ಕಲಬುರಗಿ, (ಮಾ.14): ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೋನಾ ಅತ್ಯಂತ ಅಪಾಯಕಾರಿ ವೈರಸ್. ಈ ವೈರಸ್ ತಗುಲಿದರೆ ಸಾವಿನ ಮನೆಯ ಬಾಗಿಲು ತಟ್ಟಿದಂತೆ ಎಂದು ಈಗಾಗಲೇ ಸಾಬೀತಾಗಿದೆ.  

ಅದರೆ ಕಲಬುರಗಿಯಲ್ಲಿ ಕೊರೋನಾದಿಂದ ಮೃತಪಟ್ಟ ವೈಕ್ತಿಯ ಮನೆ ಮತ್ತು ಆಸುಪಾಸಿನ ಸ್ಥಳಗಳಿಗೆ ತೆರಳಿ, ಮೃತನ ಕುಟುಂಬದ ಸದಸ್ಯರೊಂದಿಗೆ ಸಂದರ್ಶನ ಮಾಡಿ ಇದೀಗ ಅವರೇ ದಿಗ್ಬಂಧನಕ್ಕೊಳಗಾಗಿದ್ದಾರೆ.

ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಹೋಂ ಐಸೊಲೇಷನ್

ಹೌದು...ಕಲಬುರಗಿಯಲ್ಲಿ ಗುರುವಾರ 76 ವರ್ಷದ ವೃದ್ಧ ಕೋವಿಡ್​-19 ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.  ಆದರೂ ಕೆಲ ಪತ್ರಕರ್ತರು ಕೊರೋನಾ ಪೀಡಿತರು ಮತ್ತು ಶಂಕಿತರ ಬಗ್ಗೆ ಪ್ರತ್ಯಕ್ಷ ವರದಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.

ಮೃತ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರ ಕುಟುಂಬದವರಿಗೂ ಕೊರೊನಾ ಸೋಂಕು ತಗುಲಿರುವ ಬಗ್ಗೆ ಅನುಮಾನವಿರುವ ಕಾರಣ, ಸಿದ್ದಿಕಿ ಕುಟುಂಬಸ್ಥರಿಗೂ ಆರೋಗ್ಯ ಇಲಾಖೆ ವೈದ್ಯಕೀಯ ತಪಾಸಣೆ ನಡೆಸುತ್ತಿದೆ. 

ಈ ನಡುವೆ ಕೆಲ ಪತ್ರಕರ್ತರು ಮತ್ತು ಸುದ್ದಿ ವಾಹಿನಿಯ ವರದಿಗಾರರು ಮೃತ ಸಿದ್ದಿಕಿ ಅವರ ಫ್ಯಾಮಿಲಿಯ ಸಂದರ್ಶನ ಪಡೆದಿದೆ. ಹಾಗೆ ಇಂಟರ್ ವ್ಯೂ ಮಾಡಿದ ಪತ್ರಕರ್ತರನ್ನು ದಿಗ್ಬಂಧನದಲ್ಲಿ (ಐಸೋಲೇಷನ್) ಇಡುವಂತೆ ಕಲಬುರಗಿ ಡಿ.ಸಿ ಬಿ.ಶರತ್ ಸೂಚಿಸಿದ್ದಾರೆ.

'ತುರ್ತು ಕೆಲಸ ಇದ್ದರೆ ಮಾತ್ರ ಕಲಬುರಗಿಗೆ ಬನ್ನಿ ಇಲ್ಲಾಂದ್ರೆ ಬರಲೇಬೇಡಿ'

ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೋಟೋ/ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ, ಅಂತಹ ಪತ್ರಕರ್ತರನ್ನೂ ಸಹ ಮನೆಯಲ್ಲಿ 14 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ಆದ್ದರಿಂದ ಯಾರೂ ಸಹ ಅಂತಹ ಪ್ರಯತ್ನ ಮಾಡಬಾರದು. ಕೊರೊನಾ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾದರೂ ಸಹ ಸರ್ಕಾರವೇ ಮಾಹಿತಿ ನೀಡುತ್ತದೆ ಆರೋಗ್ಯ ಇಲಾಖೆ ತಿಳಿಸಿದೆ.

ಮಿತ್ರರೆ ದಯವಿಟ್ಟು ಇಂತಹ ಸಾವಿನ ಸಾಹಸಕ್ಕೆ ಕೈ ಹಾಕುವುದು ಬೇಡ, ಜಾಗೃತರಾಗಿ ಕೆಲಸ ನಿರ್ವಹಣೆ ಮಾಡಿ, ತಮ್ಮನ್ನು ನಂಬಿದ ಸಂಸಾರ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ನಿರ್ವಹಣೆ ಮಾಡಿ.