ಬೆಂಗಳೂರು(ಆ.01): ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೖಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಸೀಲ್‌ಡೌನ್‌ ಮಾಡಿದ್ದ ಬಿಬಿಎಂಪಿ ಇದೀಗ ಈ ಸೀಲ್‌ಡೌನ್‌ ಕ್ರಮವನ್ನು ಆಗಸ್ಟ್‌ 31ರವರೆಗೆ ಮುಂದುವರಿಸಿ ಆದೇಶಿಸಿದೆ.

ಕೆ.ಆರ್‌.ಮಾರುಕಟ್ಟೆ ಸುತ್ತಮುತ್ತ ಹಲವರಿಗೆ ಸೋಂಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿವರೆಗೆ ನಿತ್ಯ ಬರುವ ಲಕ್ಷಾಂತರ ಮಂದಿಗೆ ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಈ ಹಿಂದೆ ಸೆ.31 ರವರೆಗೆ ಈ ಮಾರುಕಟ್ಟೆಗಳನ್ನು ತೆರೆಯದಂತೆ ಸೀಲ್‌ಡೌನ್‌ ಮಾಡಲಾಗಿತ್ತು.

ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನರಾರಂಭ..!

ಜು.31ರಂದು ಶುಕ್ರವಾರ ಈ ಸೀಲ್‌ಡೌನ್‌ ಅವಧಿ ಮುಕ್ತಾಯವಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕಂಟೈನ್‌ಮೆಂಟ್‌ ವಲಯಗಳ ಲಾಕ್‌ಡೌನ್‌ ಅವಧಿಯನ್ನು ಮುಂದುವರಿಸಲು ಆದೇಶಿಸಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಎರಡೂ ಮಾರುಕಟ್ಟೆಗಳಲ್ಲಿ ಇನ್ನೂ ಒಂದು ತಿಂಗಳ ಕಾಲ ಸೀಲ್‌ಡೌನ್‌ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.