದ್ಧ ಎಫ್‌ಐಆರ್!

ಪ್ರಚೋದನಾತ್ಮಕ ಹೇಳಿಕೆ ನೀಡಿ ಸಮಾಜದ ಶಾಂತಿಗೆ ಭಂಗ ಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟರ ಬಂಧನಕ್ಕೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಮತ ಇದೆ ಎಂದು ಭಾವಿಸುತ್ತೇನೆ. ಅವರ ಹೇಳಿಕೆಯನ್ನ ಯಾರೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಪ್ರಭಾಕರ್ ಭಟ್ಟರ ಹೇಳಿಕೆಯನ್ನು ತಿರುಚಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ ಯಾವ ರೀತಿ ತಿರುಚಿದ್ದಾರೆ ಎಂಬುದನ್ನು ಅವರೇ ಹೇಳಲಿ ಎಂದು ಸವಾಲು ಹಾಕಿದರು.

ಕೋಮುದ್ವೇಷ ಹರಡಿಸಿ ರಾಜಕೀಯ ಲಾಭಕ್ಕೆ ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತರಲಾಗಿದೆ. ಈಗಾಗಲೇ ಇದರ ವಿರುದ್ದ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಅವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಅದನ್ನ ಗಮನಿಸಿ ಸರಕಾರ ಕೂಡಲೇ ಅವರನ್ನು ಬಂಧಿಸಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸ ನನಗೆ ಇದೆ. ಇದು ಕೇವಲ‌ ಮುಸ್ಲಿಂ ಹೆಣ್ಮಕ್ಕಳಿಗೆ ಮಾತ್ರ ಅಲ್ಲ, ಹಿಂದೂ ಹೆಣ್ಮಕ್ಕಳ ಡ್ರೆಸ್ ಕೋಡ್ ಬಗ್ಗೆಯೂ ಮಾತನಾಡ್ತಾರೆ. ಹಿಂದೂ ಹೆಣ್ಮಕ್ಕಳ ಅಪಮಾನ ಮಾಡೋ ಕೆಲಸವನ್ನು ಪ್ರಭಾಕರ ಭಟ್ ಮಾಡಿದ್ದಾರೆ. ಕ್ರೈಸ್ತ ಸಮುದಾಯವನ್ನೂ ಅವರು ಹಲವು ಬಾರಿ ಮಾಡಿದ್ದಾರೆ. ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಕೋಮುವಾದಿ ಚಟುವಟಿಕೆ ನಿಗ್ರಹಿಸಲು ಜಿಲ್ಲೆಯಲ್ಲಿ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕೋಮು ಸಂಘರ್ಷ ಆಗ್ತಿದೆ. ಇದನ್ನೆಲ್ಲಾ ಮಟ್ಟ ಹಾಕುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಭಾಗ್ಯವಿಧಾತ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ: ಮೇ.24ರ ನಂತರ ಕಾಂಗ್ರೆಸ್-ಜೆಡಿಎಸ್ಗೆ ಹೋರಾಟವೇ ಗತಿ: ಪ್ರತಾಪ್ ಸಿಂಹ