ಬೆಂಗಳೂರಿಗರಿಗೆ ಪ್ಲಿಪ್‌ಕಾರ್ಟ್ ವಿಶೇಷ ಆಫರ್ ನೀಡಿದೆ. ಕೇವಲ ಒಂದು ರೂಪಾಯಿಗೆ ಆಟೋ ಪ್ರಯಾಣ ಕೊಡುಗೆ ನೀಡಿದೆ. ಪೀಕ್ ಹವರ್‌ನಲ್ಲಿ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಿದರೂ ಕೇವಲ 1 ರೂಪಾಯಿ ಮಾತ್ರ. 

ಬೆಂಗಳೂರು(ಅ.02) ಬೆಂಗಳೂರಿನಲ್ಲಿ ಪ್ರತಿ ದಿನ ಆಟೋ ಅವಲಂಬಿಸಿರುವವರ ಸಂಖ್ಯೆ ಹೆಚ್ಚು. ಎಲ್ಲಾ ಬೆಲೆಗಳು ಹೆಚ್ಚಾದಂತೆ ಆಟೋ ಪ್ರಯಾಣ ದರ ಕೂಡ ದುಬಾರಿಯಾಗಿದೆ. ಆದರೆ ಬೆಂಗಳೂರು ಜನತೆಗೆ ಫ್ಲಿಪ್‌ಕಾರ್ಟ್ ಬಹುದೊಡ್ಡ ಆಫರ್ ನೀಡಿದೆ. ಪೀಕ್ ಟೈಮ್‌ನಲ್ಲಿ ಬೆಂಗಳೂರಿಗರು ಕೇವಲ 1 ರೂಪಾಯಿಗೆ ಆಟೋ ಪ್ರಯಾಣದ ಕೊಡುಗೆ ನೀಡಿದೆ. ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಿ ಆದರೆ ಕೇವಲ 1 ರೂಪಾಯಿ ಮಾತ್ರ. ಇದಕ್ಕಾಗಿ ಫ್ಲಿಪ್‌ಕಾರ್ಟ್ ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡು ಸೇವೆ ನೀಡುತ್ತಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಅಂಗವಾಗಿ ಈ ಆಫರ್ ನೀಡಿದೆ. ಬಿಗ್ ಬಿಲಯನ್ ಡೇಸ್ ಸೇಲ್ ವೇಳೆ ಯುಪಿಐ ಪಾವತಿ ಉತ್ತೇಜಿಸಲು ಹಾಗೂ ಜಾಗೃತಿ ಮೂಡಿಸಲು ಹೊಸ ಆಫರ್ ಫ್ಲಿಪ್‌ಕಾರ್ಟ್ ಜಾರಿಗೆ ತಂದಿದೆ. ಆಟೋಚಾಲಕರು ಹಾಗೂ ಪ್ರಯಾಣಿಕರಲ್ಲಿ ಯುಪಿಐ ಡಿಜಿಟಲ್ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲು ಈ 1 ರೂಪಾಯಿ ಆಟೋ ರೈಡ್ ಅಭಿಯಾನ ಆರಂಭಿಸಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್, ಕೇವಲ 10 ಸಾವಿರ ರೂಗೆ HP ಲ್ಯಾಪ್‌ಟಾಪ್!

ಫ್ಲಿಪ್‌ಕಾರ್ಟ್ ಹಲವು ಸ್ಥಳಗಳಲ್ಲಿ 1 ರೂಪಾಯಿ ಆಟೋ ಸೇವೆ ನೀಡುವ ಕೇಂದ್ರಗಳನ್ನು ತೆರೆದಿದೆ. ಇಷ್ಟೇ ಅಲ್ಲ ಆಟೋ ಚಾಲಕರಿಗೆ ಫ್ಲಿಪ್‌ಕಾರ್ಟ್ ಯುಪಿಐ ಪಾವತಿ ಸೇವೆ ನೀಡುತ್ತಿದೆ. ಇದರಿಂದ ಆಟೋ ಚಾಲಕರು ನಗದು ಹಣದ ಬದಲು ಯುಪಿಐ ಪಾವತಿ ಮೂಲಕ ಆತಂಕ ರಹಿತ ವಹಿವಾಟು ನಡೆಸುವಂತೆ ಫ್ಲಿಪ್‌ಕಾರ್ಟ್ ಜಾಗೃತಿ ಮೂಡಿಸುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಪೀಕ್ ಹವರ್‌ನಲ್ಲಿ ಫ್ಲಿಪ್‌ಕಾರ್ಟ್ ಈ 1 ರೂಪಾಯಿ ಆಟೋ ಸೇವೆ ನೀಡುತ್ತಿದೆ.

ನಗರದ ಹಲೆವೆಡೆ ಇದೀಗ ಫ್ಲಿಪ್‌ಕಾರ್ಟ್ ಆಟೋ ಸೇವೆ ಕೇಂದ್ರಗಳು ತೆರೆಯಲಾಗಿದೆ. ಈ ಮೂಲಕ ಫ್ಲಿಪ್‌ಕಾರ್ಟ್ 1 ರೂಪಾಯಿ ಆಟೋ ಸೇವೆ ನೀಡುತ್ತಿದೆ. ಆಟೋ ಚಾಲಕರ ಸಹಭಾಗಿತ್ವದಲ್ಲಿ ನೀಡುತ್ತಿರುವ ಆಟೋ ಸೇವೆಗೆ ಜನರು ಮುಗಿಬಿದ್ದಿದ್ದಾರೆ. ಆಟೋ ಸಮಸ್ಯೆ, ದುಬಾರಿ ದರಗಳಿಂದ ಬೆಂಗಳೂರು ಜನ ಪ್ರತಿ ದಿನ ಪರದಾಡುತ್ತಾರೆ. ಇದೀಗ ಜನ ಫ್ಲಿಪ್‌ಕಾರ್ಟ್ 1 ರೂಪಾಯಿ ಆಟೋ ಸೇವೆ ಬುಕ್ ಮಾಡುತ್ತಿದ್ದಾರೆ.

ಒಂದು ರೂಪಾಯಿ ಆಟೋ ಸೇವೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ 1 ರೂಪಾಯಿ ಆಟೋ ಸೇವೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ಇದು ಫ್ಲಿಪ್‌ಕಾರ್ಟ್ ಪ್ರಚಾರದ ವಿಚಾರವಾಗಿದ್ದರೂ ಜನರಿಗೆ ಒಳಿತಾಗಿದೆ. 1 ರೂಪಾಯಿ ಆಟೋ ಸೇವೆ ಹೀಗೆ ಮುಂದುವರಿದರೆ ಉತ್ತಮ ಎಂದು ಹಲವರು ಹೇಳಿದ್ದಾರೆ. ಇದು ಬೆಂಗಳೂರಿನ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರ ಯೋಜನೆಯಾಗಿದೆ. 1 ರೂಪಾಯಿಗೆ ಆಟೋ ಸೇವೆ ನೀಡುತ್ತಿರುವ ಫ್ಲಿಪ್‌ಕಾರ್ಟ್‌ಗ ಧನ್ಯವಾದ ಎಂದು ಕೆಲವರು ಹೇಳಿಕೊಂಡಿದ್ದಾರೆ. 

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಡೀಲ್, ಜಾವಾ ಯೆಝೆಡಿ ಬೈಕ್‌ಗೆ ಭರ್ಜರಿ ಡಿಸ್ಕೌಂಟ್!