HSRP ನಂಬರ್ ಪ್ಲೇಟ್ ಅಳವಡಿಕೆಗೆ ಒಂದೇ ದಿನ ಬಾಕಿ: ಇನ್ಮೇಲೆ ಬೀಳುತ್ತೆ ಭಾರೀ ದಂಡ..!
ಜೂನ್ 12 ವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದ ವಾಹನ ಸವಾರರ ಮೇಲೆ ಕ್ರಮವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ, ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆ ಅವಧಿ ಮತ್ತೆ ವಿಸ್ತರಣೆಯಿಲ್ಲ, ಡೆಡ್ಲೈನ್ ನೀಡಿದ್ರೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸದ ವಾಹನ ಸವಾರರ ಮೇಲೆ ಆರ್ಟಿಓ ಸಮರ ಸಾರಲು ಮುಂದಾಗಿದೆ.
ಬೆಂಗಳೂರು(ಜೂ.11): ವಾಹನ ಸವಾರರ ನಿರಾಶಕ್ತಿಗೆ ಸಾರಿಗೆ ಇಲಾಖೆ ದಂಡಾಸ್ತ್ರದ ಚಾಟಿ ಬೀಸಲು ಮುಂದಾಗಿದೆ. ಹೌದು, 2019 ಕ್ಕಿಂತ ಮೊದಲ ಕೊಂಡುಕೊಂಡ ವಾಹನಗಳಿಗೆ ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿ ಕಡ್ಡಾಯ ರೂಲ್ಸ್ ಜಾರಿ ಮಾಡಿದೆ. ಪದೇ ಪದೇ ಡೆಡ್ಲೈನ್ ನೀಡಿದ್ರೂ ವಾಹನ ಸವಾರರ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಜೂನ್-12 ಕ್ಕೆ ಅಂತಿಮ ಡೆಡ್ಲೈನ್ ನೀಡಲಾಗಿದೆ.
ಜೂನ್ 12 ವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದ ವಾಹನ ಸವಾರರ ಮೇಲೆ ಕ್ರಮವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ, ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆ ಅವಧಿ ಮತ್ತೆ ವಿಸ್ತರಣೆಯಿಲ್ಲ, ಡೆಡ್ಲೈನ್ ನೀಡಿದ್ರೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸದ ವಾಹನ ಸವಾರರ ಮೇಲೆ ಆರ್ಟಿಓ ಸಮರ ಸಾರಲು ಮುಂದಾಗಿದೆ.
HSRP ನಂಬರ್‌ಪ್ಲೇಟ್: ಜೂ.12ವರೆಗೂ ದಂಡವಿಲ್ಲ
ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡ ದ್ವಿಚಕ್ರ ತ್ರಿಚಕ್ರ, ಲಘು, ಮಧ್ಯಮ, ಭಾರಿ ಕಾರು ಸೇರಿ ಎಲ್ಲಾ ವಾಹನಗಳಿಗೆ ನಿಯಮ ಅನ್ವಯವಾಗಲಿದೆ. ಆದ್ರೂ ಇಲ್ಲಿಯವರೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ 35 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಇನ್ನೂ 1.54 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಸಬೇಕಿದೆ.
ಈಗಾಗಲೇ ಸಾರಿಗೆ ಇಲಾಖೆ ಮೂರು ಬಾರಿ ಡೆಡ್ಲೈನ್ ವಿಸ್ತರಣೆ ಮಾಡಿದೆ. ಇದೀಗ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಒಂದು ದಿನವಷ್ಟೇ ಬಾಕಿ ಇದೆ. ಆದ್ರೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋಡುತ್ತಿಲ್ಲ. ಜೂನ್ 13 ರಿಂದ ನಂಬರ್ ಪ್ಲೇಟ್ ಆಳವಡಿಸಿಕೊಳ್ಳದ ವಾಹನ ಸವಾರರಿಗೆ ಭಾರೀ ಶಾಕ್ ಕಾದಿದೆ.
HSRP ನಂಬರ್ ಪ್ಲೇಟ್ ಅಳವಡಿಸದವರಿಗೆ ಗುಡ್ ನ್ಯೂಸ್ ನೀಡುತ್ತಾ ಕರ್ನಾಟಕ ಸರ್ಕಾರ?
ಜೂನ್ 13 ರಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಮೊದಲ ಬಾರಿಗೆ 500 ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ 1000 ದಂಡಕ್ಕೆ ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲಾ ವಾಹನಗಳಿಗೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡೋಕೆ ಸಾರಿಗೆ ಇಲಾಖೆ ಹೊರಟಿದೆ. ಹೀಗಾಗಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಮೊದಲು ನವೆಂಬರ್ 17 ಕ್ಕೆ ಗಡುವು ನೀಡಿತ್ತು. ಆದ್ರೆ ವಾಹನ ಸವಾರರು ನಿರಾಸಕ್ತಿ ತೋರಿದ ಕಾರಣ ಫೆಬ್ರವರಿ 17 ವಗೆಗೆ ವಿಸ್ತರಣೆ ಮಾಡಲಾಗಿತ್ತು. ಬಳಿಕ ಮೇ 31 ವರೆಗೂ ಅವಧಿ ವಿಸ್ತರಣೆ ಮಾಡಲಾಗೊತ್ತು. ಆದ್ರೆ ನಿಗದಿಪಡಿಸಿರೋ ಗಡುವು ಅಂತ್ಯವಾಗಲು ಇನ್ನೊಂದು ದಿನವಷ್ಟೇ ಬಾಕಿ ಇದೆ. ಹೀಗಾಗಿ ಇನ್ಮೇಲೆ ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ. ಬೇಗನೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಸಿಕೊಳ್ಳುವಂತೆ ಮತ್ತೊಮ್ಮೆ ಸಾರಿಗೆ ಇಲಾಖೆ ಮನವಿ ಮಾಡಿಕೊಂಡಿದೆ.HSRP ನಂಬರ್ ಪ್ಲೇಟ್ ಇಲ್ಲವಾದಲ್ಲಿ ಇನ್ಮೇಲೆ ದಂಡ ಕಟ್ಟಲೇಬೇಕು.