Asianet Suvarna News Asianet Suvarna News

Siddheshwar Swamijiಗೆ ಗಾಯ, ಕೊಲ್ಹಾಪುರದ ಕನ್ನೇರಿಮಠದ ಆಸ್ಪತ್ರೆಗೆ ಶಿಫ್ಟ್

* ಜಾರಿ ಬಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ 
* ಚಪ್ಪೆ ಭಾಗಕ್ಕೆ  ಗಂಭೀರ ಗಾಯ
*  ಕನ್ನೇರಿ ಮಠದ ಆಸ್ಪತ್ರೆಗೆ ದಾಖಲು

Jnanayogi Sri Siddheshwar Swamiji hospitalized Over Legg injured after Slipped rbj
Author
Bengaluru, First Published Jan 11, 2022, 2:05 PM IST
  • Facebook
  • Twitter
  • Whatsapp

ಚಿಕ್ಕೋಡಿ,ವಿಜಯಪುರ  (ಜ.11): ವಿಜಯಪುರದ (Vijayapura) ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Jnanayogi Sri Siddheshwar Swamiji) ಅವರು ಜಾರಿ ಬಿದ್ದು ಗಾಯಗೊಂಡಿದ್ದಾರೆ.

ಸ್ನಾನ ಗೃಹದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಸಿದ್ದೇಶ್ವರ ಸ್ವಾಮೀಜಿ ಅವರ ಚಪ್ಪೆ ಭಾಗಕ್ಕೆ ಗಂಭೀರ ಪ್ರಮಾಣದ ಗಾಯವಾಗಿದೆ. ಈ ಹಿನ್ನೆಲೆಯ್ಲಲಿ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಳನ್ನು ಕೊಲ್ಹಾಪುರ ಜಿಲ್ಲೆಯ  ಕನ್ನೇರಿ ಮಠದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕೋಡಿ ತಾಲೂಕಿನ ಕೇರೂರು‌ ಗ್ರಾಮದಲ್ಲಿ ಇಂದಿನಿಂದ ಆಧ್ಯಾತ್ಮಿಕ ಪ್ರವಚನ ನೀಡಲು ಸಿದ್ದೇಶ್ವರ ‌ಸ್ವಾಮೀಜಿ ವಿಜಯಪುರದಿಂದ ಆಗಮಿಸಿದ್ದರು. ಮೊದಲನೆಯ ದಿನವಾದ ಇಂದು(ಮಂಗಳವಾರ) ಹೀರೆಕೊಡಿಯ ಮಗದುಮ್ಮ ಫಾರ್ಮ್ ಹೌಸ್​​ನಲ್ಲಿ ತಂಗಿದ್ದರು. ಈ ವೇಳೆ ಸ್ನಾನದ ಗೃಹಕ್ಕೆ ಹೋಗಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಚಪ್ಪೆ ಭಾಗಕ್ಕೆ ಪೆಟ್ಟಾಗಿದೆ.

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕನ್ನೇರಿಮಠದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.  ಇತ್ತ ಶ್ರೀಗಳಿಗೆ ಗಾಯವಾದ ಹಿನ್ನೆಲೆ ಕೇರೂರ ಗ್ರಾಮದಲ್ಲಿ ನಡೆಯಬೇಕಿದ್ದ ಪ್ರವಚನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಇನ್ನು ಶ್ರೀಗಳು ಬೇಗ ಗುಣಮುಖರಾಗಲೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಪ್ರಾರ್ಥಿಸಿದ್ದಾರೆ.

ಸಿಎಂ ಬೊಮ್ಮಾಯಿ ಪ್ರಾರ್ಥನೆ
ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಆಕಸ್ಮಿಕವಾಗಿ ಬಿದ್ದು ಕಾಲಿಗೆ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದು, ಈ ಕುರಿತು ಸ್ವಾಮೀಜಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್
ನನ್ನೆಲ್ಲಾ ಕೆಲಸಗಳಿಗೂ ಸಲಹೆ, ಮಾರ್ಗದರ್ಶನ  ಹಾಗೂ ಪ್ರೇರಣೆ ನೀಡುತ್ತಿದ್ದ ಪೂಜ್ಯ ಗುರುಗಳಾದ  ಶ್ರೀ ಸಿದ್ದೇಶ್ವರ ಶ್ರೀಗಳು ಆಯತಪ್ಪಿ  ಬಿದ್ದು ಕಾಲಿಗೆ ಪೆಟ್ಟಾಗಿರುವ ಸುದ್ದಿಕೇಳಿ ತೀವ್ರ ಆಘಾತ ಹಾಗೂ ದುಃಖವಾಗಿದೆ. ಗುರುಗಳ ಕ್ಷೇಮದ ಬಗ್ಗೆ ಮಾಹಿತಿ ಪಡೆದುಕೊಂಡಿರುವೆ.  ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Follow Us:
Download App:
  • android
  • ios